More

    ಶಿಥಿಲಾವಸ್ಥೆ ತಲುಪಿದೆ ಬ್ರಿಟಿಷರ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಪ್ರವಾಸಿ ಮಂದಿರ

    ರಾಜು ಪಾದರಹಳ್ಳಿ ಬಿಡದಿ

    ಬ್ರಿಟಿಷರ ಆಡಳಿತದಲ್ಲಿ ನಿರ್ಮಾಣಗೊಂಡಿದ್ದ ಪ್ರವಾಸಿ ಮಂದಿರ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

    ಬೈರಮಂಗಲ ಕೆರೆಯ ಬಲದಂಡೆ ತಿಮ್ಮೇಗೌಡನದೊಡ್ಡಿ ಬಳಿ ನಿರ್ವಣಗೊಂಡಿದ್ದ ಈ ಮಂದಿರ ಈಗ ಕೊಂಪೆಯಂತಾಗಿದೆ.

    ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದ ಕಾಲದಲ್ಲಿ ಈ ಪ್ರವಾಸಿ ಮಂದಿರ ನಿರ್ಮಾಣಗೊಂಡಿದೆ. ಬೈರಮಂಗಲ ಜಲಾಶಯ ನಿರ್ವಿುಸಿದ್ದ ವೇಳೆ ಬ್ರಿಟಿಷ್ ಅಧಿಕಾರಿಗಳು ಇದನ್ನು ಕಟ್ಟಿದ್ದರು. ಸ್ವಾತಂತ್ರಾ್ಯನಂತರ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳು ಬಂಗಲೆ ನಿರ್ವಹಣೆ ಮಾಡುತ್ತಿದ್ದವು. 1984ರಲ್ಲಿ ಶಾಸಕರಾಗಿದ್ದ ಸಿ. ಬೋರಯ್ಯ ಅವರ ಅವಧಿಯಲ್ಲಿ ಕಟ್ಟಡ ನವೀಕರಣ ಮಾಡಲಾಗಿತ್ತು. ಪ್ರವಾಸಿ ಮಂದಿರದ ಬಾಗಿಲು ಮುರಿದಿದ್ದು, ಛಾವಣಿ ಕುಸಿದಿದೆ, ಕಿಟಕಿಗಳು ಕಳಚಿವೆ. ಗಿಡ-ಗಂಟಿ ಬೆಳೆದಿದ್ದು, ಜತೆಗೆ ಜೂಜಾಟದ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಪುರಾತನ ಕಾಲದ ಪ್ರವಾಸಿ ಮಂದಿರ ನವೀಕರಿಸಿ ರಕ್ಷಿಸುವ ಯತ್ನವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡುತ್ತಿಲ್ಲ.

    ಡಾ. ರಾಜ್ ಚಿತ್ರಗಳ ಚಿತ್ರೀಕರಣ

    ವರನಟ ಡಾ.ರಾಜ್​ಕುಮಾರ್ ಅಭಿನಯದ ಧ್ರುವತಾರೆ, ಒಡಹುಟ್ಟಿದವರು ಹಾಗೂ ಅನಂತ್​ನಾಗ್ ಅಭಿನಯದ ಬೆಂಕಿಯ ಬಲೆ ಚಿತ್ರಗಳು ಈ ಪ್ರವಾಸಿ ಮಂದಿರದಲ್ಲೇ ಚಿತ್ರೀಕರಣಗೊಂಡಿವೆ. ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಅಧಿಕಾರಿಗಳ ಸಭೆಗಳನ್ನು ನಡೆಸಿದ್ದರು.

    ಸಿ. ಬೋರಯ್ಯನವರ ನಂತರ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರವಾಸಿ ಮಂದಿರ ದುಸ್ಥಿತಿ ತಲುಪಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರವಾಸಿ ಮಂದಿರ ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು.

    | ಎಚ್.ಜಿ. ಪ್ರಕಾಶ್, ಬೈರಮಂಗಲ ತಾಪಂ ಸದಸ್ಯ

    ಪ್ರವಾಸಿ ಮಂದಿರ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಕೂಡಲೇ ಪ್ರವಾಸಿ ಮಂದಿರ ನವೀಕರಿಸಲಾಗುವುದು.

    | ಕೊಟ್ರೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts