More

    ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ

    ಸಿರಗುಪ್ಪ: ಕ್ಷಯರೋಗವನ್ನು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ. ಯಾರೂ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬಾರದು. ರೋಗಿಗಳು ಪೂರ್ಣ ಗುಣಮುಖರಾಗುವರೆಗೂ ಆರೋಗ್ಯ ಸಿಬ್ಬಂದಿ ನೋಡಿಕೊಳ್ಳಬೇಕೆಂದು ತಾಲೂಕು ನೋಡಲ್ ಅಧಿಕಾರಿ ಡಾ.ವೀರೇಂದ್ರಕುಮಾರ್ ಹೇಳಿದರು.

    ಕ್ಷಯರೋಗವನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು

    ನಗರದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕ್ಷಯರೋಗ ಆರೈಕೆ ಮತ್ತು ಬೆಂಬಲ ಗುಂಪು ಸಭೆಯಲ್ಲಿ ಮಾತನಾಡಿದರು. ಸರ್ಕಾರವು ಕ್ಷಯರೋಗ ಚಿಕಿತ್ಸೆಗಾಗಿ ಪೌಷ್ಟಿಕ ಆಹಾರ ನೀಡುವ ಉದ್ದೇಶ ಹೊಂದಿದೆ. ಹಾಗಾಗಿ ನಿಕ್ಷಯ ಪೌಷ್ಟಿಕ ಯೋಜನೆಯಡಿ ಮಾಸಿಕ 500 ರೂ.ಗಳನ್ನು ನೀಡುತ್ತಿದೆ. ಅಲ್ಲದೆ ನಿಕ್ಷಯ ಮಿತ್ರ ಕಾರ್ಯಕ್ರಮದಡಿ ಕ್ಷಯ ರೋಗಿಗಳ ಪೌಷ್ಟಿಕ ಆಹಾರಕ್ಕಾಗಿ ದಾನಿಗಳು ಸಹಾಯ ಮಾಡಬಹುದಾಗಿದೆ. ಈಗಾಗಲೇ ಹಲವಾರು ದಾನಿಗಳು ಪೌಷ್ಟಿಕ ಆಹಾರ ಕಿಟ್‌ಗಳನ್ನು ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆಯಲಿದೆ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆ?

    ಕೆ.ಎಚ್.ಪಿ.ಟಿ. ತಾಲೂಕು ಸಂಯೋಜಕಿ ಸುನೀತಾ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ ಖಾಸೀಂ ಮಾತನಾಡಿದರು. ತಾಲೂಕು ನೋಡಲ್ ಅಧಿಕಾರಿ ಡಾ.ವೀರೇಂದ್ರಕುಮಾರ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ ಖಾಸೀಂ, ಕ್ಷಯರೋಗ ಪರಿವೀಕ್ಷಕ ಹುಲುಗಪ್ಪ, ಪ್ರಯೋಗ ಶಾಲೆ ಮೇಲ್ವಿಚಾರಕ ಆನಂದ ಅಬ್ಬಿಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts