ಮದ್ವೆಗೂ ಮುನ್ನ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದ ತೆಲುಗು ನಟಿ! ಆಕೆ ಕೊಟ್ಟ ಕಾರಣ ಹೀಗಿದೆ…

Shree Rapaka
Published on

ಹೈದರಾಬಾದ್​: ಕೆಲ ಸೆಲೆಬ್ರಿಟಿಗಳಿಗೆ ಕೈಯಲ್ಲಿ ಕೆಲಸ ಇಲ್ಲದಿದ್ದರೂ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಅದಕ್ಕೆ ಕಾರಣ ಅವರು ಆಡುವ ಬೇಕಾ ಬಿಟ್ಟಿ ಮಾತುಗಳು. ಬಾಯಿಗೆ ಬಂದಂತೆ ಏನೇನೋ ಮಾತನಾಡಿ ವಿವಾದವನ್ನು ಸೃಷ್ಟಿಸುತ್ತಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವುದು ಇತ್ತೀಚೆಗೆ ಒಂದು ಖಯಾಲಿ ಆಗಿದೆ.

ಇದೀಗ ತೆಲುಗು ನಟಿ ಶ್ರೀ ರಾಪಕಾ ಈ ಸೆಲೆಬ್ರಿಟಿಗಳ ಸಾಲಿಗೆ ಸೇರಿಕೊಂಡಿದ್ದಾರೆ. ವಿವಾದಿತ ನಿರ್ದೇಶಕರೆಂದೇ ಖ್ಯಾತಿಯಾಗಿರುವ ರಾಮ್​ ಗೋಪಾಲ್​​ ವರ್ಮಾರ ನಗ್ನ ಸಿನಿಮಾದಲ್ಲಿ ರಾಪಕಾ ನಟಿಸಿದ್ದಾರೆ. ಅಲ್ಲದೆ, ದೇಶಮುದುರು, ಚಂದಮಾಮ ಮತ್ತು ನಚ್ಚವುಲೆ ಸೇರಿದಂತೆ ಕೆಲ ಸಿನಿಮಾದಗಳಲ್ಲಿ ಫ್ಯಾಶನ್​ ಡಿಸೈನರ್​ ಆಗಿಯು ಕೆಲಸ ಮಾಡಿದ್ದಾರೆ.

ಆರ್​ಜಿವಿ ನಿರ್ದೇಶನದ ನಗ್ನಂ ಸಿನಿಮಾ ಮೂಲಕ ಶ್ರೀ ರಾಪಕಾ ಮುಖ್ಯವಾಹಿನಿಗೆ ಬಂದರು. ಅಲ್ಲದೆ, ಇತ್ತೀಚೆಗೆ ನಡೆದ ಬಿಗ್​ಬಾಸ್ ಶೋನಲ್ಲೂ ಇವರು ಭಾಗವಹಿಸಿದ್ದಾರೆ. ಸದ್ಯ ಸಿನಿಮಾಗಳ ಅವಕಾಶ ಕಡಿಮೆ ಇದ್ದರೂ ತಮ್ಮ ಬೋಲ್ಡ್​ ಕಾಮೆಂಟ್​ ಮೂಲಕ ರಾಪಕಾ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ರಾಪಕಾ ಮಾಡಿದ ಕಾಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆಗಿದೆ.

ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್​ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ರಾಪಕಾ, ಮದುವೆಯಾದ ಬಳಿಕ ನಿಮ್ಮ ಸಂಗಾತಿ ಗಂಡಸಲ್ಲ ಎಂದು ಗೊತ್ತಾದರೆ ನಿಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲಿ ಕಳೆಯಬೇಕಾಗುತ್ತದೆ ಎಂದರು. ಇಷ್ಟೇ ಅಲ್ಲದೆ, ತನ್ನ ಸ್ನೇಹಿತೆಯ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿ, ಉದಾಹರಣೆಯನ್ನೂ ನೀಡಿದರು.

ನನ್ನ ಸ್ನೇಹಿತೆ ವೈದ್ಯರೊಬ್ಬರನ್ನು ಮದುವೆ ಆಗಿದ್ದಳು. ಆಕೆಯ ಮೊಲದ ರಾತ್ರಿಯ ಸಮಯದಲ್ಲಿ ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬುದು ಆಕೆಗೆ ತಿಳಿದು ಬಹಳ ದುಃಖಿತಳಾದಳು. ಹೀಗಾಗಿ ಮದುವೆಗೂ ಮುಂಚೆ ಸೆಕ್ಸ್​ ಮಾಡಿದರೆ ತನ್ನ ಸಂಗಾತಿ ಸಲಿಂಗಕಾಮಿಯೋ? ಇಲ್ಲವೋ? ಎಂಬುದು ತಿಳಿಯುತ್ತದೆ. ನನ್ನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸ್​ ತುಂಬಾ ಮುಖ್ಯ. ಅದನ್ನು ಕೊಡಲಾಗದವನ್ನು ಮದುವೆಯಾಗಿ ಪಶ್ಚತಾಪ ಪಡುವುದು ಸರಿಯಲ್ಲ ಎಂದು ರಾಪಕಾ ಹೇಳಿದ್ದಾರೆ.

ಇದೀಗ ರಾಪಕಾ ಅವರ ಬೋಲ್ಡ್​ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೆಲವರು ಆಕೆಯನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಆಕೆಯ ಕಾಮೆಂಟ್‌ಗಳನ್ನು ವಿರೋಧಿಸುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶಗಳು ಸಿಗದಿದ್ದರೆ ಮುಖ್ಯವಾಹಿನಿಯಲ್ಲಿ ಇರಲು ಇಂತಹ ಕಾಮೆಂಟ್​ಗಳನ್ನು ಮಾಡುತ್ತಾರೆ ಎಂದು ಕೆಲವರು ಟೀಕಾಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net