More

    ಕೋಟೆನಾಡಿನ ಪುರಸಭೆಗೆ ವೀರಪ್ಪ ನಾಯಕ

    ಗಜೇಂದ್ರಗಡ: ಪುರಸಭೆ ಅಧ್ಯಕ್ಷರಾಗಿ ವೀರಪ್ಪ ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಲೀಲಾವತಿ ಅಶೋಕ ವನ್ನಾಲ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವೀರಪ್ಪ ಹಾಗೂ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿ ಇಲ್ಲದ ಕಾರಣಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಅಶೋಕ ಕಲಘಟಗಿ ತಿಳಿಸಿದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಎರಡು ವರ್ಷಗಳ ಹಿಂದೆಯೇ ಸದಸ್ಯರು ಪುರಸಭೆಗೆ ಆಯ್ಕೆಯಾದರೂ ಅಧಿಕಾರ ಸಿಕ್ಕಿರಲಿಲ್ಲ. ಇದೀಗ ಅಧಿಕಾರ ದೊರೆತಿದೆ. ಮುಂದಿನ ದಿನಗಳಲ್ಲಿ ನಾನು, ಶಾಸಕರು ಸೇರಿದಂತೆ ಎಲ್ಲರೂ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಹರಿಸೋಣ’ ಎಂದರು.

    ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಹೆಚ್ಚಿನ ಅನುದಾನ ತಂದು ಪಟ್ಟಣದ ಅಭಿವೃದ್ಧಿ ಕೈಗೊಳ್ಳೋಣ ಎಂದರು.

    ಉಪಾಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿಯ ಪುರಸಭೆ ಸದಸ್ಯರು, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ, ನಗರ ಘಟಕ ಅಧ್ಯಕ್ಷ ಅಶೋಕ ವನ್ನಾಲ, ರಾಜ್ಯ ಒಬಿಸಿ ಕಾರ್ಯದರ್ಶಿ ರವಿ ದಂಡಿನ, ಅಮರೇಶ ಬಳಿಗೇರ, ಬಿ.ಎಂ. ಸಜ್ಜನರ, ರವೀಂದ್ರ ಬಿದರೂರ, ಶಿವಬಸವ ಬೆಲ್ಲದ, ಭಾಸ್ಕರ ರಾಯಬಾಗಿ, ಪ್ರಭು ಚವಡಿ, ಬಸವರಾಜ ಹೂಗಾರ, ಸಂಜೀವ ಜೋಶಿ, ರವಿ ಶಿಂಗ್ರಿ, ನಾಗಯ್ಯ ಗೊಂಗಡಶೆಟ್ಟಿಮಠ, ಉಮೇಶ ಮಲ್ಲಾಪೂರ, ಶ್ರೀನಿವಾಸ ಸವದಿ, ಅಮರೇಶ ಅರಳಿ, ರವಿ ಗಡೇದವರ, ಉಮೇಶ ಪಾಟೀಲ, ವಿಶ್ವನಾಥ ಕುಷ್ಟಗಿ, ನಾರಾಯಣ ಬಾಕಳೆ, ಸೂಗುರೇಶ ಚೋಳಿನ, ಶಂಕರ ಇಂಜನಿ, ಬಾಳನಗೌಡ ಗೌಡರ, ಶರಣಪ್ಪ ಹಿರೇಕೊಪ್ಪ, ಕೆರಿಯಪ್ಪ ಪಟ್ಟಣಶೆಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ, ಸಂಗಪ್ಪ ಚಿಲಝುರಿ, ಸಂಗಪ್ಪ ಹಡಪದ, ಪರಸಪ್ಪ ಹುಡೇದ, ವೀರಭದ್ರಪ್ಪ ನಿಟ್ಟಾಲಿ, ಶರಣಪ್ಪ ಬನಿಗೋಳ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಇತರರು ಇದ್ದರು.

    ಶಾಸಕರು, ಸಂಸದರು, ಹಿರಿಯರು ಹಾಗೂ ಎಲ್ಲ ಸದಸ್ಯರ ಮಾರ್ಗದರ್ಶನ ಮತ್ತು ಸಹಕಾರದಿಂದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ನನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
    | ವೀರಪ್ಪ ಪಟ್ಟಣಶೆಟ್ಟಿ, ಲೀಲಾವತಿ ವನ್ನಾಲ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts