More

    ಗ್ರಾಹಕರಿಗೆ ಮೋಸವಾಗದಂತೆ ವ್ಯಾಪಾರಿಗಳು ಎಚ್ಚರ ವಹಿಸಲಿ

    ಹುಣಸೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ವಿಶ್ವ ಗ್ರಾಹಕರ ದಿನ ಆಚರಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನಕುಮಾರಿ, ಗ್ರಾಹಕರಿಗೆ ಮೋಸವಾಗದಂತೆ ವ್ಯಾಪಾರಿಗಳು ಎಚ್ಚರ ವಹಿಸುವುದು ಮುಖ್ಯ. ಅಂತೆಯೇ ಗ್ರಾಹಕರೂ ಕೂಡ ಆಹಾರ ಕಲಬೆರಕೆ, ತೂಕದಲ್ಲಿನ ನ್ಯೂನತೆಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಆಗ ಮಾತ್ರ ಗ್ರಾಹಕ ಮತ್ತು ವ್ಯಾಪಾರಿಯ ನಡುವಿನ ವ್ಯಾಜ್ಯಗಳು ನಿಯಂತ್ರಣಕ್ಕೆ ಬರಲು ಸಾಧ್ಯ ಎಂದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರ ಗ್ರಾಹಕರಿಗೆ ಉಚಿತವಾಗಿ ಕಾನೂನು ಸೇವೆ ನೀಡುತ್ತಿದೆ. ಆರ್ಥಿಕವಾಗಿ ದುರ್ಬಲರಿಗೆ ಅನ್ಯಾಯವಾದಾಗ ಪ್ರಾಧಿಕಾರ ಉಚಿತವಾಗಿ ಸೇವೆ ನೀಡುವುದಲ್ಲದೆ, ಗ್ರಾಹಕರಿಗೆ ಆಗಬಹುದಾದ ಅನ್ಯಾಯಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನೂ ನಡೆಸಿದೆ ಎಂದರು.

    ಕಾಲೇಜು ಪ್ರಾಂಶುಪಾಲೆ ಪ್ರೊ.ಆರ್.ಕವಿತಾ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ್ ಹೆಗಡೆ, ಗ್ರೇಡ್-2 ತಹಸಿಲ್ದಾರ್ ನರಸಿಂಹಯ್ಯ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

    ಆಹಾರ ಕಲಬೆರಕೆ, ತೂಕ ಮತ್ತು ಅಳತೆ ವಿಷಯ, ಪೆಟ್ರೋಲಿಯಂ, ಕಲಬೆರಕೆ, ಎಲ್‌ಪಿಜಿ ಬಳಕೆಯಲ್ಲಿನ ಸುರಕ್ಷತೆ ಬಗ್ಗೆ ಹಾಗೂ ಅಂಚೆ ಇಲಾಖೆಯ ಸಾರ್ವಜನಿಕ ಸೇವೆಗಳ ಬಗ್ಗೆ ವಿವಿಧ ಇಲಾಖೆಗಳಿಂದ ಗ್ರಾಹಕ ಜಾಗೃತಿ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲದೆ ನಯನಕುಮಾರಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts