More

    ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ; ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ, ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ

    ತುಮಕೂರು: ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ಹಿನ್ನೆಲೆಯಲ್ಲಿ ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ, ಗದ್ದುಗೆಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ.

    ಶ್ರೀ ಮಠದಲ್ಲಿ ಪೂಜಾ‌ ಕಾರ್ಯಕ್ರಮಗಳು ಆರಂಭವಾಗಿವೆ. ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

    ಹಳೇ ಮಠದಲ್ಲಿ ಸಿದ್ದಲಿಂಗ ಶ್ರೀಗಳಿಂದ ಶಿವಪೂಜೆ ಪೂಜೆ ಬಳಿಕ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದರು. ಗದ್ದುಗೆ ಪೂಜೆ ಬಳಿಕ ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭಗೊಂಡಿದೆ.

    ಗದ್ದುಗೆಯಲ್ಲಿ ಶ್ರೀಗಳ ಬೆಳ್ಳಿಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಸಿದ್ದಗಂಗಾ‌ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಲಿದೆ. ಅಷ್ಟೋತ್ತರ ಪೂಜೆ‌ ನೆರವೇರಿಸಲಾಯಿತು. ಸಿದ್ದಲಿಂಗ ಶ್ರೀಗಳ ಜತೆ ವಿವಿಧ ಪೀಠಗಳ ಮಠಾಧೀಶರು ಭಾಗಿಯಾಗಿದ್ದಾರೆ.

    ಡಾ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಹಳೇ ಮಠದಲ್ಲಿ ಶಿವಕುಮಾರ ಶ್ರೀಗಳ ಪೂಜಾ‌ ಸ್ಥಳದಲ್ಲಿ ಬೆಳ್ಳಿ ಪ್ರತಿಮೆಯಿಟ್ಟು ಶಿವಪೂಜೆ ಪೂಜೆ‌ ಮಾಡಲಾಯಿತು.‌ ಬಳಿಕ‌ ಗದ್ದುಗೆಗೆ ಬೆಳ್ಳಿ ‌ಪುತ್ಥಳಿಯನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts