More

    ನಾಳೆ ಶುಶ್ರೂಷಕರ ದಿನಾಚರಣೆ

    ಜಮಖಂಡಿ: ನಗರದ ತಾಯಿ ಮಕ್ಕಳ ಆಸ್ಪತ್ರೆಯ ಸಭಾಭವನದಲ್ಲಿ ಮೇ 15 ರಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ತಾಲೂಕು ಸಂದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂದ ತಾಲೂಕು ಅಧ್ಯ ಜೆ.ಡಿ.ದನ್ನೂರ ತಿಳಿಸಿದರು.

    ನಗರದ ಆಸ್ಪತ್ರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ರಾಜ್ಯಾಧ್ಯ ರಾಜಕುಮಾರ ಮಾಳಗೆ, ಜಿಲ್ಲಾಧ್ಯ ಶೇಖರ ಕೋಲ್ಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ನಾಲವಾಡದ ಆಗಮಿಸುವರು.

    ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಆರ್​.ಬಣ್ಣದ ಅಧ್ಯತೆ ವಹಿಸುವರು. ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್​.ಗಲಗಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ನಿವೃತ್ತ ಶೂಶ್ರೂಷಾಧಿಕಾರಿಗಳನ್ನು ಸನ್ಮಾನಿಸಲಾಗುವುದು. ಫ್ಲಾರೆನ್ಸ್​ ನೈಟಿಂಗೇಲ್ಸ್​ ಬಗ್ಗೆ ದೀಪಧಾರಿಣಿ ಭಾವಗೀತೆ ಹಾಡಿರುವ ಪ್ರಭಾ ಇನಾಮದಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

    ಮುಂದಿನ ದಿನಗಳಲ್ಲಿ ಸಂದಿಂದ ಸಮಾಜಮುಖಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಸಂದ ಗೌರವಾಧ್ಯ ಬಿ.ವೆ.ನಾಗಠಾಣ, ಬಿ.ಆರ್​.ಇಟ್ಟಣ್ಣವರ, ರಮೇಶ ದೇಸಾಯಿ, ಬಸವರಾಜ ನಡುವಿನಕೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts