More

    ಸುಳ್ಯದಲ್ಲಿ ಟ್ರಾವಂಕೂರ್ ಅಳಿಲು ಪತ್ತೆ!

    ಮಂಗಳೂರು: ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಪ್ರಭೇದಗಳಲ್ಲಿ ಒಂದಾದ ಟ್ರಾವಂಕೂರು ಹಾರುವ ಅಳಿಲು ಸುಳ್ಯ ತಾಲೂಕಿನಲ್ಲಿ ಪತ್ತೆಯಾಗಿದೆ.

    ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದು ಅಪೂರ್ವ. ಪರಿಸರ ಸಂರಕ್ಷಕ ದೀಪಕ್ ಸುಳ್ಯ ಅವರ ತೋಟದಲ್ಲಿ ಈ ಅಳಿಲು ಪತ್ತೆಯಾಗಿದೆ. ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿ ಪ್ರಭೇದಗಳಲ್ಲಿ ಇದೂ ಒಂದು. ಪಶ್ಚಿಮಘಟ್ಟದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರಾವಂಕೂರು ಹಾರುವ ಅಳಿಲು ಎಂಬ ಎರಡು ಪ್ರಭೇದಗಳಿವೆ.

    ಈ ಪ್ರಾಣಿ ಪ್ರಭೇದಗಳು ನಾಶವಾಗಿದೆ ಎಂದು ಜೀವವೈವಿಧ್ಯ ಸಂಶೋಧಕರು ಉಲ್ಲೇಖಿಸಿದ್ದರು. ಆದರೆ ದಶಕದ ಹಿಂದೆ ಕೇರಳದ ಪಶ್ಚಿಮಘಟ್ಟದಲ್ಲಿ ಈ ಪ್ರಭೇದ ಪತ್ತೆಯಾಗಿದ್ದು, ಪ್ರಸ್ತುತ ಅಳಿವಿನಂಚಿನದ್ದು ಎಂದು ಗುರುತಿಸಲಾಗಿದೆ. ಸುಳ್ಯದಲ್ಲಿ ಪತ್ತೆಯಾದ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದು. 32 ಸೆಂ.ಮೀ ಉದ್ದ ಇರುತ್ತದೆ ಎಂದು ಜೀವವೈವಿಧ್ಯ ಸಂಶೋಧಕ ಪ್ರೊ. ಪ್ರಶಾಂತ್ ನಾಕ್ ಬೈಂದೂರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts