More

    ಸೋರುತ್ತಿದೆ ತೀರ್ಥಹಳ್ಳಿ ಕ್ಷೇತ್ರ ಸಂಪನ್ಮೂಲ ಕಚೇರಿ

    ತೀರ್ಥಹಳ್ಳಿ: ಕನಿಷ್ಠ ನಿರ್ವಹಣೆಯೂ ಇಲ್ಲದ ಇಲ್ಲಿನ ಕ್ಷೇತ್ರ ಸಂಪನ್ಮೂಲ ಇಲಾಖೆ ಕಚೇರಿ ಹಾಳು ಬಿದ್ದ ಕಟ್ಟಡದಂತಾಗಿದ್ದು ಮಳೆ ನೀರಿನ ಸೋರಿಕೆಯಿಂದ ತಾರಸಿಗೆ ಮಾಡಿದ ಗಾರೆ ತುಂಡುಗಳು ಉದುರಿ ಬೀಳುತ್ತಿವೆ. ಅಲ್ಲದೇ ಕಿಟಿಕಿ ಬಾಗಿಲುಗಳು ತುಕ್ಕು ಹಿಡಿದು ಉದುರುತ್ತಿದ್ದು ಈ ಕಟ್ಟಡದ ವ್ಯವಸ್ಥೆ ಬಗ್ಗೆಯೇ ಹೇಸಿಗೆ ಹುಟ್ಟಿಸುವಂತಿದೆ.

    2009ರಲ್ಲಿ ನಿರ್ಮಿಸಲಾದ ಕಟ್ಟಡದ ಕಾಮಗಾರಿ ಆರಂಭದಲ್ಲೇ ಅತ್ಯಂತ ಕಳಪೆಯಾಗಿತ್ತು ಎಂಬ ದೂರಿದೆ. ಈ ಕಟ್ಟಡದಲ್ಲಿ ಮಳೆ ನೀರು ಸೋರದಿರುವ ಜಾಗವೇ ಇಲ್ಲ. ಕಚೇರಿಯಲ್ಲಿರುವ ದಾಖಲೆಗಳು ಪೀಠೋಪಕರಣಗಳನ್ನು ರಕ್ಷಿಸಿಕೊಳ್ಳಲು ಸಿಬ್ಬಂದಿ ಪರದಾಡುವಂತಾಗಿದೆ. ಗೋಡೆಗಳಲ್ಲಿ ನೀರು ಇಳಿಯುತ್ತಿದ್ದು ಇಡೀ ಕಟ್ಟಡ ಪಾಚಿ ಕಟ್ಟಿರುವ ಕಾರಣ ಉಸಿರಾಟದ ತೊಂದರೆ ಮತ್ತು ಅಲರ್ಜಿ ಸಮಸ್ಯೆ ಇರುವ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಒಂದು ದಿನವೂ ಕೆಲಸ ಮಾಡಲು ಸಾಧ್ಯವಿಲ್ಲ.
    ಸುಣ್ಣಬಣ್ಣ ಕಾಣದೆ ದಶಕಗಳೇ ಕಳೆದಿರುವ ಈ ಕಟ್ಟಡದ ಆಕಾರವೂ ವಿಭಿನ್ನವಾಗಿದೆ. ಕಳಚಿ ಬೀಳುತ್ತಿರುವ ಕಿಟಿಕಿ ಗಾಜುಗಳು, ಮುಚ್ಚಲು ಬಾರದ ಬಾಗಿಲುಗಳು, ಶೌಚ ಗೃಹಗಳು ಗಬ್ಬೆದ್ದು ನಾರುತ್ತಿದೆ. ಮಳೆ ನೀರಿನಿಂದ ತೊಯ್ದಿರುವ ವಿದ್ಯುತ್ ಸ್ವಿಚ್‌ಗಳು ಮುಟ್ಟಿದರೆ ಶಾಕ್ ಹೊಡೆಯುತ್ತವೆ. ಕಚೇರಿಯಲ್ಲಿರುವ ಇನ್ವರ್ಟ್ರ್ ಮುಂತಾದ ಎಲೆಕ್ಟಾçನಿಕ್ ಉಪಕರಣಗಳೂ ಕೆಟ್ಟು ನಿಂತಿವೆ.
    ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುವಂತಾಗಿದೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ತೋಚುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿÀದ ಸಿಬ್ಬಂದಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮಳೆಗಾಲದಲ್ಲಿ ಇಡೀ ಕಟ್ಟಡ ಸೋರುತ್ತಿರುವ ಕಾರಣ ಎಲ್ಲೆಡೆ ನೀರು ನಿಂತಿರುತ್ತದೆ. ಕಟ್ಟಡಕ್ಕೆ ಕನಿಷ್ಠ ಮೇಲ್ಛಾವಣಿಯೂ ನಿರ್ಮಿಸಿಲ್ಲ. ಇಲ್ಲಿ ಕೆಲಸ ಮಾಡುವುದಕ್ಕೂ ಹಿಂಸೆಯಾಗುತ್ತಿದೆ. ಕಟ್ಟಡದ ಸಮಸ್ಯೆ ಕುರಿತಂತೆ ಶಾಸಕರ ಗಮನಕ್ಕೆ ತರಲಾಗಿದೆ.
    | ಗಣೇಶ್
    ಪ್ರಭಾರ ಕ್ಷೇತ್ರ ಸಂಪನ್ಮೂಲ ಅಽಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts