More

    ಸರ್ಕಾರಿ ಬಸ್​ ಚಾಲಕನ ಜೂನ್​ ತಿಂಗಳ ಸಂಬಳ ಕೇವಲ 49 ರೂ.!

    ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್​ಆರ್​ಟಿಸಿ) ಸಂಗಾರೆಡ್ಡಿ ಬಸ್​ ಡಿಪೋವಿನ ಚಾಲಕರೊಬ್ಬರು 49 ರೂ. ಜೂನ್​ ತಿಂಗಳ ಸಂಬಳ ಸ್ವೀಕರಿಸುವ ಮೂಲಕ ಶಾಕ್​ಗೆ ಒಳಗಾಗಿದ್ದಾರೆ. ಅಲ್ಲದೆ, ಅದೇ ಡಿಪೋವಿನ ಇನ್ನುಳಿದ ಚಾಲಕರು 60 ಮತ್ತು 1600 ರೂ. ಸಂಬಳವನ್ನು ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಜಗಳವಾಡಿ ಮನೆ ಬಿಟ್ಟು ಹೋದ ಬಾಲಕಿಯನ್ನು ಡ್ರಾಪ್ ನೆಪದಲ್ಲಿ ರೇಪ್​ ಮಾಡಿ ಕೊಲೆಗೈದ ದಂಪತಿ

    ಸಂಗಾರೆಡ್ಡಿ ಡಿಪೋವಿನ ಸುಮಾರು 20 ಮಂದಿ 100 ರೂ. ಗಿಂತಲೂ ಹಾಗೂ 50 ಮಂದಿ 1000 ರೂ.ಗಿಂತಲೂ ಕಡಿಮೆ ಸಂಬಳ ಪಡೆದಿದ್ದಾರೆ. ಸಂಗಾರೆಡ್ಡಿ ಡಿಪೋ ಮಾತ್ರವಲ್ಲ ಭದ್ರಾಚಲಂ ಡಿಪೋವಿನ 400 ಮಂದಿ, ಮೆಡ್ಚಲ್​ ಮತ್ತು ಮೆಹದಿಪಟ್ಟಣಂ ಡಿಪೋವಿನ ಸಿಬ್ಬಂದಿಯು ಸಹ ಭಾರಿ ಸಂಬಳ ಕಡಿತವನ್ನು ಅನುಭವಿಸಿದ್ದಾರೆ.

    ಸರ್ಕಾರವು ನೌಕರರ ಸಂಬಳದಲ್ಲಿ ಶೇ. 50 ರಷ್ಟು ಕಡಿತಗೊಳಿಸಿದ ಮೂರು ತಿಂಗಳ ನಂತರ ಟಿಎಸ್​ಆರ್​ಟಿಸಿ ನೌಕರರು ಪೂರ್ಣ ಸಂಬಳಕ್ಕಾಗಿ ಎದುರು ನೋಡುತ್ತಿದ್ದಾರೆ. ನಾವು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರೂ ಸಹ ಗೈರಾಗಿದ್ದಾರೆ ಎಂದು ವರದಿ ನೀಡಿ ವೇತನ ನಷ್ಟ ಅಡಿಯಲ್ಲಿ ಸಂಬಳ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಲಾಕ್​ಡೌನ್​ ಘೋಷಣೆಯಾದ ಬಳಿಕ ಮೇ 21 ರಿಂದ ರಾಜ್ಯದಲ್ಲಿ ಬಸ್​ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ತದನಂತರದಲ್ಲಿ ಜಿಲ್ಲೆಗಳಲ್ಲಿ ಬಸ್​ ಸೇವೆ ನೀಡಲು ಅನುಮತಿ ನೀಡಿತ್ತು. ಸದ್ಯ ಸುಮಾರು 4 ಸಾವಿರ ಬಸ್​ ಪ್ರತಿದಿನ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ. ಕಡಿಮೆ ಪ್ರಯಾಣಿಕರ ಕಾರಣದಿಂದಾಗಿ ಕೆಲವೇ ಬಸ್​ಗಳು ಓಡಾಡುತ್ತಿವೆ. ಅನೇಕ ಬಸ್​ ಚಾಲಕರು ಕರ್ತವ್ಯಕ್ಕೆ ಹಾಜರಾದರೂ ಸಹ ಕೆಲಸವಿಲ್ಲದೇ ವಾಪಸ್​ ಕಳುಹಿಸಲಾಗುತ್ತಿದೆ.

    ಇದನ್ನೂ ಓದಿ: ಕರೊನಾ ಸೋಂಕಿತನ ಬಾಯಿಗೆ ಬಾಯಿ ಇಟ್ಟ ಜನ್ರು ಬರಿಗೈಯಲ್ಲಿ ಕಿರುನಾಲಿಗೆಯನ್ನೂ ತಿಕ್ಕಿದ್ರು!

    ಯಾರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಅವರಿಗೆ ಸಾಮಾನ್ಯ ರಜೆಗೆ ಅರ್ಜಿ ಸಲ್ಲಿಸಲು ಹೇಳಿದೆ. ಯಾರು ರಜೆಗೆ ಅರ್ಜಿ ನೀಡಿಲ್ಲವೋ ಅವರನ್ನು ಮಾತ್ರ ಗೈರು ಎಂದು ಪರಿಗಣಿಸಲಾಗಿದೆ. ಇತ್ತ ಕೆಲಸಕ್ಕೆ ಹಾಜರಾದರೂ ಕಡಿಮೆ ಸಂಬಳ ಬಂದಿರುವುದು ನೌಕರರ ತಳಮಳಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ಕರೊನಾ ಬಿಕ್ಕಟ್ಟಿಗೆ ಭಾರತದ ಪ್ರಾಚೀನ ಜ್ಞಾನದಲ್ಲಿದೆ ಪರಿಹಾರ: ಪ್ರಿನ್ಸ್ ಚಾರ್ಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts