More

    ಟಿ.ಬಿ.ಜಯಚಂದ್ರಗೆ ಬೆದರಿಕೆ ಕರೆ;ದೂರು ಕೊಡಲು ನಿರಾಕರಣೆ

    ಬೆಂಗಳೂರು : ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರಗೆ ಕಿಡಿಗೇಡಿಯೊಬ್ಬ ಬೆದರಿಕೆ ಕರೆ ಮಾಡಿದ್ದಾನೆ.

    ನಗರದ ಡಾಲರ್ಸ್‌ ಕಾಲನಿಯ ತಮ್ಮ ಮನೆಯಲ್ಲಿ ಇದ್ದಾಗ ಜಯಚಂದ್ರಗೆ ಬೆದರಿಕೆ ಕರೆ ಬಂದಿದೆ. ಈ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಜಯಚಂದ್ರ ನಿರ್ಲಕ್ಷಿೃಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸಂಜಯನಗರ ಇನ್‌ಸ್ಪೆಕ್ಟರ್ ಗುರುಪ್ರಸಾದ್, ಶಾಸಕರ ಮನೆಗೆ ತೆರಳಿ ಭೇಟಿಯಾಗಿದ್ದಾರೆ.

    ದೂರು ನೀಡಿದರೆ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಶಾಸಕರಿಗೆ ಪೊಲೀಸರು ಹೇಳಿದ್ದಾರೆ. ಆದರೆ ನನಗೆ ಪ್ರತಿ ದಿನ ಈ ರೀತಿಯ ನೂರಾರು ಕರೆಗಳು ಬರುತ್ತವೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಎಂದು ದೂರು ನೀಡಲು ಜಯಚಂದ್ರ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts