More

    ದಿಢೀರ್ ಕುಸಿದ ಟೊಮ್ಯಾಟೊ ದರ

    ಲಕ್ಷ್ಮೇಶ್ವರ: ಟೊಮ್ಯಾಟೊ ದಿಢೀರ್ ಬೆಲೆ ಕುಸಿತದಿಂದ ಆಕ್ರೋಶಗೊಂಡ ಬೆಳೆಗಾರರು ಗುರುವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
    20- 25 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೊಗೆ ಕೇವಲ 30 ರೂ. ಗೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಕಂಗಾಲಾದ ರೈತರು ಬೀದಿಗಿಳಿಯುವಂತಹ ಪರಿಸ್ಥಿತಿ ನಿರ್ವಣವಾಯಿತು. ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಗುರುವಾರ ಪಟ್ಟಣ ಸೇರಿ ಗ್ರಾಮೀಣ ಭಾಗದ ರೈತರು ತಮ್ಮ ಟೊಮ್ಯಾಟೊ ಹಣ್ಣುಗಳನ್ನು ಹೊಸ ಬಸ್ ನಿಲ್ದಾಣದ ಹತ್ತಿರದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗೆ ಸುರಿದು ಪ್ರತಿಭಟನೆ ನಡೆಸಿದರು.
    ಪಕ್ಷಾತೀತ ರೈತ ಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಅತಿವೃಷ್ಟಿ, ರೋಗಬಾಧೆಯ ನಡುವೆಯೂ ರೈತರು ಸಾವಿರಾರು ರೂ. ಖರ್ಚು ಮಾಡಿ ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಕಿಮ್ಮತ್ತಿಲ್ಲದಂತಾಗಿದೆ. ತೋಟಗಾರಿಕೆ, ತರಕಾರಿ ಬೆಳೆಗಾರರ ಕಷ್ಟ-ನಷ್ಟ ಕೇಳುವವರೇ ಇಲ್ಲದಂತಾಗಿದೆ. ಈ ರೈತರು ಕಳೆದ ಎರಡು ವರ್ಷ ಕೋವಿಡ್​ನಲ್ಲಿ ನಷ್ಟ ಅನುಭವಿಸಿದ್ದಾರೆ. ಈ ವರ್ಷ ಅತಿಯಾದ ಮಳೆ, ರೋಗ ಬಾಧೆ ಜತೆಗೆ ಇದೀಗ ಬೆಲೆ ಕುಸಿತದಿಂದ ಸಾಕಷ್ಟು ಸಂಕಷ್ಟ, ಹಾನಿ ಅನುಭವಿಸುತ್ತಿದ್ದಾರೆ ಎಂದರು.
    ರೈತರ ವಿವಿಧ ಬೇಡಿಕೆಗಳ ಈಡೇರಕೆಗೆ ಆಗ್ರಹಿಸಿ ಆ. 8ರಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಸ್ವಯಂಪ್ರೇರಣೆಯಿಂದ ಬಂದ್​ಗೆ ಕರೆ ನೀಡಿರುವುದಾಗಿ ತಿಳಿಸಿದರು.
    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಆಗಮಿಸಿ ರೈತರನ್ನು ಸಮಾಧಾನಪಡಿಸಿದರು. ಈ ಕುರಿತು ತೋಟಗಾರಿಕೆ ಅಧಿಕಾರಿ ಮತ್ತು ತರಕಾರಿ ದಲ್ಲಾಳಿ ವ್ಯಾಪಾರಸ್ಥರೊಂದಿಗೆ ಮಾತನಾಡುತ್ತೇನೆ. ಸದ್ಯಕ್ಕೆ ಏಕಾಏಕಿ ಕೈಗೊಂಡಿರುವ ಪ್ರತಿಭಟನೆ ಕೈಬಿಡಿ ಎಂದು
    ಮನವಿ ಮಾಡಿದ ಹಿನ್ನೆಲೆಯಲ್ಲಿ ಬೆಳೆಗಾರರು ಪ್ರತಿಭಟನೆಯಿಂದ ಹಿಂಪಡೆದರು.
    ರಾಜು ಕರಾಟೆ, ಶಿವಾನಂದ ಲಿಂಗಶೆಟ್ಟಿ, ಶೇಖಣ್ಣ ಗೋಡಿ, ಸೋಮನಗೌಡ್ರ ಪಾಟೀಲ, ಸೋಮು ಬಳಗಾನೂರ, ಬಸಣ್ಣ ಬೆಂಗಳೂರು, ಚನ್ನಬಸಪ್ಪ ಬಳಗಾನೂರ, ಶಿವಣ್ಣ ವಾಲ್ಮೀಕಿ, ನಿಂಗಪ್ಪ ಟೋಕಾಳೆ, ಚನ್ನಪ್ಪ ಅಣ್ಣಿಗೇರಿ, ಬಸವರಾಜ ಆದಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts