More

    ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು

    ನವದೆಹಲಿ: ಕಮ್ಯೂನಿಸ್ಟ್​ ಚೀನಾ ಇಡೀ ಜಗತ್ತಿಗೆ ಕರೊನಾ ಹಂಚುವ ಮೂಲಕವಷ್ಟೇ ಗಂಡಾಂತರ ತಂದಿಟ್ಟಿಲ್ಲ, ಬದಲಾಗಿ ನೆರೆಯ ಹಾಗೂ ಗಡಿ ರಾಷ್ಟ್ರಗಳೊಂದಿಗೆ ಸದಾ ವಿವಾದಗಳನ್ನು ಹುಟ್ಟು ಹಾಕುತ್ತ ತನ್ನ ಪಾಳೇಗಾರಿಕೆಯನ್ನು ಮೆರೆಯುತ್ತಿದೆ. ಇದನ್ನು ಮಟ್ಟ ಹಾಕಲೆಂದೇ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಿವೆ.

    ಅಮೆರಿಕ ಸೇರಿ ಎಂಟು ದೇಶಗಳ ಸಂಸದರು ಚೀನಾ ಮೇಲೆ ಅಂತರ ಸಂಸದೀಯ ಒಕ್ಕೂಟ (IPAC) ರಚಿಸಿಕೊಂಡಿದ್ದಾರೆ. ಇದೊಂದು ಪಕ್ಷಾತೀತ, ಅಂತಾರಾಷ್ಟ್ರೀಯ ಜನಪ್ರತಿನಿಧಿಗಳ ಒಕ್ಕೂಟವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಕಮ್ಯೂನಿಸ್ಟ್​ ಆಡಳಿತದ ಚೀನಾದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸಲಿವೆ.

    ಇದನ್ನೂ ಓದಿ; ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…! 

    ಎಂಟು ರಾಷ್ಟ್ರಗಳ ಎಲ್ಲ ಪಕ್ಷಗಳ ಹಿರಿಯ ಜನಪ್ರತಿನಿಧಿಗಳು ಇದರ ಭಾಗವಾಗಲಿದ್ದಾರೆ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಲಿದ್ದಾರೆ. ಅಮೆರಿಕ ಫ್ಲೋರಿಡಾದ ಹಿರಿಯ ಸೆನೆಟರ್​ ಮಾರ್ಕೊ ರುಬಿಯೋ ಈ ಘೋಷಣೆ ಮಾಡಿದ್ದಾರೆ. ಚೀನಾ ಇಡೀ ಜಗತ್ತಿಗೇ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.

    ಒಕ್ಕೂಟದಲ್ಲಿ ಅಮೆರಿಕ, ಜರ್ಮನಿ, ಯುನೈಟೆಡ್​ ಕಿಂಗ್​ಡಂ, ಜಪಾನ್​, ಆಸ್ಟ್ರೇಲಿಯಾ, ಕೆನಡಾ, ಸ್ವೀಡನ್​, ನಾರ್ವೆ ಹಾಗೂ ಯುರೋಪ್​ ಸಂಸತ್​ ಸದಸ್ಯರು ಇದರ ಭಾಗವಾಗಲಿದ್ದಾರೆ.

    ಇದನ್ನೂ ಓದಿ; ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…

    ಮುಕ್ತ, ನಿರ್ಭೀತ ಹಾಗೂ ನಿಯಮಗಳಿಗೆ ಬದ್ಧವಾದ ಅಂತಾರಾಷ್ಟ್ರೀಯ ಆದೇಶಗಳಿಗೆ ಅನುಸಾರವಾಗಿ ನಡೆಯಲಿದೆ ಒಕ್ಕೂಟ ಎಂದು ಅವರು ಹೇಳಿದ್ದಾರೆ. ಅದು ಮಾನವ ಘನತೆಯನ್ನು ಎತ್ತಿ ಹಿಡಿಯುತ್ತದೆ. ಇಂಥದ್ದೊಂದು ಕಾರ್ಯ ಸಾಧ್ಯವಾಗಬೇಕಾದರೆ ಸಮಾನ ಮನಸ್ಕರು ಆಡಳಿತ ಮತ್ತು ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ರುಬಿಯೋ ಹೇಳಿದ್ದಾರೆ.

    ಜತೆಗೆ, ಇದು 1900 ಕಾಲವಲ್ಲ, 19ನೇ ಶತಮಾನದ ಪಾಳೇಗಾರಿಕೆಯನ್ನು ಚೀನಾ ಈಗ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಒಕ್ಕೂಟದ ರಚನೆಯನ್ನು ಚೀನಾ ಮುಖವಾಣಿಯಾದ ಗ್ಲೋಬಲ್​ ಟೈಮ್ಸ್​ ಖಂಡಿಸಿದೆ. ಜಾಗತೀಕರಣದ 21ನೇ ಶತಮಾನದಲ್ಲಿ ಚೀನಾ ವಿರೋಧಿ ಒಕ್ಕೂಟವು ಒಂದು ವಿಫಲ ಯತ್ನವಾಗಲಿದೆ ಎಂದು ಹೇಳಿದೆ.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts