More

    ಮೂವರು ದರೋಡೆಕೋರರ ಬಂಧನ

    ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೈಕ್ ಸವಾರರನ್ನು ತಡೆದು ಹಣ, ಮೊಬೈಲ್, ಚಿನ್ನಾಭರಣ ದರೋಡೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಿತ್ತೂರು ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ಬೈಕ್ ಇನ್ನಿತರ ವಸ್ತುಗಳನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.

    ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದ ಉಮೇಶ ಖಂಡೋಜಿ (24), ವಾಸೀಂ ಮಾಳಗಿ (24), ಸನಾವುಲ್ಲಾ ಹೊಳಿ (23) ಬಂಧಿತರು.
    ಫೆಬ್ರವರಿ ತಿಂಗಳಿನಲ್ಲಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದ ಸಮೀಪ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಬಸರಖೋಡ ಗ್ರಾಮದ ಹತ್ತಿರ ಕಿತ್ತೂರು-ಬೀಡಿ ಕ್ರಾಸ್‌ನಲ್ಲಿ ಬೈಕ್ ಸವಾರರನ್ನು ತಡೆದು ಎರಡು ಮೊಬೈಲ್, ಒಂದು ಬಂಗಾರದ ಸರ ಹಾಗೂ ಧಾರವಾಡ ತಾಲೂಕಿನ ಬೇಲೂರ ಕೈಗಾರಿಕೆ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಹೆದರಿಸಿ ಮೊಬೈಲ್, ಹಣ ದೋಚಿದ್ದರು. ಈ ಕುರಿತು ಕಿತ್ತೂರು ಮತ್ತು ಧಾರವಾಡ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

    ಈ ಕುರಿತು ತನಿಖೆ ಕೈಗೊಂಡಿದ್ದ ಕಿತ್ತೂರು ಠಾಣೆ ಪೊಲೀಸರು ಶುಕ್ರವಾರ ಮೂವರನ್ನು ಬಂಧಿಸಿ 50 ಸಾವಿರ ರೂ. ಮೌಲ್ಯದ 5 ಮೊಬೈಲ್ ಹ್ಯಾಂಡ್‌ಸೆಟ್, 40 ಸಾವಿರ ರೂ. ಮೌಲ್ಯದ 10 ಗ್ರಾಂ. ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ಮೌಲ್ಯದ ಎರಡು ಬೈಕ್ ಜಪ್ತಿ ಮಾಡಿದ್ದಾರೆ.

    ತನಿಖಾ ತಂಡದಲ್ಲಿ ಕಿತ್ತೂರು ಠಾಣೆ ಸಿಪಿಐ ಶ್ರೀಕಾಂತ ತೊಟಗಿ, ಪಿಎಸ್‌ಐ ಕುಮಾರ ಹಿತ್ತಲಮನಿ, ಆನಂದ ಕ್ಯಾರಕಟ್ಟಿ, ಎಂ.ಎಫ್. ಗಿರಿಯಾಲ, ಈಶ್ವರ ಜಿನ್ನವ್ವಗೋಳ, ಆರ್.ಎಸ್. ಶೀಲಿ, ಬಿ.ಎಸ್.ಪತ್ತಾರ, ಎಸ್.ಎಸ್. ಕಾಜಗಾರ, ಸಿ.ಎಸ್. ಬುದ್ನಿ, ಪಿ.ಪಿ. ಲಮಾಣಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts