More

    44 ಸಾವಿರ ರೂಪಾಯಿಗೆ ‘ಟ್ರಂಪ್​ ಬುದ್ಧ’ ಸೇಲ್​! ಇದನ್ನು ಕೊಳ್ಳಿ ನಿಮ್ಮ ಕಚೇರಿಯನ್ನು ಮತ್ತೆ ಗ್ರೇಟ್​ ಮಾಡಿ!

    ಬೀಜಿಂಗ್​: ಬುದ್ಧನ ಪ್ರತಿಮೆಯನ್ನು ನೀವೆಲ್ಲರೂ ನೋಡಿರುತ್ತೀರಿ. ಅದೇ ರೀತಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರ ಫೋಟೋವನ್ನೂ ನೋಡಿರುತ್ತೀರಿ. ಈಗ ಬುದ್ಧನ ಪ್ರತಿಮೆ ಮತ್ತು ಟ್ರಂಪ್​ನ ಫೋಟೋವನ್ನು ಸೇರಿಸಿಬಿಟ್ಟರೆ?

    ಇಂತದ್ದೊಂದು ವಿಚಿತ್ರ ಪ್ರಯತ್ನವನ್ನು ಚೀನಾದ ಪೀಠೋಪಕರಣ ತಯಾರಕನೊಬ್ಬ ಮಾಡಿದ್ದಾನೆ. ಬುದ್ಧನ ರೀತಿ ಕಾಲುಗಳನ್ನು ಹಾಕಿಕೊಂಡು ಕುಳಿತುಕೊಂಡಿರುವ ಡೊನಾಲ್ಡ್​ ಟ್ರಂಪ್​ನ ಪ್ರತಿಮೆಯನ್ನು ಆತ ನಿರ್ಮಿಸಿದ್ದಾನೆ. ಪಿಂಗಾಣಿಯಲ್ಲಿ ಈ ರೀತಿಯ ನೂರಾರು ಪ್ರತಿಮೆಗಳನ್ನು ನಿರ್ಮಿಸಿದ್ದು, ಅದನ್ನು ಆನ್​ಲೈನ್​ನಲ್ಲಿ ಮಾರಾಟಕ್ಕೂ ಇಟ್ಟಿದ್ದಾನೆ.

    ಈ ಪ್ರತಿಮೆಗೆ ಆತ ಒಂದು ಉತ್ತಮ ಕ್ಯಾಪ್ಷನ್​ ಅನ್ನೂ ಕೊಟ್ಟಿದ್ದಾನೆ. ಮೇಕ್​ ಅಮೆರಿಕ ಗ್ರೇಟ್​ ಅಗೇನ್​ ಎನ್ನುವ ಟ್ರಂಪ್​ ಘೋಷಣೆ ಗಮನದಲ್ಲಿಟ್ಟುಕೊಂಡು, ಈ ಪ್ರತಿಮೆಯನ್ನು ನಿಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಿ ಮತ್ತು ಮೇಕ್​ ಯುವರ್​ ಆಫೀಸ್​ ಗ್ರೇಟ್​ ಅಗೇನ್​ ಎಂದು ಕ್ಯಾಪ್ಷನ್​ ಕೊಡಲಾಗಿದೆ. “ಟ್ರಂಪ್ ಬುದ್ಧನಿಗೆ ಬೌದ್ಧ ಧರ್ಮ ಎಲ್ಲರಿಗಿಂತ ಚೆನ್ನಾಗಿ ತಿಳಿದಿದೆ” ಎಂದೂ ಬರೆಯಲಾಗಿದೆ. ಟ್ರಂಪ್​ ಅವರು ಯಾವಾಗಲೂ ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತು ಎನ್ನುತ್ತಿದ್ದುದ್ದನ್ನು ಈ ವಾಕ್ಯ ಸೇರಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.

    ಈ ಪ್ರತಿಮೆ ಎರಡು ಗಾತ್ರಗಳಲ್ಲಿ ಲಭ್ಯವಿದೆ. 4.6 ಮೀಟರ್​ ಉದ್ದದ ಪ್ರತಿಮೆಯನ್ನು ತಲಾ 44,700 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದ್ದರೆ, 1.6 ಮೀಟರ್​ ಉದ್ದದ ಪ್ರತಿಮೆಯನ್ನು 11,100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೆ ನೂರಾರು ಜನರು ಮನೋರಂಜನೆಗಾಗಿ ಈ ಪ್ರತಿಮೆಯನ್ನು ಖರೀದಿಸಿರುವುದಾಗಿ ಕುಶಲಕರ್ಮಿ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ‘ನಾನು ಹೊಡೆದೇ ಇಲ್ಲ, ಅವಳೇ ಚಪ್ಪಲಿಯಲ್ಲಿ ಹೊಡೆದಿದ್ದು.. ಹಿಂದಿಯಲ್ಲಿ ಬೈದಿದ್ದು..’ ಕಥೆಯನ್ನು ಬಿಚ್ಚಿಟ್ಟ ಡೆಲಿವರಿ ಬಾಯ್​

    ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕಾರಿಗಾಗಿ ಕೊಂದನಾ ಪತಿರಾಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts