More

    ಮಹಿಳೆಯರೇ, ಗಮನಿಸಿ! ಬೆನ್ನು ಬಲಗೊಳಿಸುತ್ತದೆ, ಬೊಜ್ಜು ಕರಗಿಸುತ್ತದೆ, ಈ ಯೋಗಾಸನ

    ಬಲಹೀನ ಬೆನ್ನು ಬಲಿಷ್ಠವಾಗಲು ಉತ್ತಮ ಆಸನವೆಂದರೆ ‘ಪರಿಪೂರ್ಣ ನವಾಸನ’. ದೋಣಿಯ ಆಕಾರವನ್ನು ಹೋಲುವ ಭಂಗಿಯಾದ ಕಾರಣಕ್ಕೆ ಇದನ್ನು ನೌಕಾಸನ ಎಂದೂ ಕರೆಯಲಾಗುತ್ತದೆ. ಇದು ಹೊಟ್ಟೆಯ ಭಾಗದ ಬೊಜ್ಜು ಕರಗಿಸಲೂ ಉತ್ತಮ ಆಸನವಾಗಿದೆ.

    ಪ್ರಯೋಜನ : ಬೆನ್ನಿಗೆ ಶಕ್ತಿ ಬರುತ್ತದೆ. ಹೊಟ್ಟೆ ಮತ್ತು ಸೊಂಟದ ಭಾಗ ಬಲಗೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಹೊಟ್ಟೆ ಮತ್ತು ಸೊಂಟದ ಬೊಜ್ಜು ಕರಗುತ್ತದೆ.

    ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ

    ಅಭ್ಯಾಸ ಕ್ರಮ : ಮ್ಯಾಟಿನ ಮೇಲೆ ಕಾಲು ಚಾಚಿಕೊಂಡು ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ಕೈಗಳ ಸಹಾಯ ತೆಗೆದುಕೊಳ್ಳುತ್ತಾ, ಉಸಿರಿನ ಗತಿಯೊಂದಿಗೆ ಶಿಸ್ತುಬದ್ಧವಾಗಿ ಕಾಲುಗಳನ್ನು ಮೇಲಕ್ಕೆ ಏರಿಸಿ ನೇರವಾಗಿಸಬೇಕು. ಕಾಲುಗಳು ತಲೆಯ ಮಟ್ಟಕ್ಕಿಂತ ಮೇಲಿರಬೇಕು. ಕೈಗಳನ್ನು ಮುಂದಕ್ಕೆ ಚಾಚಿ, ಇಡೀ ದೇಹವನ್ನು ಪೃಷ್ಠದ ಮೇಲೆ ಸಮತೋಲನವಾಗಿರಿಸಿ, ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ವಿಶ್ರಮಿಸಬೇಕು.

    ಉಬ್ಬಸ, ಅತಿಸಾರ ಅಥವಾ ಹೃದಯ ಸಮಸ್ಯೆ ಇರುವವರು ಈ ಆಸನವನ್ನು ಮಾಡಬಾರದು. ಹೊಟ್ಟೆಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿರುವವರು ಮಾಡಬಾರದು.

    ಕೇರಳದಿಂದ ಕರೊನಾ ಜಾಡು: 100 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟೀವ್!

    ಒಲಿಂಪಿಕ್ಸ್​ನಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts