More

    ನಾಳೆಯಿಂದ ಯಾವ್ಯಾವ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ?

    ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರದಿಂದ (ಮೇ 12) ದೇಶದ ನಾನಾ ಭಾಗಗಳಿಗೆ ನವದೆಹಲಿಯಿಂದ ರೈಲು ಸಂಚಾರ ಆರಂಭಿಸುತ್ತಿದೆ. ಒಟ್ಟು 15 ಜೋಡಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ. ತನ್ಮೂಲಕ ಲಾಕ್​ಡೌನ್​ ಆರಂಭವಾಗಿ 51 ದಿನಗಳ ಬಳಿಕ ದೇಶದಲ್ಲಿ ರೈಲು ಸಂಚಾರ ಮರುಆರಂಭಕ್ಕೆ ಕ್ರಮ ಕೈಗೊಂಡಿದೆ.

    ಈ 15 ಜೋಡಿ ರೈಲುಗಳು ನವದೆಹಲಿ ಅಲ್ಲದೆ, ಮುಂಬೈ, ಸಿಕಂದರಾಬಾದ್​, ಬೆಂಗಳೂರು, ಚೆನ್ನೈ, ಅಹಮದಾಬಾದ್​, ಹೌರಾ, ತಿರುವನಂತಪುರ, ಪಟನಾ, ಜಮ್ಮು, ದಿಬ್ರುಗಢ, ಅಗರ್ತಲಾ, ಬಿಲಾಸ್​ಪುರ್​, ರಾಂಚಿ, ಭುವನೇಶ್ವರ ಮತ್ತು ಮಡ್ಗಾಂವ್​ನಿಂದಲೂ ಪ್ರಯಾಣ ಆರಂಭಿಸಲಿವೆ.

    ಈ ಎಲ್ಲ ರೈಲುಗಳ ಮುಂಗಡ ಬುಕ್ಕಿಂಗ್​ ಐಆರ್​ಸಿಟಿಸಿ ವೆಬ್​ಸೈಟ್​ ಮೂಲಕ ಸೋಮವಾರ ಸಂಜೆ (ಮೇ 11) 6 ಗಂಟೆಯಿಂದ ಆರಂಭವಾಗಲಿದೆ. ರೈಲು ನಿಲ್ದಾಣಗಳಲ್ಲಿ ಟಿಕೆಟ್​ ಖರೀದಿಗೆ ಅವಕಾಶವಿಲ್ಲ. ಕೇವಲ ಇ-ಟಿಕೆಟ್​ ಇದ್ದವರು ಮಾತ್ರ ರೈಲುಗಳಲ್ಲಿ ಪ್ರಯಾಣಿಸಬಹುದಾಗಿದೆ.

    ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ರೈಲುಗಳು ಪ್ರಯಾಣಿಸಲಿವೆ, ಎಲ್ಲೆಲ್ಲಿ ನಿಲುಗಡೆ ನೀಡಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

    1. ಮೇ 12ರಿಂದ ಹೌರಾದಿಂದ ನವದೆಹಲಿಗೆ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಅಸನಾಲ್​, ಧನ್​ಬಾದ್​, ಗಯಾ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ, ಪ್ರಯಾಗ್​ಗಂಜ್​ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    2. ಮೇ 13ರಿಂದ ನವದೆಹಲಿಯಿಂದ ಹೌರಾಕ್ಕೆ ರೈಲು ಸಂಚರಿಸಲಿದೆ. ಈ ರೈಲು ಕೂಡ ಅಸನಾಲ್​, ಧನ್​ಬಾದ್​, ಗಯಾ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ, ಪ್ರಯಾಗ್​ಗಂಜ್​ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    3. ಪಟನಾದ ರಾಜೇಂದ್ರ ನಗರದಿಂದ ನವದೆಹಲಿಗೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಪಟನಾ, ಪಂಡಿತ್​ ದೀನ್​ದಯಾಳ್​ ಉಪಧ್ಯಾಯ, ಪ್ರಯಾಗ್​ರಾಜ್​ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    4. ನವದೆಹಲಿಯಿಂದ ಪಟನಾದ ರಾಜೇಂದ್ರ ನಗರ ರೈಲು ನಿಲ್ದಾಣಕ್ಕೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಪಟನಾ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ, ಪ್ರಯಾಗ್​ರಾಜ್​ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    5. ದಿಬ್ರುಗಢದಿಂದ ನವದೆಹಲಿಗೆ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದ್ದು, ದಿಮಾಪುರ, ಲಂಡಿಂಗ್​, ಗುವಾಹಟಿ, ಕೋಕ್ರಾಜಾರ್​, ಮರಿಯಾನಿ, ನ್ಯೂ ಜಲ್​ಪೈಗುಡಿ, ಕಟಿಹಾರ್​, ಭರೌನಿ, ದಾನಾಪುರ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ, ಪ್ರಯಾಗ್​ರಾಜ್​, ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    6. ನವದೆಹಲಿಯಿಂದ ದಿಬ್ರುಗಢಕ್ಕೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದ್ದು, ದಿಮಾಪುರ, ಲಂಡಿಂಗ್​, ಗುವಾಹಟಿ, ಕೋಕ್ರಾಜಾರ್​, ಮರಿಯಾನಿ, ನ್ಯೂ ಜಲ್​ಪೈಗುಡಿ, ಕಟಿಹಾರ್​, ಭರೌನಿ, ದಾನಾಪುರ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ, ಪ್ರಯಾಗ್​ರಾಜ್​, ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    7. ಮೇ 13ರಿಂದ ನವದೆಹಲಿ ಮತ್ತು ಜಮ್ಮು ತಾವಿ ನಡುವಿನ ರೈಲು ಸಂಚಾರ ಆರಂಭವಾಗಲಿದ್ದು, ಲೂಧಿಯಾನಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    8. ಜಮ್ಮು ತಾವಿಯಿಂದ ನವದೆಹಲಿ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಈ ರೈಲು ಕೂಡ ಲೂಧಿಯಾನಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    9. ಬೆಂಗಳೂರಿನಿಂದ ನವದೆಹಲಿಗೆ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಅನಂತಪುರ, ಗುಂತ್ಕಲ್​, ಸಿಕಂದರಾಬಾದ್​, ನಾಗ್ಪುರ, ಭೋಪಾಲ್​, ಝಾನ್ಸಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

    10. ನವದೆಹಲಿಯಿಂದ ಬೆಂಗಳೂರಿಗೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಈ ರೈಲು ಕೂಡ ಅನಂತಪುರ, ಗುಂತ್ಕಲ್​, ಸಿಕಂದರಾಬಾದ್​, ನಾಗ್ಪುರ, ಭೋಪಾಲ್​, ಝಾನ್ಸಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

    11. ತಿರುವನಂತಪುರದಿಂದ ನವದೆಹಲಿಗೆ ಮೇ 15ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ಮಾತ್ರ ಸಂಚರಿಸಲಿದೆ. ಎರ್ನಾಕುಲಂ, ಕೋಳಿಕ್ಕೋಡ್​, ಮಂಗಳೂರು, ಮಡ್ಗಾಂವ್​, ಪನ್ವೇಲ್​, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    12. ನವದೆಹಲಿಯಿಂದ ತಿರುವನಂತರಪುರಕ್ಕೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಮಂಗಳವಾರ, ಬುಧವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ. ಎರ್ನಾಕುಲಂ, ಕೋಳಿಕ್ಕೋಡ್​, ಮಂಗಳೂರು, ಮಡ್ಗಾಂವ್​, ಪನ್ವೇಲ್​, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    13. ಚೆನ್ನೈ ಸೆಂಟ್ರಲ್​ನಿಂದ ನವದೆಹಲಿಗೆ ಮೇ 15ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಶುಕ್ರವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ. ವಿಜಯವಾಡ, ವಾರಂಗಲ್​, ನಾಗ್ಪುರ, ಭೋಪಾಲ್​, ಝಾನ್ಸಿ ಮತ್ತು ಆಗ್ರಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    14. ನವದೆಹಲಿಯಿಂದ ಚೆನ್ನೈ ಸೆಂಟ್ರಲ್​ಗೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಬುಧವಾರ ಮತ್ತು ಶುಕ್ರವಾರ ಮಾತ್ರ ಸಂಚರಿಸಲಿದೆ. ವಿಜಯವಾಡ, ವಾರಂಗಲ್​, ನಾಗ್ಪುರ, ಭೋಪಾಲ್​, ಝಾನ್ಸಿ ಮತ್ತು ಆಗ್ರಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    15. ಬಿಲಾಸ್​ಪುರದಿಂದ ನವದೆಹಲಿಗೆ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಸೋಮವಾರ ಮತ್ತು ಗುರುವಾರ ಮಾತ್ರ ಸಂಚರಿಸಲಿದೆ. ರಾಯ್ಪುರ, ನಾಗ್ಪುರ, ಭೋಪಾಲ್​ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    16. ನವದೆಹಲಿಯಿಂದ ಬಿಲಾಸ್​ಪುರಕ್ಕೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಗುರುವಾರ ಮತ್ತು ಶನಿವಾರ ಮಾತ್ರ ಸಂಚರಿಸಲಿದೆ. ರಾಯ್ಪುರ, ನಾಗ್ಪುರ, ಭೋಪಾಲ್​ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    17. ರಾಂಚಿಯಿಂದ ನವದೆಹಲಿಗೆ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಗುರುವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ. ಪಂಡಿತ್​ ದೀನ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    18. ನವದೆಹಲಿಯಿಂದ ರಾಂಚಿಗೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಬುಧವಾರ ಮತ್ತು ಶನಿವಾರ ಮಾತ್ರ ಸಂಚರಿಸಲಿದೆ. ಪಂಡಿತ್​ ದೀನ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    19. ಮುಂಬೈ ಸೆಂಟ್ರಲ್​ನಿಂದ ನವದೆಹಲಿಗೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದೆ. ಸೂರತ್​, ವಡೋದರ, ರತ್ಲಾಂ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    20. ನವದೆಹಲಿಯಿಂದ ಮುಂಬೈ ಸೆಂಟ್ರಲ್​ಗೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದೆ. ಸೂರತ್​, ವಡೋದರ, ರತ್ಲಾಂ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    21. ಅಹಮದಾಬಾದ್​ನಿಂದ ನವದೆಹಲಿಗೆ ಮೇ 12ರಿಂದ ರೈಲು ಸಂಚಾರ ಆರಂಭವಾಗಲಿದೆ. ಪಾಲಂಪುರ, ಅಬು ರೋಡ್​, ಜೈಪುರ ಮತ್ತು ಗುರ್ಗಾಂವ್​ನಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    22. ನವದೆಹಲಿಯಿಂದ ಅಹಮದಾಬಾದ್​ಗೆ ಮೇ 13ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಕೂಡ ಪಾಲಂಪುರ, ಅಬು ರೋಡ್​, ಜೈಪುರ ಮತ್ತು ಗುರ್ಗಾಂವ್​ನಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    23. ಅಗರ್ತಲಾದಿಂದ ನವದೆಹಲಿಗೆ ಮೇ 18ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಸೋಮವಾರ ಮಾತ್ರ ಸಂಚರಿಸಲಿದೆ. ಬದರ್​ಪುರ, ಗುವಾಹಟಿ, ಕೋಕ್ರಾಜಾರ್​, ನ್ಯೂ ಜಲ್​ಪಾಯ್​ಗುಡಿ, ಕಟಿಹಾರ್​, ಭರೌನಿ, ಪಾಟ್ಲಿಪುತ್ರ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    24. ನವದೆಹಲಿಯಿಂದ ಅಗರ್ತಲಾಕ್ಕೆ ಮೇ 20ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಬುಧವಾರ ಮಾತ್ರ ಸಂಚರಿಸಲಿದೆ. ಬದರ್​ಪುರ, ಗುವಾಹಟಿ, ಕೋಕ್ರಾಜಾರ್​, ನ್ಯೂ ಜಲ್​ಪಾಯ್​ಗುಡಿ, ಕಟಿಹಾರ್​, ಭರೌನಿ, ಪಾಟ್ಲಿಪುತ್ರ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    25. ಭುವನೇಶ್ವರದಿಂದ ನವದೆಹಲಿಗೆ ಮೇ 13ರಂದು ರೈಲು ಸಂಚಾರ ಆರಂಭವಾಗಲಿದೆ. ಬಲ್ಸೋರ್​, ಹಿಜ್ಲಿ (ಖರಗ್​ಪುರ), ಟಾಟಾನಗರ, ಬೊಕಾರೊ ಸ್ಟೀಲ್​ ಸಿಟಿ, ಗಯಾ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    26. ನವದೆಹಲಿಯಿಂದ ಭುವನೇಶ್ವರಕ್ಕೆ ಮೇ 14ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಕೂಡ ಬಲ್ಸೋರ್​, ಹಿಜ್ಲಿ (ಖರಗ್​ಪುರ), ಟಾಟಾನಗರ, ಬೊಕಾರೊ ಸ್ಟೀಲ್​ ಸಿಟಿ, ಗಯಾ, ಪಂಡಿತ್​ ದೀನ್​ ದಯಾಳ್​ ಉಪಧ್ಯಾಯ ಮತ್ತು ಕಾನ್ಪುರ ಸೆಂಟ್ರಲ್​ನಲ್ಲಿ ನಿಲುಗಡೆ ನೀಡಲಿದೆ.

    27. ನವದೆಹಲಿಯಿಂದ ಮಡ್ಗಾಂವ್​ಗೆ ಮೇ 15ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಶುಕ್ರವಾರ ಮತ್ತು ಶನಿವಾರ ಮಾತ್ರ ಸಂಚರಿಸಲಿದೆ. ರತ್ನಗಿರಿ, ಪನ್ವೇಲ್​, ಸೂರತ್​, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    28. ಮಡ್ಗಾಂವ್​ನಿಂದ ನವದೆಹಲಿಗೆ ಮೇ 17ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಸೋಮವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ. ರತ್ನಗಿರಿ, ಪನ್ವೇಲ್​, ಸೂರತ್​, ವಡೋದರ ಮತ್ತು ಕೋಟಾದಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    29. ಸಿಕಂದರಾಬಾದ್​ನಿಂದ ನವದೆಹಲಿಗೆ ಮೇ 20ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಬುಧವಾರ ಮಾತ್ರ ಸಂಚರಿಸಲಿದೆ. ನಾಗ್ಪುರ, ಭೋಪಾಲ್​ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    30. ನವದೆಹಲಿಯಿಂದ ಸಿಕಂದರಾಬಾದ್​ಗೆ ಮೇ 17ರಿಂದ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಭಾನುವಾರ ಮಾತ್ರ ಸಂಚರಿಸಲಿದೆ. ನಾಗ್ಪುರ, ಭೋಪಾಲ್​ ಮತ್ತು ಝಾನ್ಸಿಯಲ್ಲಿ ಮಾತ್ರ ನಿಲುಗಡೆ ನೀಡಲಿದೆ.

    ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts