More

    ಮೂರು ಮಸಾಲೆದೋಸೆ ಮತ್ತು ಮಸಾಲಾ ಆಮ್ಲೆಟ್!; ಹೀಗಂದಿದ್ಯಾಕೆ ಚಾಮರಿ ಅಟಪಟ್ಟು?

    ಶಾರ್ಜಾ: ‘———- ಈಸ್​ ದ ಸೀಕ್ರೆಟ್ ಆಫ್​ ಮೈ ಎನರ್ಜಿ’ ಅಂತ ಒಬ್ಬೊಬ್ಬರು ತಮ್ಮ ಶಕ್ತಿಯ ಹಿಂದಿನ ರಹಸ್ಯದ ಕುರಿತು ಒಂದೊಂದು ವಸ್ತು ಅಥವಾ ವಿಷಯವನ್ನು ಹೇಳುತ್ತಾರೆ. ಹಾಗೆಯೇ ಪಂದ್ಯವನ್ನು ಗೆಲ್ಲಿಸುವಂತೆ ಅದ್ಭುತವಾಗಿ ಆಟವಾಡಿದ ಕ್ರಿಕೆಟ್​ ಪಟುವೊಬ್ಬರು ತಮ್ಮ ಆಟದ ಹಿಂದಿನ ರಹಸ್ಯವನ್ನು ಹೊರಗೆಡಹಿದ್ದಾರೆ.

    ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಮೆನ್ಸ್ ಟಿ-20 ಚಾಲೆಂಜ್ ಕಪ್​ನಲ್ಲಿ ಶನಿವಾರ ಟ್ರೈಲ್​ ಬ್ಲೇಜರ್ಸ್ ತಂಡದ ವಿರುದ್ಧ ಅದ್ಭುತವಾಗಿ ಆಡಿ ಸೂಪರ್​ನೋವಾಸ್ ತಂಡದ ರೋಚಕ ಗೆಲುವಿಗೆ ಕಾರಣವಾದ ಚಾಮರಿ ಅಟಪಟ್ಟು, ತನ್ನ ಭರ್ಜರಿ ಹೊಡೆತದ ಹಿಂದಿನ ಶಕ್ತಿಯ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.

    ಸೂಪರ್ ನೋವಾಸ್ ತಂಡದ ಚಾಮರಿ ಅಟಪಟ್ಟು 48 ಎಸೆತಗಳಲ್ಲಿ 67 ರನ್ ಪೇರಿಸಿದ್ದರು. ಇವುಗಳಲ್ಲಿ ಐದು ಬೌಂಡರಿ ನಾಲ್ಕು ಸಿಕ್ಸರ್​ಗಳಿಸಿ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ. ಇವರ ಈ ಭರ್ಜರಿ ಆಟದಿಂದ ತಂಡ 6 ವಿಕೆಟ್​ಗೆ 146 ರನ್ ಪೇರಿಸಿತ್ತು. ಹೀಗೆ ತನ್ನ ಆಟದ ಹಿಂದಿನ ರಹಸ್ಯದ ಬಗ್ಗೆ ತಂಡದವರ ಜತೆ ಮಾತನಾಡುತ್ತ ಹೇಳಿದ ರಹಸ್ಯ, ವಿಡಿಯೋ ತುಣುಕೊಂದರಲ್ಲಿ ಬಹಿರಂಗಗೊಂಡಿದೆ.
    ‘ಮೂರು ಮಸಾಲೆದೋಸೆ ಹಾಗೂ ಮಸಾಲಾ ಆಮ್ಲೆಟ್​ ನನ್ನ ಭರ್ಜರಿ ಹೊಡೆತದ ಹಿಂದಿನ ರಹಸ್ಯ’ ಎಂದು ಚಾಮರಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts