More

    ಅಧಿಕಾರಿಗಳಿಗೆ ಅಮಾನತು ಎಚ್ಚರಿಕೆ ; ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರುವಂತೆ ಸಂಸದ ಡಿ.ಕೆ.ಸುರೇಶ್ ಖಡಕ್ ಸೂಚನೆ

    ತುಮಕೂರು: ಕುಣಿಗಲ್ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇದ್ದು, ಕರ್ತವ್ಯ ನಿರ್ವಹಿಸದಿದ್ದರೆ ಮುಲಾಜಿಲ್ಲದೆ ಅಮಾನತಿಗೆ ಶಿಾರಸು ಮಾಡಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ ನೀಡಿದರು.

    ಕುಣಿಗಲ್ ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು. ಸಾಕಷ್ಟು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇರದೆ ಬೇರೆ ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ತಾಲೂಕಿನ ಜನತೆಗೆ ಅಧಿಕಾರಿಗಳು ಸಕಾಲಕ್ಕೆ ಸಿಗದೆ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ ಎಂದರು.

    ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲವಾದರೆ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಕೇಂದ್ರ ಸ್ಥಾನದಲ್ಲಿ ವಾಸದ ವಿಳಾಸವನ್ನು ಸ್ಥಳೀಯ ಶಾಸಕರಿಗೆ ಸಲ್ಲಿಸಬೇಕು. ಇಲ್ಲವಾದರೆ ಅಮಾನತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಪಂ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಅಧಿಕಾರಿಗಳಿಗೆ ಕೆಲಸ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗ ಮಾಡಿಕೊಂಡು ಶಾಶ್ವತ ಕಾಮಗಾರಿಗಳನ್ನು ಮಾಡಿ. ಗ್ರಾಪಂನಲ್ಲಿ ಈಗ ಚುನಾಯಿತ ಸದಸ್ಯರು ಇಲ್ಲದಿರುವ ಕಾರಣ ಯಾವುದೇ ರಾಜಕೀಯ ಒತ್ತಡ ಇರುವುದಿಲ್ಲ. ಈ ಸಂಬಂಧ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆ ಮಾಡಿಕೊಂಡು ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿ ಶಾಶ್ವತ ಕಾಮಗಾರಿ ಮಾಡುವಂತೆ ಸೂಚನೆ ನೀಡಿದರು.

    ಆಡಳಿತಾಧಿಕಾರಿಯಾಗಿ ಅಧಿಕಾರ ಸಿಕ್ಕಿದೆ ಎಂದು ದುರುಪಯೋಗ ಮಾಡಿಕೊಂಡರೆ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಶಿಾರಸು ಮಾಡಲಾಗುವುದೆಂದು ಎಚ್ಚರಿಸಿದರು. ನರೇಗಾದಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆಯುತ್ತಿವೆ. ಫಲಾನುಭವಿ ಕೈಗೆ ನೇರವಾಗಿ ಹಣ ಸೇರುತ್ತಿಲ್ಲ. ಗುತ್ತಿಗೆದಾರ, ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಹೊಂದಾಣಿಕೆ ಮಾಡಿಕೊಂಡು ಜಾಬ್‌ಕಾರ್ಡ್ ದಾರರ ಬ್ಯಾಂಕ್ ಎಟಿಎಂಗಳನ್ನು ತಮ್ಮ ಬಳಿ ಇಟ್ಟುಕೊಂಡು ಹಣ ಡ್ರಾ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ. ಆಡಳಿತಾಧಿಕಾರಿ ಅಕ್ರಮಕ್ಕೆ ಕಡಿವಾಣ ಹಾಕಿ ಲಾನುಭವಿಗಳ ಕೈಗೆ ಹಣ ಸೇರುವಂತೆ ಮಾಡಬೇಕೆಂದು ಸೂಚಿಸಿದರು.

    ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಗೆ ನಿಲ್ಲುವ ಶಿಕ್ಷೆ: ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಪುರಸಭೆ ಪರಿಸರ ಇಂಜಿನಿಯರ್ ಚಂದ್ರಶೇಖರ್ ಅವರನ್ನು ಸಂಸದರು ತರಾಟೆಗೆ ತೆಗೆದುಕೊಂಡು ಸಭೆ ಮುಗಿಯುವವರೆಗೂ ನಿಂತುಕೊಳ್ಳುವ ಶಿಕ್ಷೆ ವಿಧಿಸಿದರು. ಸಭೆ ಮಧ್ಯದಲ್ಲಿ ಶಾಸಕರು ಮಧ್ಯಪ್ರವೇಶ ಮಾಡಿ ನಿಂತಿರುವ ಅಧಿಕಾರಿ ಆಪರೇಷನ್ ಮಾಡಿಸಿಕೊಂಡು ಬಂದಿದ್ದಾರೆ, ಕುಳಿತುಕೊಳ್ಳಲು ಹೇಳಿ ಎಂದಾಗ ಮತ್ತೆ ಸಂಸದ ಡಿ.ಕೆ.ಸುರೇಶ್ ಚಂದ್ರಶೇಖರ್ ಅವರನ್ನು ಪ್ರಶ್ನೆ ಮಾಡಿ ಏನ್ ಮಾತನಾಡುತ್ತಿದ್ದೇ ಎಂದು ಕೇಳಿದಾಗ ಕರೊನಾ ಬಗ್ಗೆ ಮಾಹಿತಿ ನೀಡುತ್ತಿದ್ದೆ ಸರ್ ಎಂದು ಹೇಳಿದರು. ಕರೊನಾ ಅಂದರೇ ನಾನು ಹೆದರಿಕೊಳ್ಳುತ್ತೇನೆ ಅಂದುಕೊಂಡಿದ್ದೀಯಾ ? ಎಂದು ತರಾಟೆ ತೆಗೆದುಕೊಂಡು ನೀನು ಸಭೆ ಮಗಿಯುವವರೆಗೂ ನಿಂತೇ ಇರಬೇಕೆಂದು ಶಿಕ್ಷೆ ಮುಂದುವರಿಸಿದರು.

    ತಾಲೂಕಿನಲ್ಲಿ 58 ಸಾವಿರ ಬಿಪಿಎಲ್ ಕಾರ್ಡ್ ದಾರರಿದ್ದಾರೆ. ಆದರೆ, 36 ಸಾವಿರ ಜಾಬ್ ಕಾರ್ಡ್ ರೂಪಿಸಲಾಗಿದೆ. ಉಳಿಕೆ ಕಾರ್ಡ್
    ಗಳನ್ನು ರೂಪಿಸಲು ಮನೆ ಮನೆಗೆ ಕ್ಯಾಂಪೇನ್ ಮಾಡಿ ಕಾರ್ಡ್ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳಿ.
    ಡಿ.ಕೆ.ಸುರೇಶ್ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts