More

    ಯಾರಿಗಾಗಿ ನಡೆಯುತ್ತಿದೆ ಟ್ರಯಲ್ ಬ್ಲಾಸ್ಟ್: ಭೂಗರ್ಭ ಶಾಸ್ತ್ರಜ್ಞ ಪ್ರೊ.ಎಚ್.ಟಿ.ಬಸವರಾಜಪ್ಪ ಟೀಕೆ

    ಮಂಡ್ಯ: ಗಣಿಗಾರಿಕೆಗೆಂದು ಸ್ಫೋಟಕ ಬಳಸುವುದರಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ ಎನ್ನುವುದನ್ನು ಹಲವು ವರದಿ ಸ್ಪಷ್ಟಪಡಿಸಿವೆ. ಅದಾಗ್ಯೂ ಟ್ರಯಲ್ ಬ್ಲಾಸ್ಟ್ ಹಿಂದಿನ ಮರ್ಮ ಜನಸಾಮಾನ್ಯರಿಗೂ ಅರಿವಾಗುತ್ತಿದೆ ಎಂದು ಭೂಗರ್ಭ ಶಾಸ್ತ್ರಜ್ಞ ಪ್ರೊ.ಎಚ್.ಟಿ.ಬಸವರಾಜಪ್ಪ ಟೀಕಿಸಿದರು.
    ನಗರದ ರೈತ ಸಭಾಂಗಣದಲ್ಲಿ ರಾಜ್ಯ ರೈತ ಸಂಘ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಗಣಿಗಾರಿಕೆ ನಿಲ್ಲಿಸಿ, ಕೆಆರ್‌ಎಸ್ ಉಳಿಸಿ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ಅಣೆಕಟ್ಟೆ ಸುರಕ್ಷತೆ ವಿಚಾರದಲ್ಲಿ ಐಐಎಸ್‌ಸಿ ಮತ್ತು ಪೂನಾ ತಜ್ಞರ ವರದಿ ಪಡೆದ ನಂತರ ಅಲ್ಲಿ ಗಣಿಗಾರಿಕೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಆದರೆ, ಯಾವ ಒತ್ತಡಕ್ಕೆ ಮಣಿದು ಅದೇ ಸ್ಥಳದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸುತ್ತಿದ್ದಾರೆಂಬುದು ಇತ್ತೀಚೆಗೆ ಜನಸಾಮಾನ್ಯರಿಗೂ ಅರಿವಾಗುತ್ತಿದೆ ಎಂದರು.
    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಕೆ.ಆರ್.ರವೀಂದ್ರ, ಚಿಕ್ಕಾಡೆ ಹರೀಶ್, ಬಿ.ಬಸವರಾಜು, ಪ್ರೊ.ಹುಲ್ಕೆರೆ ಮಹದೇವು, ಪ್ರಸನ್ನ ಎನ್.ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts