More

    ಪಂಜರ ಮುರಿದು ಸಫಾರಿ ಪಾರ್ಕ್​ನಿಂದ ಹುಲಿ ಎಸ್ಕೇಪ್​: ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!

    ಕೊಚ್ಚಿ: ಕೇರಳದ ತಿರುವನಂತಪುರಂನಲ್ಲಿರುವ ನೆಯ್ಯರ್​ ಲಯನ್​ ಸಫಾರಿ ಪಾರ್ಕಿನಿಂದ 9 ವರ್ಷದ ಹುಲಿಯೊಂದು ಶನಿವಾರ ಮಧ್ಯಾಹ್ನ ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

    ಕಾಣೆಯಾದ ಎರಡು ಗಂಟೆಗಳ ಬಳಿಕ ಅಧಿಕಾರಿಗಳು ಹಾಗೂ ಸ್ಥಳೀಯ ಜನರ ತೀವ್ರ ಶೋಧದಿಂದಾಗಿ ಪಾರ್ಕಿನ ಒಳಗಡೆಯೇ ಹುಲಿ ಕಾಣಿಸಿಕೊಂಡಿತು. ಆದರೆ, ಅರವಳಿಕೆ ನೀಡಲು ಅಧಿಕಾರಿಗಳು ಬರುವಷ್ಟರಲ್ಲಿ ಹುಲಿ ಮತ್ತೆ ಕಾಣೆಯಾಗಿದೆ.

    ಹುಲಿಯನ್ನು ಎರಡು ದಿನಗಳ ಹಿಂದೆ ವಯನಾಡಿನ ಪುಲ್​ಪುಲ್ಲಿಯಿಂದ ನೆಯ್ಯರ್​ ಸಫಾರಿ ಪಾರ್ಕ್​ ಕರೆತರಲಾಗಿತ್ತು. ಶನಿವಾರ ಮಧ್ಯಾಹ್ನ ತನ್ನ ಪಂಜರದ ಕಂಬಿಗಳನ್ನು ಬಾಗಿಸಿ ತಪ್ಪಿಸಿಕೊಂಡಿದೆ ಎಂದು ಅದನ್ನು ನೋಡಿಕೊಳ್ಳುತ್ತಿದ್ದವರು ತಿಳಿಸಿದ್ದಾರೆ. ವಯನಾಡಿನಿಂದ ಕರೆತಂದಿದ್ದರಿಂದ ವಿಶೇಷ ಪಂಜರದಲ್ಲಿಟ್ಟು ಹುಲಿಯನ್ನು ನಿಗಾದಲ್ಲಿ ಇಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಒಂದು ಹನಿ ನೀರೂ ಚೆಲ್ಲಲಿಲ್ಲ! ಮೈಸೂರು-ಬೆಂಗ್ಳೂರು ರೈಲು ಮಾರ್ಗ ಚಮತ್ಕಾರ

    ಸಫಾರಿ ಪಾರ್ಕ್​ ನೆಯ್ಯರ್​ ಅಣೆಕಟ್ಟಿನ ಸಮೀಪದಲ್ಲಿದ್ದು, ವಿಶೇಷ ಸಫಾರಿ ಬಸ್​ನಲ್ಲಿ ಪ್ರಯಾಣ ಮಾಡುವ ಮೂಲಕ ಹುಲಿ ಮತ್ತು ಸಿಂಹಗಳನ್ನು ಪ್ರವಾಸಿಗರು ನೋಡಬಹುದು. ಪಾರ್ಕ್​ ಸುಮಾರು 1 ಎಕರೆಯಷ್ಟಿದೆ. ಇದೀಗ ಹುಲಿ ನಾಪತ್ತೆಯಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಹುಟ್ಟುಹಾಕಿದೆ. ಸ್ಥಳೀಯರ ನಿವಾಸಗಳಿಗೆ ನುಗ್ಗಬಹುದು ಎಂಬ ಭಯದ ವಾತಾವರಣವಿದೆ.

    ಪಾರ್ಕಿನ ಯಾವುದೋ ಮೂಲೆಯಲ್ಲಿ ಹುಲಿ ಅಡಗಿರಬಹುದೆಂದು ಅರಣ್ಯಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮತ್ತು ಸ್ಥಳೀಯರು ಎರಡು ಗುಂಪುಗಳಾಗಿ ಹುಲಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಡ್ರೋನ್​ ಯಂತ್ರವನ್ನು ಸಹ ಬಳಸಿಕೊಳ್ಳಲಾಗಿದೆ.

    ನಿನ್ನೆ ಹುಲಿ ಕಾಣೆಯಾಗದ ಕಾರಣ ಕತ್ತಲಲ್ಲಿ ಹುಡುಕುವುದು ಕಷ್ಟವೆಂದು ಶೋಧ ಕಾರ್ಯಾಚರಣೆಯನ್ನು ಇಂದು ಬೆಳಗ್ಗೆ ಅಧಿಕಾರಿಗಳು ಮುಂದುವರಿಸಿದ್ದಾರೆ. ಇನ್ನು ಪಾರ್ಕಿನ ಬೇಲಿ ಕೆಲವು ಭಾಗದಲ್ಲಿ ಚಿಕ್ಕದಾಗಿರುವುದರಿಂದ ಹುಲಿ ತಪ್ಪಿಸಿಕೊಳ್ಳಲು ಸುಲಭ ಆಗಬಹುದೆಂಬ ಆತಂಕವೂ ಮನೆ ಮಾಡಿದೆ. ಅದನ್ನು ಹೊರತುಪಡಿಸಿ ಹುಲಿ ಹೊರ ಹೋಗಲು ಬೇರೆ ಮಾರ್ಗಗಳು ಇಲ್ಲ ಎಂಬುದು ಅಧಿಕಾರಿಗಳ ನಿಟ್ಟುಸಿರಿಗೆ ಕಾರಣವಾಗಿದೆ. ಸದ್ಯ ಹುಡುಕಾರ ಸಾಗಿದೆ. (ಏಜೆನ್ಸೀಸ್​)

    ಕರೊನಾ ಔಷಧ ವಿತರಣೆಗೆ ಎಷ್ಟು ಸಮಯ ಬೇಕು? ಕೇಂದ್ರ ಸರ್ಕಾರದ ವರದಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts