More

    ಲಕ್ವ ಹೊಡೆದಂತಿದೆ ಪಾಲಿಕೆ ಆಡಳಿತ: ಜ್ಯೋತಿಗಣೇಶ್ ಗುಡುಗು

    ತುಮಕೂರು: ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಪಾರ್ಶ್ವವಾಯು ಹೊಡೆದಂತಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಸಮಾಧಾನ ಹೊರಹಾಕಿದರು.

    ನಗರದ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಮಳೆಹಾನಿ, ಚರಂಡಿ ಹೂಳೆತ್ತುವುದು, ರಾಜಗಾಲುವೆ ಒತ್ತುವರಿ ತೆರವು ಹಾಗೂ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಹಿಸುವ ಸಂಬಂಧ ಕರೆಯಲಾಗಿದ್ದು ತುರ್ತುಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪಾಲಿಕೆ ಆಡಳಿತ ಹಾದಿ ತಪ್ಪಿದ್ದು ಮತ್ತೆ ಹಳಿಗೆ ತರಬೇಕಿದೆ. ಇನ್ನೂ ಅಧಿಕಾರಿಗಳು ಆ ಮನಸ್ಥಿತಿಯಿಂದ ಹೊರಬಂದಿಲ್ಲವೆಂದು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

    ಯುದ್ಧ ಕಾಲೇ ಶಸ್ತ್ರಾಭ್ಯಾಸ: 4 ದಶಕಗಳಲ್ಲಿ ಕಾಣದಂತಹ ರಣಭೀಕರ ಮಳೆ ಕಳೆದ ವರ್ಷ ಬಿದ್ದಿದ್ದು ಆ ಸಂದರ್ಭದಲ್ಲಿ ಆದ ಅನಾಹುತಗಳ ನಿದರ್ಶನ ಕಣ್ಮುಂದೆ ಇದ್ದರು ಪಾಲಿಕೆ ಅಧಿಕಾರಿಗಳು ಮಳೆಗಾಲಕ್ಕೆ ಮುನ್ನವೇ ಅಗತ್ಯ ಕ್ರಮವಹಿಸಿದೆ ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಮಳೆ ಆರಂಭವಾದ ಮೇಲೆ ಮುಂಜಾಗ್ರತ ಕ್ರಮವಹಿಸುತ್ತಾರೆ ಎಂದು ಜ್ಯೋತಿಗಣೇಶ್ ಹರಿಹಾಯ್ದರು.

    ಚುನಾವಣೆ ಬಳಿಕ ಬಿದ್ದ ಸಣ್ಣ ಮಳೆ ತುಮಕೂರು ನಗರದ ಅವ್ಯವಸ್ಥೆಯನ್ನು ಬಯಲುಮಾಡಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದರೂ ದೊಡ್ಡ ಚರಂಡಿ ಹೂಳೆತ್ತುವುದು, ಮಳೆ ನೀರು ಹರಿಯುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ತೆಗೆದುಕೊಂಡಿಲ್ಲ. ಇನ್ನೂ ಹೂಳೆತ್ತುವ ಬಿಲ್ ಹಣ ಪಾವತಿಸದೇ ಇರುವ ಸಮಸ್ಯೆಯು ಇದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಯಗಾಲುವೆಗಳನ್ನು ಸ್ವಚ್ಛಗೊಳಿಸುವುದು, ಒತ್ತುವರಿ ತೆರವುಗೊಳಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.

    ಮೇಯರ್ ಎಂ.ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಆಯುಕ್ತ ಎಚ್.ವಿ.ದರ್ಶನ್, ಸ್ಥಾಯಿಸಮಿತಿ ಅಧ್ಯಕ್ಷರಾದ ವೀಣಾ, ಬಿ.ಎಸ್.ಮಂಜುನಾಥ್, ವಿಪಕ್ಷ ನಾಯಕ ವಿಷ್ಣುವರ್ಧನ್, ಸದಸ್ಯರಾದ ಜೆ.ಕುಮಾರ್, ಸೈಯದ್ ನಯಾಜ್, ಎಚ್.ಮಲ್ಲಿಕಾರ್ಜುನಯ್ಯ, ಎ.ಶ್ರೀನಿವಾಸ್, ನಳಿನಾ, ಫರಿದಾಬೇಗಂ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts