More

    ಟೊಮ್ಯಾಟೊದಿಂದಲೇ ಜ್ವರ ಬರುತ್ತಿದೆಯೇ? ಸಚಿವರು ಅಂದಿದ್ದು ಹೀಗೆ

    ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ಟೊಮ್ಯಾಟೊ ಜ್ವರ ಕಾಣಿಸಿಕೊಂಡಿದ್ದು, ಪತ್ತೆಯಾಗಿರುವ ಹೊಸ ರೋಗದಿಂದ ಮತ್ತೆ ಆತಂಕಕ್ಕೀಡಾಗುವಂತೆ ಮಾಡಿದೆ. ಇನ್ನು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ರೋಗ ಭಾರೀ ಆತಂಕ ಸೃಷ್ಟಿಸಿದೆ.

    ಟೊಮ್ಯಾಟೊ ಜ್ವರ ನಮ್ಮ ರಾಜ್ಯಕ್ಕೂ ಹರಡುವ ಭೀತಿಯಿಂದಾಗಿ ಕೇರಳ-ಕರ್ನಾಟಕ ಗಡಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಕೇರಳದಲ್ಲಿ ಈಗಾಗಲೇ 64ಕ್ಕೂ ಹೆಚ್ಚು ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆಯಂತೆ. ಹಾಗಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ. ಇನ್ನೂ ಈ ಬಗ್ಗೆ ಸಚಿವರು ಮಾತ್ರ ಹೀಗೆ ಹೇಳುತ್ತಾರೆ.

    ಈ ರೋಗ ಟೊಮ್ಯಾಟೊದಿಂದಲೇ ಬರುತ್ತಿದೆಯೇ ಎಂಬುದು ಸದ್ಯಕ್ಕೆ ಹೇಳಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇದರ ಸ್ಪಷ್ಟ ಮಾಹಿತಿ ಕೊಡುವಂತೆ ತಜ್ಞರಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಈ ರೋಗ ಯಾವುದರಿಂದ ಬರಲಿದೆ ಎಂಬುದು ತಿಳಿಯಲಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

    ಇನ್ನು ಸದ್ಯಕ್ಕೆ ಟೊಮ್ಯಾಟೊ ಬಿಸಾಕ್ಬೇಡಿ, ಇನ್ನೂ ಸ್ಪಷ್ಟ ಮಾಹಿತಿ ಗೊತ್ತಿಲ್ಲ ಈ ರೋಗ ಯಾವುದರಿಂದ ಬರುತ್ತಿದೆ ಎಂದಿದ್ದಾರೆ.

    ದೇಹದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳಲಿದ್ದು, ಹೆಚ್ಚು ಜ್ವರ ಹಾಗೂ ವಾಂತಿಯಾಗುವುದು ಈ ಜ್ವರದ ಲಕ್ಷಣವಾಗಿದ್ದು, ಇದರಿಂದ ಎಚ್ಚರವಹಿಸುವಂತೆ ಆರೋಗ್ಯ ತಜ್ಱರು ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಡೆತ್​ ಟ್ರೈನ್​​ ವಿಡಿಯೋ ಬಿಡುಗಡೆ ಮಾಡಿ ರಷ್ಯಾದ ಬಣ್ಣ ಬಯಲು ಮಾಡಿದ ಯೂಕ್ರೇನ್​ ಸೇನೆ: ಈ ರೈಲಿನಲ್ಲಿ ಅಂತಹದ್ದೇನಿದೆ?

    ಮಧ್ಯರಾತ್ರಿ ಐಎಫ್​ಎಸ್ ಅಧಿಕಾರಿ ವಿಶ್ರಾಂತಿ ಗೃಹಕ್ಕೆ ಬಂತು ಚಿರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts