More

    ಕ್ಷಯ ರೋಗಿಗಳಿಗೆ ಸರ್ಕಾರದಿಂದ ಸಹಾಯಧನ: ಡಿಎಚ್‌ಒ ಡಾ.ಟಿ.ಎನ್.ಧನಂಜಯ ಮಾಹಿತಿ

    ಮಂಡ್ಯ: ಕ್ಷಯರೋಗ ಒಂದು ಪುರಾತನವಾದ ಕಾಯಿಲೆ. ಇನ್ನು ಪೌಷ್ಠಿಕಾಂಶದ ಕೊರತೆಯಿಂದ ಅನೇಕ ಜನರು ಈ ಕಾಯಿಲೆಯಿಂದ ನರಳುತ್ತಿರುವುದು ಪ್ರಮುಖ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.
    ನಗರದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಸೌಲಭ್ಯವನ್ನು ಒದಗಿಸಲು ಸ್ಥಳೀಯ ಸ್ವಯಂ ಸಂಘ ಸಂಸ್ಥೆಗಳು, ದಾನಿಗಳ ಮೂಲಕ ಪೌಷ್ಠಿಕ ಆಹಾರ ಕಿಟ್ ತಯಾರಿಸಿ ನೀಡಲಾಗುತ್ತಿದೆ. ಅಂತೆಯೇ ಸರ್ಕಾರದಿಂದ ಕ್ಷಯರೋಗಿಗಳಿಗೆ ನಿತ್ಯ ಪೋಷಣೆ ಯೋಜನೆಯಡಿ ಆರು ತಿಂಗಳವರಗೆ 500 ರೂನಂತೆ ಸಹಾಯಧನವನ್ನು ನೀಡಲಾಗುತ್ತಿದೆ. 2025ರ ವೇಳೆಗೆ ಕ್ಷಯ ರೋಗವನ್ನು ದೇಶದಲ್ಲಿ ಕೊನೆಗಾಣಿಸಿ ಕ್ಷಯಮುಕ್ತ ಭಾರತ ಎಂದು ಘೋಷಿಸುವ ಗುರಿಯನ್ನು ಹೊಂದಲಾಗಿದೆ. ಎಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
    ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಡಾ.ಎಂ.ಎನ್.ಆಶಾಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts