More

    ಟಿಕ್​ಟಾಕ್​ ಡೀಲ್​ಗೆ ಟ್ರಂಪ್​ ಷರತ್ತು, ಪೂರ್ತಿ ಅವರಿಬ್ಬರ ಕಂಟ್ರೋಲ್​ನಲ್ಲಿದ್ರೆ ಮಾತ್ರ ಓಕೆ!

    ವಾಷಿಂಗ್ಟನ್​: ಚೀನಾ ಮೂಲದ ವಿಡಿಯೋ ಶೇರಿಂಗ್ ಆ್ಯಪ್​ ಅಮೆರಿಕದಲ್ಲಿ ಚಾಲ್ತಿಯಲ್ಲಿ ಇರಬೇಕಾದರೆ ನನ್ನ ಷರತ್ತಿಗೆ ಒಪ್ಪಲೇಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ತಾಕೀತು ಮಾಡಿದ್ದಾರೆ.

    ಚೀನಾದ ಬಹಳಷ್ಟು ಆ್ಯಪ್​ಗಳು ಜಗತ್ತಿನ ಹಲವೆಡೆ ನಿಷೇಧಕ್ಕೆ ಒಳಗಾದ ಬಳಿಕ ಅಂಥವುಗಳಲ್ಲಿ ಒಂದಾಗಿರುವ ಟಿಕ್​ಟಾಕ್ ಆ್ಯಪ್​ ಖರೀದಿಸಲು ಆಯಾ ದೇಶಗಳಲ್ಲಿನ ಕಂಪನಿಗಳು ಮುಂದಾಗಿವೆ. ಆ ನಿಟ್ಟಿನಲ್ಲಿ ಅಮೆರಿಕದಲ್ಲೂ ಮಾತುಕತೆ ನಡೆಯುತ್ತಿದೆ.

    ಅಮೆರಿಕದಲ್ಲಿ ಟಿಕ್​ಟಾಕ್​ ಮೇಲೆ ಒರಾಕಲ್​ ಹಾಗೂ ವಾಲ್​ಮಾರ್ಟ್​ ಕಂಪನಿಗಳಿಗೆ ಪೂರ್ತಿ ನಿಯಂತ್ರಣ ಸಿಗುವುದಾದರೆ ಮಾತ್ರ ಮಾರಾಟದ ಡೀಲ್​ಗೆ ಅವಕಾಶ ನೀಡಲಾಗುವುದು ಎಂದು ಟ್ರಂಪ್ ಷರತ್ತು ವಿಧಿಸಿದ್ದಾರೆ.

    ಅಮೆರಿಕದಲ್ಲಿ ಸೆ. 20ರಿಂದಲೇ ಅನ್ವಯಿಸುವಂತೆ ಟಿಕ್​ಟಾಕ್​ಗೆ ನಿಷೇಧ ಹೇರಲಾಗಿದೆ. ಹೀಗಾಗಿ ಟಿಕ್​ಟಾಕ್​ಅನ್ನು ಅಮೆರಿಕಕ್ಕೆ ಮಾರುವುದೊಂದೇ ಟಿಕ್​ಟಾಕ್​ನ ಸ್ಥಾಪಕ ಸಂಸ್ಥೆ ಬೈಟ್​ಡಾನ್ಸ್​ಗೆ ಇರುವ ದಾರಿ. ಈ ಹಿನ್ನೆಲೆಯಲ್ಲಿ ಟ್ರಂಪ್​ ಈ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts