More

    ಎಷ್ಟೇ ವಯಸ್ಸಾದರೂ ಇನ್ನೂ ಯಂಗ್‌ ಈ ನಟಿ; ತ್ರಿಶಾ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

    ಇತ್ತೀಚೆಗಷ್ಟೇ ವಿಜಯ್ ಜೊತೆ ಲಿಯೋ ಚಿತ್ರದಲ್ಲಿ ನಟಿಸಿದ್ದ ತ್ರಿಶಾ, ಸದ್ಯ ನಟ ಅಜಿತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ಮಣಿರತ್ನಂ ಅವರ ಥಗ್ ಲೈಫ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.. 40ರಲ್ಲೂ ಟೀನ್‌ ಏಜ್‌ ನಾಯಕಿಯಾಗಿ ಹರಿದಾಡುತ್ತಿರುವ ತ್ರಿಷಾ ಇನ್ನೂ ಮದುವೆಯಾಗಿಲ್ಲ.


    ನಟಿ ತ್ರಿಷಾ ಅವರ ಆಸ್ತಿ 85 ಕೋಟಿ ರೂ. ಕಳೆದ ವರ್ಷದವರೆಗೂ ಚಿತ್ರವೊಂದಕ್ಕೆ 3 ಕೋಟಿ ಗಳಿಸುತ್ತಿದ್ದ ತ್ರಿಷಾ, ಪೊನ್ನಿಯ ಸೆಲ್ವನ್ ಚಿತ್ರದ ಯಶಸ್ಸಿನ ನಂತರ ಸಂಭಾವನೆಯನ್ನು 5 ಕೋಟಿಗೆ ಏರಿಸಿಕೊಂಡಿದ್ದಾರೆ.


    ಲಿಯೋ ಚಿತ್ರವೂ ಯಶಸ್ವಿಯಾಗಿರುವುದರಿಂದ ಥಗ್ ಲೈಫ್ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು 10 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ.


    ನಟಿ ತ್ರಿಷಾ ಜಾಹೀರಾತುಗಳಲ್ಲಿ ನಟಿಸುವ ಮೂಲಕ ವರ್ಷಕ್ಕೆ 10 ಕೋಟಿ ರೂ. ಗಳಿಸುತ್ತಿದ್ದಾರೆ.. ಇವರಿಗೆ ಚೆನ್ನೈನಲ್ಲಿ 7 ಕೋಟಿ ರೂ. ಐಷಾರಾಮಿ ಮನೆ ಇದೆ. ಇದಲ್ಲದೇ ತ್ರಿಶಾ ಹೈದರಾಬಾದ್‌ನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.


    ನಟಿ ತ್ರಿಷಾ ಬಳಿ 80 ಲಕ್ಷ ರೂ.ಗಳ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್, ರೂ.75 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸಿರೀಸ್ ಕಾರು, ರೂ.60 ಲಕ್ಷ ಮೌಲ್ಯದ ರೇಂಜ್ ರೋವರ್ ಇವೊಕ್ ಮತ್ತು ರೂ.5 ಕೋಟಿ ಮೌಲ್ಯದ ಬಿಎಂಡಬ್ಲ್ಯು ರೀಗಲ್ ಕಾರ್​​​ಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts