More

    ನೀರಿಗೆ ವಿಷ ಹಾಕಿ ಕೊಲ್ಲುವುದಾಗಿ ಬೆದರಿಕೆ!

    ಕುಣಿಗಲ್: ನೀರಿನ ಟ್ಯಾಂಕ್ ಕ್ಲೀನ್ ಮಾಡುವಂತೆ ಕೇಳಿದ್ದಕ್ಕೆ ನೀರಿನ ತೊಟ್ಟಿಗೆ ವಿಷ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ತಟ್ಟೆಕೆರೆ ಗ್ರಾಪಂ ನೀರಗಂಟಿ ವಿರುದ್ಧ ಕ್ರಮ ಜರುಗಿಸುವಂತೆ ಎಡೆಯೂರು ಗ್ರಾಪಂ ವ್ಯಾಪ್ತಿಯ ತಟ್ಟೆಕೆರೆ ಗ್ರಾಮಸ್ಥರು ಸೋಮವಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಟ್ಯಾಂಕ್ ಕ್ಲೀನ್ ಮಾಡದೇ ಗ್ರಾಮಸ್ಥರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದು ತಟ್ಟೆಕೆರೆ ವಾಟರ್‌ಮನ್ ಟಿ.ಜಿ.ಹರೀಶನನ್ನು ಗ್ರಾಮದ ಮಹಿಳೆಯರು ಪ್ರಶ್ನೆ ಮಾಡಿದ್ದರು. ಇದೇ ಸಿಟ್ಟಿನಿಂದ ಡಿ.3ರಂದು ಹರೀಶ್ ಜಮೀನು ಬಳಿ ಕೆಲಸ ಮಾಡುತ್ತಿದ್ದ ಗ್ರಾಮದ ಕಲಾವತಿ ಮತ್ತು ಸವಿತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಅಮೃತೂರು ಠಾಣಿಯಲ್ಲಿ ದೂರು ದಾಖಲಾಗಿತ್ತು.

    ನೀರಗಂಟಿಯ ಗುಂಡಾ ವರ್ತನೆಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಸಂಬಂಧ ಇಒ ಶಿವರಾಜಯ್ಯ ಅವರಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಪಿಡಿಒ ನಾರಾಯಣ್ ಕೂಡ ಹರೀಶ್ ರಕ್ಷಣೆಗೆ ನಿಂತಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

    ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ವಾಟರ್‌ಮನ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡದಿರುವುದು ಅನುಮಾನ ಮೂಡಿಸಿದೆ. ಗ್ರಾಮದಲ್ಲಿ ಅನಾಹುತ ಸಂಭವಿಸಿದರೆ ಘಟನೆಗೆ ನೀವೇ ನೇರ ಹೊಣೆ ಎಂದು ಇಒ ಅವರನ್ನು ತರಾಟೆ ತೆಗೆದುಕೊಂಡರು.

    ಕೂಡಲೇ ಇಒ ಶಿವರಾಜಯ್ಯ ಸಿಬ್ಬಂದಿ ಕರೆಸಿ ಜಿಪಂ ಸಿಇಒಗೆ ವಾಟರ್‌ಮನ್ ಹರೀಶ್ ವಿರುದ್ಧ ಸೂಕ್ತ ಕ್ರಮಕ್ಕೆ ಪತ್ರ ಬರೆದು ಕಳುಹಿಸಿದ ನಂತರವೇ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts