More

    ಗಂಟಲು ದ್ರವ ತಪಾಸಣೆಗೆ

    ಕೋಹಳ್ಳಿ: ಕ್ವಾರಂಟೈನ್‌ನಲ್ಲಿರುವ 78 ಜನರಲ್ಲಿ 40 ಜನರ ಗಂಟಲು ದ್ರವವನ್ನು ಸ್ಯಾಂಪಲ್‌ಗೆ ತೆಗೆದುಕೊಳ್ಳಲಾಗಿದೆ. ಉಳಿದವರ ಸ್ಯಾಂಪಲ್‌ನ್ನು ಎರಡು ಮೂರು ದಿನಗಳಲ್ಲಿ ವೈದ್ಯಾಧಿಕಾರಿಗಳು ಬಂದು ತೆಗೆದುಕೊಂಡು ಹೋಗಲಿದ್ದಾರೆ. ವರದಿ ಬರುವವರೆಗೆ ಯಾರನ್ನೂ ಮನೆಗೆ ಕಳುಹಿಸಬಾರದು ಎಂದು ತಾಪಂ ಇಒ ರವೀಂದ್ರ ಬಂಗಾರೆಪ್ಪಣ್ಣವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಬುಧವಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಸರ್ಕಾರಿ ಪ್ರೌಢ ಶಾಲೆಯಲ್ಲಿ 59 ಜನ, ಬಾವಾನದಡ್ಡಿಯ ಶಾಲೆಯಲ್ಲಿ 7 ಜನ, ಕರಿಗಾರ ತೋಟದ ಶಾಲೆಯಲ್ಲಿ 12 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿರುವವರು ಅಧಿಕಾರಿಗಳ ಕಣ್ಣು ತಪ್ಪಿಸಿ ಹೋದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪಿಡಿಒ ಈರಪ್ಪ ತಮದಡ್ಡಿ, ಗ್ರಾಮಲೆಕ್ಕಾಧಿಕಾರಿ ಸಂಜೀವಕುಮಾರ ರಾಠೋಡ, ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತ ಆಲಗೂರ, ಚಿದಾನಂದ ತಳಕೇರಿ, ಹನುಮಂತ ಕನ್ನಾಳ, ಪೊಲೀಸ್ ಅಧಿಕಾರಿ ದೇವರಮನಿ, ಅಪ್ಪಾಸಾಬ ಬಾಡಗಿ, ಹನುಮಂತ ಸತ್ತಿ, ಸಿದ್ದರಾಮೇಶ್ವರ ಮೋಟಗಿ, ಪ್ರಕಾಶ ಸಿಂಗೆ, ಮಹಾಂತೇಶ ನಾಟೀಕಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts