More

    ಅರಣ್ಯಾಧಿಕಾರಿಗಳ ಕೊರಳಲ್ಲೇ ಹುಲಿಯುಗುರು?; ಕ್ರಮಕ್ಕೆ ಆಗ್ರಹಿಸಿ ದೂರು

    ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಹುಲಿಯುಗುರು ಪ್ರಕರಣ ಇದೀಗ ಅರಣ್ಯಾಧಿಕಾರಿಯೊಬ್ಬರಿಗೇ ಮುಳುವಾದ ಪ್ರಸಂಗ ನಡೆದಿದೆ. ಹುಲಿಯುಗುರನ್ನು ಧರಿಸಿಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿ ವಿರುದ್ಧವೇ ಆರೋಪ ಹೊರಿಸಿ ಕ್ರಮಕ್ಕೆ ಆಗ್ರಹಿಸಲಾಗಿದೆ.

    ವಲಯ ಅರಣ್ಯಾಧಿಕಾರಿ (ರೇಂಜ್ ಫಾರೆಸ್ಟ್ ಆಫೀಸರ್-ಆರ್​ಎಫ್​ಒ) ಸಿ.ಎನ್.ಮುನಿರಾಜ್ ಎಂಬವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಸಂಬಂಧ ವನ್ಯಜೀವಿ ಸ್ವಯಂಸೇವಕ ಬಾಬು ಎಂಬವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಎಂಬವರ ವಿರುದ್ಧ ಕೂಡ ಇದೇ ಆರೋಪ ಹೊರಿಸಲಾಗಿದೆ.

    ಇದನ್ನೂ ಓದಿ: ಬಿಎಸ್​ಎಫ್ ಪೋಸ್ಟ್​ಗಳ ಮೇಲೆ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ!

    ಹುಲಿಯುಗುರು ಪ್ರಕರಣದಲ್ಲಿ ಚಿತ್ರರಂಗ ಹಾಗೂ ರಾಜಕೀಯದ ಗಣ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆಯವರಿಗೆ ಇದೀಗ ಅರಣ್ಯಾಧಿಕಾರಿಗಳ ವಿರುದ್ಧವೇ ಹುಲಿಯುಗುರು ಆರೋಪ ಕೇಳಿಬಂದಿರುವುದು ಫಜೀತಿಗೆ ಈಡುಮಾಡಿದೆ. ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಏನು ಕ್ರಮಕೈಗೊಳ್ಳಲಿದೆ ಎಂಬ ಕುರಿತು ಜನರಲ್ಲಿ ಈಗ ಕುತೂಹಲ ಉಂಟಾಗಿದೆ.

    ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?

    ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts