More

    ಕ್ಷಮೆಯಾಚಿಸಿದ ‘ಟೋಕಿಯೋ ಒಲಿಂಪಿಕ್ಸ್​’ ಸಂಘಟಕರು… ಕಾರಣವೇನು ಗೊತ್ತಾ..?

    ಜಪಾನ್: ಟೋಕಿಯೋ ಒಲಿಂಪಿಕ್ಸ್​​ನ ಉದ್ಘಾಟನಾ ದಿನದಂದು ಅಪಾರ ಪ್ರಮಾಣದ ಆಹಾರ ವ್ಯರ್ಥವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ವಿಡಿಯೋಗಳು ಹರಿದಾಡುತ್ತಿದ್ದು, ಈ ಬಗ್ಗೆ ಸಂಘಟಕರು ಕ್ಷಮೆಯಾಚಿಸಿದ್ದಾರೆ.

    ಇದನ್ನೂ ಓದಿ: ಐಸಿಸಿ ಟಿ-ಟ್ವೆಂಟಿ ರ್ಯಾಂಕಿಂಗ್: ಅಗ್ರ 10ರೊಳಗೆ ಸ್ಥಾನ ಉಳಿಸಿಕೊಂಡ ಕೊಹ್ಲಿ, ರಾಹುಲ್

    ಜುಲೈ 23 ರಂದು ಟೋಕಿಯೋ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಅಪಾರ ಪ್ರಮಾಣದ ಆಹಾರ ವ್ಯರ್ಥವಾಗಿತ್ತು.
    ಬಳಸದ ಸಾವಿರಾರು ಊಟದ ಬಾಕ್ಸ್​​ಗಳು ಕ್ರೀಡಾಂಗಣದಲ್ಲಿ ವ್ಯರ್ಥವಾಗಿ ಬಿದ್ದಿದ್ದವು. ಈ ಬಗ್ಗೆ ಟೋಕಿಯೋ ಬ್ರಾಡ್​​ಕಾಸ್ಟಿಂಗ್ ಸಿಸ್ಟಮ್ ಟೆಲಿವಿಸನ್ ಸಂಸ್ಥೆ ಕಳೆದ ವಾರ ವರದಿ ಸಹ ಮಾಡಿತ್ತು.

    ಅಪ್ರಾಪ್ತ ಮಲ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಆರೋಪಿ ಬಂಧನ

    ಈ ಬಗ್ಗೆ ಮಾಹಿತಿ ನೀಡಿರುವ ಟೊಕಿಯೋ ಒಲಿಂಪಿಕ್ಸ್​ 2020 ವಕ್ತಾರ ಮಸಾ ತಕಾಯ, ಅಪಾರ ಪ್ರಮಾಣದ ಆಹಾರ ವ್ಯರ್ಥವಾಗಿರುವುದು ನಿಜ. ಆದರೆ ಕಳೆದ ವಾರದಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಮತ್ತೊಮ್ಮೆ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಕ್ಷಮೆಯಾಚಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts