More

    ಪುಟ್ಟ ಮಗು ಹೇಳಿದಂತೆ ಕೇಳುವುದು ಈ ಆನೆ; ಮುದ್ದುಕ್ಕಿಸುವ ಈ ಟಿಕ್​ಟಾಕ್​ ವಿಡಿಯೋ ಎಲ್ಲಿಯದು ಗೊತ್ತಾ?

    ‘ಒಂದು ಪುಟ್ಟ ಹೆಣ್ಣು ಮಗು ಗುಲಾಬಿ ಬಣ್ಣದ ಫ್ರಾಕ್​ ತೊಟ್ಟು, ಎರಡು ಜುಟ್ಟ ಮಾಡಿಕೊಂಡು ನೀರು ತುಂಬಿದ ರಸ್ತೆಯ ಮೇಲೆ ರಾಣಿಯಂತೆ ಹೆಜ್ಜೆ ಹಾಕುತ್ತ, ನಗುತ್ತ ಬರುತ್ತಾಳೆ…ಅವಳನ್ನು ದೊಡ್ಡ ಆನೆಯೊಂದು ಗಂಭೀರವಾದ ನಡಿಗೆಯಲ್ಲಿ ಹಿಂಬಾಲಿಸುತ್ತದೆ…ದಾಸನಾಗು..ವಿಶೇಷನಾಗು ಎಂಬ ದಾಸರ ಪದ್ಯ ಹಿನ್ನೆಲೆಯಲ್ಲಿ ಕೇಳುತ್ತದೆ…’ ಈ ಟಿಕ್​ಟಾಕ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಇದನ್ನೂ ಓದಿ: ಕೇರಳ ಜಲಸಾರಿಗೆ ಇಲಾಖೆ ಪ್ರಶಂಸೆಗಿಟ್ಟಿಸಿದ್ದು ಯಾಕೆ ಗೊತ್ತಾ?

    ವಿಡಿಯೋವನ್ನು ನೋಡಿದಷ್ಟೂ ನೋಡಬೇಕು ಎನ್ನಿಸುತ್ತದೆ. ಬರೀ ಇಷ್ಟೇ ಅಲ್ಲ, ಆ ದೊಡ್ಡ ಆನೆ ಮತ್ತು ಪುಟ್ಟ ಮಗು ಒಂದಾಗಿ ಆಟವಾಡುವ ಇನ್ನೊಂದು ವಿಡಿಯೋ ಕೂಡ ವೈರಲ್​ ಆಗಿದೆ. ಮಗು ಆನೆಗೆ ತಿನ್ನಲು ಆಹಾರ ಕೊಡುವುದನ್ನು, ಅದರ ಮೇಲೆ ಕುಳಿತು ಹೋಗುವುದನ್ನು, ಸ್ವಲ್ಪವೂ ಭಯವಿಲ್ಲದೆ ಅದರ ಬಳಿ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

    ವಿಡಿಯೋ ವೈರಲ್​ ಆದಾಗಿನಿಂದ ಅದೆಷ್ಟೋ ಜನರಿಗೆ ಕುತೂಹಲ. ಬಾಲಕಿ ಯಾರು…ಯಾವ ಊರಲ್ಲಿ ಇದು. ಇಷ್ಟು ಪುಟ್ಟ ಹುಡುಗಿಗೂ, ಆನೆಗೂ ಅದೆಂಥಾ ಸ್ನೇಹ ಎಂಬ ಪ್ರಶ್ನೆಗಳೂ ಸೋಷಿಯಲ್ ಮೀಡಿಯಾದಲ್ಲಿ ಕೇಳಲ್ಪಟ್ಟಿವೆ.

    ಈ ವಿಡಿಯೋ ಕೇರಳದ ತಿರುವನಂತಪುರಂದು. ಬಾಲಕಿಗೆ ಎರಡು ವರ್ಷ. ಉಮಾದೇವಿ ಎಂಬ ಹೆಸರಿನ ಆನೆಗೆ 31 ವರ್ಷ. ಬಾಲಕಿಯ ಕುಟುಂಬದೊಂದಿಗೆ ಈ ಆನೆ ಕಳೆದ 7ವರ್ಷಗಳಿಂದಲೂ ಇದೆ. ಬಾಲಕಿ ಹುಟ್ಟಿದಾಗಿನಿಂದಲೂ ಆನೆ ಅದರ ಕಾಳಜಿ ಮಾಡುತ್ತಿದೆ. ಸ್ವಲ್ಪವೂ ತೊಂದರೆ ಕೊಡುವುದಿಲ್ಲ ಎಂದು ಆಕೆಯ ಮನೆಯವರು ಹೇಳಿದ್ದಾರೆ. ಮಗು ಹೇಳಿದಂತೆ ಆನೆ ಕೇಳುತ್ತದೆ. ಅದರೊಂದಿಗೆ ಆಟವಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಧಮ್​ ಎಳೆಯೋದಕ್ಕೆ ಈಕೆಗೆ ದಿನಕ್ಕೆ 1.5 ಲಕ್ಷ ರೂ. ಸಂಬಳ….! ಸೋಷಿಯಲ್​ ಮೀಡಿಯಾದಿಂದ ಆದ್ಳು ಬ್ರಾಂಡ್​ ಅಂಬಾಸಿಡರ್​

    ಲಾಕ್​ಡೌನ್​ ಸಂದರ್ಭದಲ್ಲಿ ಮಾಡಿದ ಟಿಕ್​ಟಾಕ್​ ವಿಡಿಯೋಗಳನ್ನು ಕುಟುಂಬದವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿದ್ದಾರೆ. ಅದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts