More

    ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸುವ ‘ಏಕಪಾದ ಶೀರ್ಷಾಸನ’!

    ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸುವ ಏಕಪಾದ ಶೀರ್ಷಾಸನವು ಸ್ವಲ್ಪ ಕ್ಲಿಷ್ಟವಾದ ಆಸನವಾಗಿದೆ. ಒಂದು ಕಾಲನ್ನು ತಲೆಯ ಹಿಂಬದಿಯಲ್ಲಿರಿಸುವ ಭಂಗಿ ಇದಾಗಿದೆ. ಈ ಆಸನ ಮಾಡುವುದರಿಂದ ಕಾಲಿನ ನ್ಯೂನತೆ ಮತ್ತು ನರಗಳ ದೋಷ ನಿವಾರಣೆಯಾಗುತ್ತದೆ.

    ಪ್ರಯೋಜನಗಳು: ಏಕಪಾದ ಶೀರ್ಷಾಸನವನ್ನು ಮಾಡುವುದರಿಂದ ಕತ್ತು ಮತ್ತು ಬೆನ್ನೆಲುಬು ಬಲಿಷ್ಠಗೊಳ್ಳುತ್ತದೆ. ಕಾಲಿನ ನರಗಳ ದೋಷ ನಿವಾರಣೆಯಾಗುತ್ತದೆ. ಕಾಲುಗಳ ಸಾಮಾನ್ಯ ನ್ಯೂನತೆ ಸರಿಪಡಿಸಲು ಸಹಕಾರಿ. ಹಾಗೂ ಕಾಲಿನ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ಭುಜಗಳ ಬಿಗಿತ ನಿವಾರಣೆಯಾಗಿ, ಎದೆ, ಬೆನ್ನು, ಕಿಬ್ಬೊಟ್ಟೆಗೆ ಮತ್ತು ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ. ಈ ಆಸನದ ಅಭ್ಯಾಸವು ಕೈಕಾಲುಗಳ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.

    ಇದನ್ನೂ ಓದಿ: ದೇಹಕ್ಕೆ ನವಚೈತನ್ಯ ನೀಡುವ ಏಕಪಾದ ರಾಜಕಪೋತಾಸನ!

    ಅಭ್ಯಾಸ ಕ್ರಮ: ಮೊದಲು ನೆಟ್ಟಗೆ ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಬೇಕು. ಬಲಮಂಡಿಯನ್ನು ಬಾಗಿಸಿ ಎರಡೂ ಕೈಗಳಿಂದ ಕಾಲನ್ನು ಹಿಂದಕ್ಕೆಳೆಯಬೇಕು. ನಂತರ ಉಸಿರನ್ನು ಬಿಡುತ್ತಾ ಕೈಗಳಿಂದ ಬಲಗಾಲನ್ನು ತಲೆಯ ಹಿಂಬದಿ ನೆಲೆಸಿಡಬೆಕು. ಆಮೇಲೆ ಕೈಗಳನ್ನು ಮುಗಿಯಬೇಕು. ಎಡಕಾಲು ನೇರವಾಗಿರಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ಹಾಯಾಗಿರಬೇಕು. ನಂತರ ಕಾಲನ್ನು ಕೈಗಳ ಸಹಾಯದಿಂದ ಕೆಳಗೆ ತಂದು ವಿರಮಿಸಬೇಕು. ಇದೇ ರೀತಿ ಎಡಗಾಲಿಗೂ ಅಭ್ಯಸಿಸಬೇಕು.

    ಬಹಳ ಜಾಗರೂಕತೆಯಿಂದ ಈ ಆಸನವನ್ನು ಮಾಡಬೇಕು. ಈ ಯೋಗಾಸನವನ್ನು ತಜ್ಞರ ಮಾರ್ಗದರ್ಶನದಲ್ಲಿ ಅಥವಾ ಗುರುಮುಖೇನ ಕಲಿತು ಅಭ್ಯಾಸ ಮಾಡುವುದು ಒಳ್ಳೆಯದು. ಸೊಂಟ ಅಥವಾ ಬೆನ್ನು ನೋವು ಇರುವವರು ಮಾಡಬಾರದು. ಆರಂಭದಲ್ಲಿ ಈ ಆಸನ ಕಷ್ಟವಾಗುತ್ತದೆ. ಕಾಲುಗಳಿಗೆ ಸಂಬಂಧಪಟ್ಟ ಸುಲಭ ವ್ಯಾಯಾಮಗಳನ್ನು ಮಾಡಿ ನಂತರ ಈ ಆಸನವನ್ನು ಪ್ರಯತ್ನಿಸಬೇಕು.

    ಕಾಲಿನ ನರಗಳ ಸೆಳೆತ ಮತ್ತು ಬೊಜ್ಜು ನಿವಾರಕ, ಈ ಆಸನ! ಋತುಚಕ್ರದ ದೋಷವನ್ನೂ ಪರಿಹರಿಸುತ್ತದೆ!

    Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts