More

    ಮಳೆಗೆ ಗುಣಮಟ್ಟ ಕಳೆದುಕೊಂಡ ಟೊಮ್ಯಾಟೊ

    ಮುಳಬಾಗಿಲು: ಕಳೆದ 1 ವಾರದ ಹಿಂದೆ 850 ರೂ.ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮ್ಯಾಟೊ ಬಾಕ್ಸ್ ಜಡಿ ಮಳೆಯಿಂದ ಗುಣಮಟ್ಟ ಕಳೆದುಕೊಂಡು 300 ರಿಂದ 400 ರೂ,ಗೆ ಮಾರಾಟವಾಗುತ್ತಿದ್ದು, ರೈತ ನಷ್ಟಕ್ಕೆ ಒಳಗಾಗಿದ್ದಾರೆ.

    ಸಾವಿರ ಬಾಕ್ಸ್ ಟೊಮ್ಯಾಟೊ ಬೆಳೆಯುತ್ತಿದ್ದ ತೋಟದಲ್ಲಿ ತೇವಾಂಶದಿಂದ 700 ಬಾಕ್ಸ್ ಹಣ್ಣು ಹಾಳಾದರೆ 300 ಬಾಕ್ಸ್ ಮಾತ್ರ ಗುಣಮಟ್ಟದ ಹಣ್ಣು ಸಿಗುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಮುಳಬಾಗಿಲಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆ ನಾಟಿ ಹೈಬ್ರಿಡ್ ಟೊಮ್ಯಾಟೊಗೆ ಪ್ರಸಿದ್ಧಿ ಹೊಂದಿದ್ದು, ದೆಹಲಿ, ಉತ್ತರಪ್ರದೇಶ, ಛತ್ತೀಸ್‌ಘಡ, ಮಹಾರಾಷ್ಟ್ರ ಸೇರಿ ಉತ್ತರ ಭಾರತದ ಕಡೆಯಿಂದ ವರ್ತಕರು ಬಂದು ಕೊಳ್ಳುತ್ತಿದ್ದರು. ಈಗ ಮಳೆಯಿಂದ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿ ಗುಣಮಟ್ಟ ಕಡಿಮೆಯಾಗಿದ್ದರಿಂದ ಕೊಳ್ಳುವವರೇ ಇಲ್ಲದಂತಾಗಿದೆ.

    ಮಾರುಕಟ್ಟೆಯಲ್ಲಿ ಸ್ಥಳದ ಅಭಾವ: ಎನ್.ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣ 4 ಎಕರೆ ವಿಸ್ತೀರ್ಣದಲ್ಲಿದ್ದು, ಪ್ರತಿನಿತ್ಯ ಹೊರ ರಾಜ್ಯಗಳಿಂದ 50ಕ್ಕಿಂತ ಹೆಚ್ಚು ಲಾರಿಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಮಾರುಕಟ್ಟೆಯಲ್ಲಿ ಸ್ಥಳದ ಅಭಾವ ಉಂಟಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಎಪಿಎಂಸಿ ಗಮನ ಹರಿಸಿ ಮಾರುಕಟ್ಟೆ ಅಭಿವೃದ್ಧಿ ಪಡಿಸಿದರೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಾಧ್ಯವಾಗುತ್ತದೆ ಎಂಬುದು ರೈತರ ಅಭಿಪ್ರಾಯ.

    ಎನ್.ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆ ಕೋಲಾರ ನಂತರ ಎರಡನೇ ದೊಡ್ಡ ಮಾರುಕಟ್ಟೆಯಾಗಿದ್ದು ಕೇವಲ 4 ಎಕರೆ ವಿಸ್ತೀರ್ಣದಲ್ಲಿದೆ. ಹೆಚ್ಚುವರಿ ಜಮೀನು ಖರೀದಿಗೆ ಕೋರಲಾಗಿದೆ. ಕ್ಷೇತ್ರದ ಶಾಸಕ ಎಚ್.ನಾಗೇಶ್ ಗಮನಕ್ಕೂ ತರಲಾಗಿದೆ.
    ನಗವಾರ ಎನ್.ಆರ್.ಸತ್ಯಣ್ಣ ಎಪಿಎಂಸಿ ನಿರ್ದೇಶಕ, ಎನ್.ವಡ್ಡಹಳ್ಳಿ ಉಪಮಾರುಕಟ್ಟೆ ಮುಳಬಾಗಿಲು

    ಎನ್.ವಡ್ಡಹಳ್ಳಿ ಉಪಮಾರುಕಟ್ಟೆಗೆ ಬರುವ ರೈತರಿಗೆ ವಿಶ್ರಾಂತಿ ಗೃಹ ನಿರ್ಮಿಸಬೇಕು. ಮಳೆಯಿಂದ ಟೊಮ್ಯಾಟೊ ತೋಟಗಳಲ್ಲಿ ನಷ್ಠಕ್ಕೆ ಒಳಗಾಗಿದ್ದು, ಸರ್ಕಾರ ವಿಶೇಷ ಕಾಳಜಿವಹಿಸಬೇಕು.
    ವೆಂಕಟರೆಡ್ಡಿ, ಪೊಂಬರಹಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts