More

    ಟಾಪರ್ ರಕ್ಷಾಗೆ ವೈದ್ಯೆಯಾಗುವ ಆಸೆ

    ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿನಿ ಬಿ.ಎಂ. ರಕ್ಷಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದಾರೆ. 625 ಅಂಕಗಳಿಸುವ ಮೂಲಕ ರಕ್ಷಾ ರಾಜ್ಯದ ಟಾಪರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಜೋಗಿಮಟ್ಟಿ ರಸ್ತೆಯಲ್ಲಿ ವಾಸವಿರುವ ರಕ್ಷಾ ಅವರ ತಂದೆ ಕೆ.ಬಿ. ಮೃತ್ಯುಂಜಯ ಕೋಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ತಾಯಿ ರೂಪಾರಾಣಿ ಇದೇ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ರಕ್ಷಾ ಅವರ ಅಜ್ಜ ಕೆ.ಜಿ. ಬಸವರಾಜಯ್ಯ ನಿವೃತ್ತ ಶಿಕ್ಷಕರಾಗಿದ್ದಾರೆ. ಪ್ರತಿ ದಿನ 8 ಗಂಟೆ ಅಭ್ಯಾಸ ನಡೆಸುತ್ತಿದ್ದ ರಕ್ಷಾ, ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿರಲಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟ ಪಾಠವನ್ನು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ತಂದೆಯ ಕೆಲ ಸಲಹೆ ಅಭ್ಯಾಸಕ್ಕೆ ನೆರವಾಯಿತು ಎಂದು ರಕ್ಷಾ ವಿಜಯವಾಣಿಗೆ ತಿಳಿಸಿದರು.

    ವೈದ್ಯೆಯಾಗಿ ರೋಗಿಗಳಿಗೆ ಉಚಿತ ಸೇವೆ ನೀಡಬೇಕು ಎನ್ನುವುದು ರಕ್ಷಾ ಅವರ ಗುರಿಯಾಗಿದೆ. ಮಗಳಿಂದ ನಮ್ಮನ್ನು ಗುರುತಿಸುವಂತಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಮೃತ್ಯುಂಜಯ ತಿಳಿಸಿದರು.

    ವಿದ್ಯಾ ವಿಕಾಸ ಶಾಲೆಗೆ ಶೇ. 100 ಫಲಿತಾಂಶ

    ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾ ವಿಕಾಸ ಶಾಲೆಯಿಂದ 139 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, 92 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕ, 45 ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

    ಎಚ್.ಎಂ. ಸಿರಿ 622 (99.52), ಪಿ.ಎಸ್. ಪ್ರಿಯಾಂಕ 622 (99.52) ಹಾಗೂ ಆರ್.ವಿ. ದೇವಿನಾ 623 (99.68) ಅಂಕ ಪಡೆದಿದ್ದಾರೆ.

    ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯ್‌ಕುಮಾರ್, ಮುಖ್ಯೋಪಾಧ್ಯಾಯ ಸಿ.ಡಿ. ಸಂಪತ್‌ಕುಮಾರ್, ಕ್ಯಾಂಪಸ್ ಇನ್‌ಚಾರ್ಜ್ ಎಸ್.ಎಂ. ಪೃಥ್ವೀಶ್, ಹೆಡ್ ಕೋ-ಆರ್ಡಿನೇಟರ್ ಪಿ. ಬಸವರಾಜಯ್ಯ, ಬೋಧಕ/ಬೋಧಕೇತರ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts