More

    ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

    ತುಮಕೂರು: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಯಿಂದ ಹೆಚ್ಚು ಮಳೆಯಾಗಿದ್ದು ಪೂರ್ವ ಮುಂಗಾರು ಚಟುವಟಿಕೆಗಳಿಗೆ ಚುರುಕುಬಂದಿದೆ.

    ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 44.7 ಮಿಮೀ., ಗುಬ್ಬಿಯಲ್ಲಿ 35.2 ಮಿಮೀ), ಕೊರಟಗೆರೆ : 5.8, ಕುಣಿಗಲ್: 9.4, ಮಧುಗಿರಿ : 23.5, ಪಾವಗಡ : 24.2, ಶಿರಾ: 42.5, ತಿಪಟೂರು : 58.3, ತುಮಕೂರು : 23.7, ತುರುವೇಕೆರೆ 44 ಮಿಮೀ ವಾಸ್ತವ ಮಳೆಯಾಗಿದೆ.

    ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬಿತ್ತನೆ ಕಾರ್ಯ ಏಪ್ರಿಲ್‌ನಲ್ಲಿಯೇ ಪ್ರಾರಂಭವಾಗಬೇಕಿತ್ತು. ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂಗಾರು ಬಿತ್ತನೆಗಾಗಿ ಭೂಮಿ ಹದಗೊಳಿಸುವ ಕಾರ್ಯ ಸಾಗಿದೆ.

    ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನ ಬಿತ್ತನೆಗಾಗಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲು 163.40 ಕ್ವಿಂಟಾಲ್ ಹೆಸರುಕಾಳು, 118.80 ಕ್ವಿಂಟಾಲ್ ಅಲಸಂದೆ, 7.20 ಕ್ವಿಂಟಾಲ್ ಉದ್ದು, 13.2 ಕ್ವಿಂಟಾಲ್ ತೊಗರಿ ಸೇರಿದಂತೆ ಒಟ್ಟು 302.60 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.

    ಹಂಗಾಮಿನಲ್ಲಿ ಜಿಲ್ಲೆಯ 21,042 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಧಾರಿತ ಹಾಗೂ 2,99,413 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಆಧಾರಿತ ಸೇರಿ ಒಟ್ಟು 3.20ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಖ್ಯ ಬೆಳೆಗಳಾದ ಭತ್ತ, ರಾಗಿ, ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳಗಳ ಬಿತ್ತನೆ ಗುರಿ ಹೊಂದಲಾಗಿದೆ.

    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 70,263 ಮೆ.ಟನ್ ರಸಗೊಬ್ಬರದ ಬೇಡಿಕೆ ಇದ್ದು, 39,619 ಮೆ.ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಈವರೆಗೆ 3845 ಮೆ.ಟನ್ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts