More

    ಸಂಭವನೀಯ ಹಿಂಸಾಚಾರ ಅಮೆರಿಕದಲ್ಲಿ ಕಟ್ಟೆಚ್ಚರ; 25,000 ನ್ಯಾಷನಲ್ ಗಾರ್ಡ್​ಗಳ ಸುರಕ್ಷಾ ಕವಚ

    ಅಮೆರಿಕದಲ್ಲಿ ರಿಪಬ್ಲಿಕನ್ನರ ಆಳ್ವಿಕೆ ಮುಕ್ತಾಯವಾಗುತ್ತಿದ್ದು, ಡೆಮಾಕ್ರಟನ್ನರ ಆಳ್ವಿಕೆಗೆ ದಿನಗಣನೆ ಆರಂಭವಾಗಿದೆ. ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಂಸಾಚಾರದ ಕಾರಣ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣದ ದಿನವಾದ ಜನವರಿ 20ರಂದು ರಾಷ್ಟ್ರವ್ಯಾಪಿ ಸಶಸ್ತ್ರ ಹಿಂಸಾಚಾರ ನಡೆಯಬಹುದೆಂಬ ಮುನ್ನೆಚ್ಚರಿಕೆ ಕಾರಣ ಅಮೆರಿಕದಾದ್ಯಂತ ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರವನ್ನು ಸರ್ಕಾರ ಘೋಷಿಸಿದೆ. ಪದಗ್ರಹಣ ದಿನಕ್ಕೆ ಸಂಬಂಧಿಸಿದ ವಿದ್ಯಮಾನಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

    ಅಮೆರಿಕದಲ್ಲಿ 2020ರ ಅಧ್ಯಕ್ಷೀಯ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಫಲಿತಾಂಶ ಬಂದ ಹೊರತಾಗಿಯೂ ಅದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿರಲಿಲ್ಲ. ಕೋರ್ಟ್ ಮೆಟ್ಟಿಲೇರಿದರೂ ಚುನಾವಣಾ ಮತ ಅಕ್ರಮದ ಅವರ ಆರೋಪಕ್ಕೆ ಬಲ ಬರಲಿಲ್ಲ. ಕೊನೆಗೆ ಸಂಸತ್ತಿನ ಮೂಲಕ ಚುನಾವಣಾ ಫಲಿತಾಂಶ ಅಕ್ರಮ ಸಾಬೀತು ಮಾಡಲೆತ್ನಿಸಿ ಸೋತರು. ಈ ನಡುವೆ, ಜನವರಿ 6ರಂದು ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರ ಗೆಲುವನ್ನು ದೃಢೀಕರಿಸುವ ಸಂಸತ್ತಿನ ಅಧಿವೇಶನದ ವೇಳೆ ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಜತೆಗೆ ಎರಡನೇ ಬಾರಿ ಪದಚ್ಯುತಿ ನಿಲುವಳಿ ಎದುರಿಸಬೇಕಾಗಿ ಬಂತು. ಆ ವಿಚಾರ ಸೆನೆಟ್​ನಲ್ಲಿ ಮತಕ್ಕೆ ಬರಲಿದ್ದು, ವಿಚಾರಣೆ ನಡೆಯಲಿದೆ. ಜಿದ್ದಿನ ರಾಜಕೀಯ ಸಾಧಿಸುತ್ತಿರುವ ಟ್ರಂಪ್ ಅವರು ಬೈಡೆನ್ ಪದಗ್ರಹಣದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಸುದ್ದಿಯೂ ಹರಡಿದೆ. ಈ ನಡುವೆ, ಪದಚ್ಯುತಿ ನಡೆದರೆ ರಾಷ್ಟ್ರದಾದ್ಯಂತ ಮತ್ತೆ ಸಶಸ್ತ್ರ ಹಿಂಸಾಚಾರ ನಡೆಯಲಿದೆ ಎಂಬ ಸುಳಿವನ್ನು ಗುಪ್ತಚರ ದಳ ನೀಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ಘೋಷಣೆಯಾಗಿದೆ.

    ವಲಸಿಗರ ಪರ ತೀರ್ಮಾನ: ಅಮೆರಿಕದಲ್ಲಿರುವ 1.1 ಕೋಟಿ ವಲಸಿ ಗರಿಗೆ ಕಾನೂನುಬದ್ಧ ಸ್ಥಾನಮಾನ ಕಲ್ಪಿ ಸುವ ವಿಚಾರದಲ್ಲಿ ಬೈಡೆನ್ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ ವಲಸೆ ನೀತಿ ಕುರಿತೂ ಮೊದಲ ದಿನವೇ ಘೋಷಣೆ ಮಾಡುವ ನಿರೀಕ್ಷೆ ಇದೆ. ವಲಸಿಗರಿಗೆ ಸಂಬಂಧಿಸಿದ ಭರವಸೆ ಈಡೇರಿಸುವಂತೆ ಒತ್ತಾಯಿಸಿ 4 ಸಾವಿರದಷ್ಟು ಹಾಂಡರಸ್ ವಲಸಿಗರು ಅಮೆರಿಕದ ಗಡಿಭಾಗಕ್ಕೆ ತಲುಪಿದ್ದಾರೆ.

    ಮೊದಲ ದಿನವೇ ಬೀಳಲಿದೆ ಡಜನ್ ಆದೇಶಗಳಿಗೆ ಅಂಕಿತ: ಜೋ ಬೈಡೆನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಡಜನ್ ಆದೇಶಗಳಿಗೆ ಅಂಕಿತ ಹಾಕಲಿದ್ದಾರೆ. ಇದರಲ್ಲಿ ನಾಲ್ಕು ಒಂದಕ್ಕೊಂದು ಪೂರಕವಾದುದು. ಅವುಗಳು, ಕೋವಿಡ್ 19 ಸಂಕಷ್ಟ, ಆರ್ಥಿಕ ಸಂಕಷ್ಟ, ಹವಾಮಾನ ವೈಪರೀತ್ಯ, ಜನಾಂಗೀಯ ಪಾಲುದಾರಿಕೆ ಮತ್ತು ಸಮಾನತೆಯ ಸಂಕಷ್ಟಕ್ಕೆ ಸಂಬಂಧಿಸಿದ್ದಾಗಿದೆ ಎಂದು ಶ್ವೇತಭವನದ ನಿಯೋಜಿತ ಸಿಬ್ಬಂದಿ ಮುಖ್ಯಸ್ಥ ರಾನ್ ಕ್ಲೈನ್ ತಿಳಿಸಿದ್ದಾರೆ. ಮೊದಲ ಹತ್ತು ದಿನಗಳ ಅವಧಿಯಲ್ಲಿ ನಿರ್ಣಾಯಕ ಆದೇಶಗಳಿಗೆ ಬೈಡೆನ್ ಸಹಿ ಹಾಕಲಿದ್ದಾರೆ. ತುರ್ತು ನಿರ್ಣಯಗಳನ್ನು ತೆಗೆದುಕೊಂಡು ಅಮೆರಿಕವನ್ನು ಮತ್ತೆ ಜಗತ್ತಿನ ಮುಂಚೂಣಿಗೆ ತರುವ ಪ್ರಯತ್ನವನ್ನು ಮಾಡಲಿದ್ದಾರೆ. ಫೆಡರಲ್ ಸ್ಟೂಡೆಂಟ್ ಲೋನ್, ಪ್ಯಾರಿಸ್ ಹವಾಮಾನ ಒಡಂಬಡಿಕೆಗೆ ಮರುಸೇರ್ಪಡೆ, ಮುಸ್ಲಿಮರ ಮೇಲಿನ ನಿಷೇಧ ಹಿಂಪಡೆಯುವುದು ಮುಂತಾದ ಕ್ರಮಗಳು ಇದರಲ್ಲಿ ಸೇರಿವೆ. 100 ದಿನಗಳ ಸವಾಲುಗಳ ಅನಾವರಣವನ್ನೂ ಮಾಡಲಿದ್ದು, ಅದರ ಈಡೇರಿಕೆಗೆ ಶ್ರಮವಹಿಸಲಿದ್ದಾರೆ. ಜನವರಿ 25ರಿಂದ ಫೆಬ್ರವರಿ 1ರ ನಡುವೆ ಪ್ರಮುಖ ಕಾರ್ಯಕಾರಿ ಆದೇಶ, ಕ್ಯಾಬಿನೆಟ್ ನಿರ್ದೇಶನ, ಮೆಮೊರಾಂಡಗಳಿಗೆ ಸಹಿಹಾಕಲಿದ್ದಾರೆ ಎಂದು ಕ್ಲೈನ್ ವಿವರಿಸಿದ್ದಾರೆ.

    ಬೈಡೆನ್ ತಂಡದಲ್ಲಿ 20 ಭಾರತೀಯ-ಅಮೆರಿಕನ್ನರು: ಜೋ ಬೈಡೆನ್ ಅವರ ಆಡಳಿತ ತಂಡದಲ್ಲಿ 20 ಭಾರತೀಯ-ಅಮೆರಿಕನ್ನರಿದ್ದಾರೆ. ಈ ಪೈಕಿ 17 ಮಂದಿ ಅಮೆರಿಕದ ಶಕ್ತಿ ಕೇಂದ್ರ ಶ್ವೇತಭವನದಲ್ಲೇ ಕೆಲಸ ಮಾಡಲಿದ್ದಾರೆ. ಇವರಲ್ಲಿ 13 ಮಂದಿ ಮಹಿಳೆಯರು. ಅಮೆರಿಕದ ಜನಸಂಖ್ಯೆಯಲ್ಲಿ ಶೇಕಡ 1ರ ಪ್ರಮಾಣದಲ್ಲಿರುವ ಭಾರತೀಯ ಅಮೆರಿಕನ್ನರಿಗೆ ಇಷ್ಟು ಪ್ರಾತಿನಿಧ್ಯ ಸಿಕ್ಕಿರುವುದು ಜಗತ್ತಿನ ಗಮನಸೆಳೆದಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಾಯಿ ಭಾರತದವರು. ಈ ಹುದ್ದೆಗೇರುತ್ತಿರುವ ಮೊದಲ ಭಾರತೀಯ ಮೂಲದ ಮತ್ತು ಆಫ್ರಿಕನ್ ಅಮೆರಿಕನ್ ಮಹಿಳೆ ಎಂಬ ಕೀರ್ತಿಗೆ ಅವರು ಭಾಜನರಾಗುತ್ತಿದ್ದಾರೆ.

    • ನೀರಾ ಟಂಡನ್: ಡೈರೆಕ್ಟರ್ ಆಫ್ ಮ್ಯಾನೇಜ್​ವೆುಂಟ್ ಆಂಡ್ ಬಜೆಟ್
    • ಡಾ.ವಿವೇಕ್ ಮೂರ್ತಿ: ಯುಎಸ್ ಸರ್ಜನ್ ಜನರಲ್
    • ವನಿತಾ ಗುಪ್ತಾ: ಅಸೋಸಿಯೇಟ್ ಅಟಾರ್ನಿ ಜನರಲ್ ಡಿಪಾರ್ಟ್​ವೆುಂಟ್ ಆಫ್ ಜಸ್ಟೀಸ್
    • ಉಜ್ರಾ ಝೆಯಾ: ಅಂಡರ್ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಸಿವಿಲಿಯನ್ ಸೆಕ್ಯೂರಿಟಿ, ಡೆಮಾಕ್ರಸಿ ಆಂಡ್ ಹ್ಯೂಮನ್ ರೈಟ್ಸ್
    • ಮಾಲಾ ಅಡಿಗ: ಫಸ್ಟ್ ಲೇಡಿ ಜಿಲ್ ಬೈಡೆನ್ ಅವರ ಪಾಲಿಸಿ ಡೈರೆಕ್ಟರ್
    • ಗರಿಮಾ ವರ್ವ: ಫಸ್ಟ್ ಲೇಡಿ ಕಚೇರಿಯ ಡಿಜಿಟಲ್ ಡೈರೆಕ್ಟರ್
    • ಸರ್ಬಿನಾ ಸಿಂಗ್: ವೈಟ್ ಹೌಸ್ ಡೆಪ್ಯೂಟಿ ಪ್ರೆಸ್ ಸೆಕ್ರೆಟರಿ
    • ಐಶಾ ಷಾ: ಪಾರ್ಟ್​ನರ್​ಶಿಪ್ ಮ್ಯಾನೇಜರ್, ವೈಟ್ ಹೌಸ್ ಆಫೀಸ್ ಆಫ್ ಡಿಜಿಟಲ್ ಸ್ಟ್ರಾಟಜಿ
    • ಸಮೀರಾ ಫಝಿಲಿ: ಡೆಪ್ಯೂಟಿ ಡೈರೆಕ್ಟರ್ ಯುಎಸ್ ನ್ಯಾಷನಲ್ ಎಕನಾಮಿಕ್ ಕೌನ್ಸಿಲ್, ವೈಟ್ ಹೌಸ್
    • ಭರತ್ ರಾಮಮೂರ್ತಿ: ಡೆಪ್ಯೂಟಿ ಡೈರೆಕ್ಟರ್ ಯುಎಸ್ ನ್ಯಾಷನಲ್ ಎಕನಾಮಿಕ್ ಕೌನ್ಸಿಲ್, ವೈಟ್ ಹೌಸ್
    • ಗೌತಮ್ ರಾಘವನ್: ಡೆಪ್ಯೂಟಿ ಡೈರೆಕ್ಟರ್ ಪ್ರೆಸಿಡೆನ್ಶಿಯಲ್ ಪರ್ಸೆನೆಲ್ ಆಫೀಸ್
    • ವಿನಯ್ ರೆಡ್ಡಿ: ಡೈರೆಕ್ಟರ್ ಸ್ಪೀಚ್ ರೈಟಿಂಗ್
    • ವೇದಾಂತ ಪಟೇಲ್: ಅಧ್ಯಕ್ಷರ ಅಸಿಸ್ಟೆಂಟ್ ಪ್ರೆಸ್ ಸೆಕ್ರಟರಿ
    • ತರುಣ್ ಛಾಬ್ರಾ: ಸೀನಿಯರ್ ಡೈರೆಕ್ಟರ್ ಟೆಕ್ನಾಲಜಿ ಆಂಡ್ ನ್ಯಾಷನಲ್ ಸೆಕ್ಯೂರಿಟಿ
    • ಸುಮೋನಾ ಗುಹಾ: ದಕ್ಷಿಣ ಏಷ್ಯಾ ಸೀನಿಯರ್ ಡೈರೆಕ್ಟರ್
    • ಶಾಂತಿ ಕಲಾತಿಲ್: ಕೋಆರ್ಡಿನೇಟರ್ ಫಾರ್ ಡೆಮಾಕ್ರಸಿ ಆಂಡ್ ಹ್ಯೂಮನ್ ರೈಟ್ಸ್
    • ಸೋನಿಯಾ ಅಗರವಾಲ್: ಸೀನಿಯರ್ ಅಡ್ವೈಸರ್ ಕ್ಲೈಮೇಟ್ ಪಾಲಿಸಿ ಆಂಡ್ ಇನ್ನೋವೇಶನ್, ಡೊಮೆಸ್ಟಿಕ್ ಕ್ಲೈಮೇಟ್ ಪಾಲಿಸಿ
    • ವಿದುರ್ ಶರ್ವ: ಪಾಲಿಸಿ ಅಡ್ವೈಸರ್ ಫಾರ್ ಟೆಸ್ಟಿಂಗ್, ಕೋವಿಡ್ 19 ರೆಸ್ಪಾನ್ಸ್ ಟೀಮ್
    • ನೇಹಾ ಗುಪ್ತಾ: ಅಸೋಸಿಯೇಟ್ ಕೌನ್ಸೆಲ್, ವೈಟ್ ಹೌಸ್
    • ರೀಮಾ ಷಾ: ಡೆಪ್ಯೂಟಿ ಅಸೋಸಿಯೇಟ್ ಕೌನ್ಸಲ್, ವೈಟ್ ಹೌಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts