More

    6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಭುವನೇಶ್ವರ್​: ಸಾಮಾಜಿಕ ಜಾಲತಾಣ ಇರುವುದು ಕೇವಲ ಟೈಂ ಪಾಸ್​ ಅಥವಾ ಮನರಂಜನೆಗೆ ಮಾತ್ರವಲ್ಲ, ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಧನವಿದು. ಟ್ವೀಟ್​ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಯುವತಿಯೊಬ್ಬಳು ಇದನ್ನು ಸಾಬೀತು ಪಡಿಸಿದ್ದು, ಆ ಯುವತಿಯನ್ನು “ಟ್ವಿಟರ್ ಗರ್ಲ್​”​ ಎಂದೇ ಕರೆರಯಲಾಗುತ್ತದೆ.

    ಯುವತಿಯ ಹೆಸರು ಶ್ರೀಲೇಖಾ. ಈಕೆ ಒಡಿಶಾದ ಕಿಯೋಂಜಾರ್​ ಜಿಲ್ಲೆಯ ಆನಂದಪುರ್​ ಬ್ಲಾಕ್​ ಅಡಿಯಲ್ಲಿ ಬರುವ ಬೆಲ್​​ಬಹಲಿ ಗ್ರಾಮದ ನಿವಾಸಿಗಳಾದ ಅಭಿಮನ್ಯು ಜೆನಾ ಮತ್ತು ಸಬಿತಾ ದಂಪತಿಯ ಪುತ್ರಿ. ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಲೇಖಾ, ಕೇವಲ ಕಿಯೋಂಜರ್​ ಮಾತ್ರವಲ್ಲದೆ, ಒಡಿಶಾದ ವಿವಿಧ ವಿವಿಧ ಭಾಗಗಳ ಸಮಸ್ಯೆಯನ್ನು ಪರಿಹರಿಸಿದ್ದಾರೆ.

    ಇಲ್ಲಿಯವರೆಗೆ ಶ್ರೀಲೇಖಾ 6000 ಟ್ವೀಟ್​ ಮಾಡಿದ್ದು, ಅದರಲ್ಲಿ 4000 ಟ್ವೀಟ್​ ಸಮಸ್ಯೆಗಳನ್ನು ಬಗೆಹರಿಸಿದೆ. 2020ರಲ್ಲಿ ತಮ್ಮ ಗ್ರಾಮದ ಟ್ರಾನ್ಸ್​ಫಾರ್ಮರ್​ ಸಮಸ್ಯೆಯ ಬಗ್ಗೆ ಶ್ರೀಲೇಖಾ ಟ್ವೀಟ್​ ಮಾಡಿ, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ತಕ್ಷಣವೇ ಆಕೆಯ ಸಮಸ್ಯೆ ಬಗೆಹರಿದಿತ್ತು. ಅಲ್ಲಿಂದಾಚೆಗೆ ಅನೇಕ ಸಮಸ್ಯೆಗಳ ಬಗ್ಗೆ ಶ್ರೀಲೇಖಾ ಬೆಳಕು ಚೆಲ್ಲುತ್ತಿದ್ದಾರೆ.

    ಒಡಿಶಾದ ವಿವಿಧ ಭಾಗದ ಜನರ ಸಮಸ್ಯೆಗಳನ್ನು ಅರಿತು ಶ್ರೀಲೇಖಾ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಬಡ ಜನರಿಗೆ ಪರಿಹಾರಗಳನ್ನು ನೀಡುವಂತೆ ಹಾಗೂ ರೋಗಿಗಳ ಚಿಕಿತ್ಸೆಗೆ ನೆರವಾಗುವಂತೆ, ರಕ್ತದ ವ್ಯವಸ್ಥೆ ಮಾಡುವಂತೆ, ಪ್ರಾಣಿ-ಪಕ್ಷಿಗಳ ಚಿಕಿತ್ಸೆಗೆ ಸಹಾಯ ಮಾಡುವಂತೆ, ರಸ್ತೆ ಮತ್ತು ನೀರು ಮುಂತಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಹೀಗಾಗಿ ಶ್ರೀಲೇಖಾ ಅವರು ಟ್ವಿಟರ್​ ಗರ್ಲ್​ ಅಂತಾನೇ ಫೇಮಸ್​ ಆಗಿದ್ದಾರೆ. (ಏಜೆನ್ಸೀಸ್​)

    ಕೇವಲ 26ನೇ ವಯಸ್ಸಿನಲ್ಲಿ 21 ಮದ್ವೆ ಮಾಡ್ಕೊಂಡ ಭೂಪ! ಈ ಒಂದು ಕಾರಣಕ್ಕೆ ಯುವತಿಯರ ಹಿಂದೆ ಬಿದ್ದ ಕಿರಾತಕ

    ಡಬಲ್​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ ಜನ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts