More

    ಟಿಂಬರ್ ಲಾರಿ ಸಂಚಾರದಿಂದ ಹೂವಿನಹಕ್ಲು-ಕಾಫಿ ಕೆರೆಹಕ್ಲು ಮಾರ್ಗದಲ್ಲಿ ಸಂಚಾರ ದುಸ್ತರ

    ಜಯಪುರ: ಒಂದು ವಾರದಿಂದ ಸುರಿದ ಮಳೆಗೆ ಹಿರೇಗದ್ದೆ ಗ್ರಾಪಂನ ಹೂವಿನಹಕ್ಲು-ಕಾಫಿ ಕೆರೆಹಕ್ಲು ರಸ್ತೆ ಕೆಸರು ಗದ್ದೆಯಂತಾಗಿದೆ. ನಾಗರಿಕರು, ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

    ಹೂವಿನಹಕ್ಲುವಿನಿಂದ ಶ್ರೀಹೊನ್ನೆ, ಸೋಪನ್ಕೆರೆ, ಕೆರೆಹಕ್ಲು ಹಾಗೂ ಕಲ್ಗಿರಿ, ಕಾಫಿ ಕೆರೆಹಕ್ಲು ಗ್ರಾಮಗಳನ್ನು ಸಂರ್ಪಸುವ ಏಕೈಕ ರಸ್ತೆ ಇದು. 7 ಕಿಮೀ ರಸ್ತೆಗೆ ಕೇವಲ 200 ಮೀಟರ್ ಜಲ್ಲಿ ಹಾಕಲಾಗಿದೆ. ಉಳಿದ ರಸ್ತೆ ಮಣ್ಣಿನಿಂದ ಕೂಡಿದೆ. ಸ್ವಲ್ಪ ಮಳೆ ಬಂದರೂ ಕೆಸರಾಗುತ್ತದೆ. ಇದರ ನಡುವೆ ಎಸ್ಟೇಟ್ ಮಾಲೀಕರ ಟಿಂಬರ್ ಲಾರಿಗಳು ಓಡಾಡಿ ಸಂಚಾರಕ್ಕೆ ಸಾಧ್ಯವಾಗದಷ್ಟು ಕೆಸರಾಗಿದೆ. ರಸ್ತೆಯಲ್ಲಿ ತುಂಬಿರುವ ಕೆಸರಿನಿಂದಾಗಿ ಪಾದಚಾರಿಗಳು, ಬೈಕ್ ಸವಾರರು ಪ್ರತಿದಿನ ಬಿದ್ದು ಎದ್ದು ಸಾಗಬೇಕಿದೆ.

    ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವಿನಿಯೋಗಿಸುತ್ತಿದ್ದರೂ ಇಲ್ಲಿನ ರಸ್ತೆ ಮಾತ್ರ ಡಾಂಬರು ಕಂಡಿಲ್ಲ. 80ಕ್ಕೂ ಹೆಚ್ಚು ಮನೆಗಳಿರುವ, 350ಕ್ಕೂ ಹೆಚ್ಚು ಜನರು ವಾಸಿಸುತ್ತಿರುವ ಈ ಗ್ರಾಮದ ರಸ್ತೆ ಸಂಪೂರ್ಣ ನಿರ್ಲಕ್ಷ್ಯ್ಕೊಳಗಾಗಿದೆ. ಗ್ರಾಪಂ ಪ್ರತಿ ವರ್ಷ ತನ್ನ ಸೀಮಿತ ಅನುದಾನದಲ್ಲಿ ಚರಂಡಿ ದುರಸ್ತಿ ಮಾಡಿ, ಗ್ರಾವೆಲ್ ಮಣ್ಣು ಹಾಕಿ ರಸ್ತೆಗೆ ತೇಪೆ ಹಾಕುವ ಕೆಲಸ ಮಾಡುತ್ತಿದೆ. ಆದರೆ ಶಾಸಕರಾಗಲಿ, ಈ ಭಾಗದ ಜಿಪಂ ಸದಸ್ಯರಾಗಲಿ ರಸ್ತೆ ಅಭಿವೃದ್ಧಿಗೆ ಗಮನಹರಿಸಿಲ್ಲ. ಕೂಡಲೇ ಈ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts