More

    ಬದುಕು ನಿತ್ಯ ಸಂಭ್ರಮದ ಆಚರಣೆ: ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಅಭಿಮತ

    ತುಮಕೂರು: ಬದುಕು ನಿತ್ಯ ಸಂಭ್ರಮದ ದಿವ್ಯ ಆಚರಣೆ. ಅದಕ್ಕೆ ಪೂರಕವಾಗಿ ನಮ್ಮ ಜೀವನವನ್ನು ಕಟ್ಟಿಕೊಳ್ಳೋಣ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಹೇಳಿದರು.

    ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ಆಡಳಿತ ನಿರ್ವಹಣಾಶಾಸ್ತ್ರ ವಿಭಾಗ ಹಾಗೂ ಸಮಾಜಕಾರ್ಯ ವಿಭಾಗಗಳು ಗುರುವಾರ ಆಯೋಜಿಸಿದ್ದ ಸಂಕಲ್ಪ-2022 ನಮ್ಮ ಹಬ್ಬ ಕಾಲೇಜು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ವಿದ್ಯಾರ್ಥಿಗಳು ಸತ್ಯ, ಮಾನವೀಯತೆ, ಪ್ರಾಮಾಣಿಕತೆ, ವಿನಯವಂತಿಕೆ, ಒಳ್ಳೆ ಹವ್ಯಾಸ ಹಾಗೂ ಹಾಸ್ಯಾದಿ ಗುಣಗಳನ್ನು ರೂಢಿಸಿಕೊಂಡು ಉತ್ತಮ ಮಾನವರಾಗಬೇಕು ಎಂದು ತಿಳಿಸಿದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿವಿ ನೂತನ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಕ್ಷಣ ಸಂಸ್ಥೆಗಳು ಚಟುವಟಿಕೆಗಳಿಂದ ಕೂಡಿದ್ದಾಗ ಹಬ್ಬದ ವಾತಾವರಣ ಇರುತ್ತದೆ. ಇದು ನಿರಂತರವಾಗಿದ್ದರೆ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುತ್ತಾರೆ ಎಂದರು.


    ನಾವು ಕ್ರಿಯಾಶೀಲರಾಗಿದ್ದಾಗ ಯಾವುದೂ ಅಸಾಧ್ಯವಲ್ಲ. ವಿದ್ಯಾರ್ಥಿ ಜೀವನವನ್ನು ಗರಿಷ್ಠ ಮಟ್ಟದಲ್ಲಿ ಧನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕುಲಸಚಿವ ಪ್ರೊ ಕೆ ಶಿವಚಿತ್ತಪ್ಪ ಸಲಹೆಯಿತ್ತರು.

    ಕರೊನಾದಿಂದ ಸೃಷ್ಟಿಯಾಗಿರುವ ನಿಸ್ತೇಜ ವಾತಾವರಣದಲ್ಲಿ ಮತ್ತೆ ಸಂಭ್ರಮ, ಕಳೆ ಮೂಡುವಂತಾಗಬೇಕು. ಸಂಕಲ್ಪದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸುವುದರ ಜತೆಗೆ ಓದಿಗೆ ಪೂರಕವಾಗಿರಲಿದೆ ಎಂದು ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ ಬಿ. ಕರಿಯಣ್ಣ ಹೇಳಿದರು.

    ಗುರು ಶಿಷ್ಯರ ನಡುವಿನ ಸಂಬಂಧ ನಾಶ: ವರ್ಚುಯಲ್ ವ್ಯಾಸಂಗ ವ್ಯವಸ್ಥೆ ಬಂದು ಗುರು ಶಿಷ್ಯರ ನಡುವಿನ ಸಂಬಂಧ ನಾಶವಾಗುತ್ತಿದೆ. ಅವುಗಳ ಪುನಶ್ಚೇತನಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ. ವಿದ್ಯಾರ್ಥಿಗಳ ಆದ್ಯತೆಗಳನ್ನು ಪೂರ್ಣಗೊಳಿಸುವುದೇ ನನ್ನ ಉದ್ದೇಶ. ನಾನೊಬ್ಬನೇ ಅಲ್ಲದೆ ಎಲ್ಲರನ್ನೂ ಒಳಗು ಮಾಡಿಕೊಂಡು ಕಾರ್ಯಸಾಧನೆ ಮಾಡುತ್ತೇನೆ ಎಂದರು.


    ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸದಿದ್ದರೆ ಪ್ರಯೋಜನವಿಲ್ಲ. ಸಿಗುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧಿಸಬೇಕು. ಏಕೆಂದರೆ ಕಾಲವನ್ನು ಖರೀದಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಖ್ಯಾತ ರಂಗಕರ್ಮಿ ಜನಾರ್ದನ ಜನ್ನಿ ಹೇಳಿದರು.


    ಶಿಕ್ಷಣದಿಂದ ನಾವು ಕಲಿಯಬೇಕಾದದ್ದು ಪ್ರಮುಖವಾಗಿ ಮಾನವೀಯ ಸಂವೇದನೆಯನ್ನು. ತಲೆಯ ತುಂಬ ಹಿಂಸಾ ಪ್ರವೃತ್ತಿಯ ಕಸ ತುಂಬಿಕೊಳ್ಳದೆ ಸ್ವಾಭಿಮಾನ, ಸಹೋದರತ್ವದಿಂದ ಬಾಳುವ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಹೃದಯ ಸಂವೇದಿಯಾಗಿರಬೇಕು. ಇತರರಿಗೂ ಅನುಕೂಲ ಮಾಡಿಕೊಡುವ ಮನೋಧರ್ಮ ನಮ್ಮದಾಗಬೇಕು.
    | ಡಾ.ಸಿ.ಸೋಮಶೇಖರ್ ಅಧ್ಯಕ್ಷ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts