More

    ಜನತಾದರ್ಶನಕ್ಕೆ ಹರಿದು ಬಂದ ಅಹವಾಲುಗಳು..!

    ಬಾಗಲಕೋಟೆ: ಸೀಮಿಕೇರಿ ಗ್ರಾಮದ ಲಡ್ಡುಮುತ್ಯಾ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಅಹವಾಲುಗಳು ಹರಿದು ಬಂದವು. ಜನರು ಸಾಲಿನಲ್ಲಿ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

    ಯಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ ನಾಲತ್ವಾಡ ಅವರು, ಗದ್ದನಕೇರಿ ಕ್ರಾಸ್‌ನಲ್ಲಿ ದಿನನಿತ್ಯ ಸಂಚಾರದ ಸಮಸ್ಯೆ ಉಂಟಾಗುತ್ತಿದೆ.

    ಇದನ್ನೂ ಓದಿ: ಜನತಾದರ್ಶನ ಕಾರ್ಯಕ್ರಮ ಸಮಸ್ಯೆಗೆ ತುರ್ತು ಸ್ಪಂದನೆ

    ಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಮಾರುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಜತೆಗೆ ಸಂಚಾರಕ್ಕೆ ತೊಂದರೆಯಾಗದಂತೆ ಮಾರ್ಗಸೂಚಿ ದೀಪ (ಸಿಗ್ನಲ್) ಅಳವಡಿಸಬೇಕು.

    ಕ್ರಾಸ್‌ಬಳಿ ಪ್ರತ್ಯೇಕ ಬಸ್ ನಿಲ್ದಾಣ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಸಚಿವರು ಕೂಲಂಕುಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಕಾತರಕಿ ಗ್ರಾಮದ ಕೆಲ ಜಮೀನುಗಳು ಪ್ರವಾಹ ಹಾಗೂ ಹಿನ್ನೀರಿನಿಂದ ಮುಳುಗಡೆ ಹೊಂದುತ್ತಿದ್ದು, ಕೂಡಲೇ ಆ ಜಮೀನು ಭೂ ಸ್ವಾಧೀನಕ್ಕೆ ಒಳಪಡಿಸುವುದು, ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರ ಜಮೀನುಗಳನ್ನು ಕೆಐಎಡಿಬಿಗೆ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸುವುದು.

    ಅನಗವಾಡಿಯ ಪುನರ್ವಸತಿ ಕೇಂದ್ರದ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಿತಿಗೆ ಭವನ ನಿರ್ಮಿಸಿ ಕೊಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.

    ಜೀವನಾಂಶ, ಪೋಡಿ, ಗೃಹಲಕ್ಷ್ಮೀ, ಮಾಸಾಶನ, ಯುಜಿಡಿ ಹಾಗೂ ರಸ್ತೆ ನಿರ್ಮಾಣ, ಸೀಮಿಕೇರಿ ರಾಮಾರೂಢ ಮಠಕ್ಕೆ ಹಾಗೂ ಬನ್ನಿದಿನ್ನಿ ಗ್ರಾಮಕ್ಕೆ ಕುಡಿಯುವ ನೀರಿನ ಕೊಳವೆಬಾವಿ ಕೊರೆಯಿಸುವ ವ್ಯವಸ್ಥೆ, ಕೇಸನೂರ ಗ್ರಾಮದ ರಸ್ತೆ ಡಾಂಬರೀಕರಣ, ಗೋವಿಂದಪ್ಪ ಹೊಸಮನಿ ಅವರ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೇರಿ ಅನೇಕ ಬೇಡಿಕೆಗಳ ಕುರಿತು ಮನವಿಗಳು ಬಂದಿದ್ದು, ಅವೆಲ್ಲವುಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಒಟ್ಟು 132 ಅಹವಾಲುಗಳನ್ನು ಸ್ವೀಕರಿಸಲಾಯಿತು.

    ಪೋಡಿ ಮುಕ್ತ ಜಿಲ್ಲೆಗೆ ಗಡುವು

    ಬಾಗಲಕೋಟೆ ಜಿಲ್ಲೆಯನ್ನು ಒಂದು ವರ್ಷದಲ್ಲಿ ಪೋಡಿಮುಕ್ತವಾಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಗಡುವು ನೀಡಿದರು. ಜಿಲ್ಲೆಯಲ್ಲಿರುವ ಗಾವಠಾಣ, ಅರಣ್ಯ ಪ್ರದೇಶ, ಸರ್ಕಾರಿ ಜಮೀನು ಹಾಗೂ ಖಾಸಗಿ ಜಮೀನಿನಲ್ಲಿ ನಿರ್ಮಿಸಿಕೊಂಡ ಮನೆಗಳ ಮಾಹಿತಿ ಹಾಗೂ ಒತ್ತುವರಿಯಾದ ಕೆರೆಗಳ ಸಂಪೂರ್ಣ ಮಾಹಿತಿಯನ್ನು ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts