More

    ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಈ ಪಾಸ್ ಜತೆಗಿರಲೇಬೇಕು!

    ಬೆಂಗಳೂರು: ದೇಶಾದ್ಯಂತ ಕರೊನಾ ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಒಮಿಕ್ರಾನ್ ಹಾವಳಿ ಕೂಡ ಹೆಚ್ಚಾಗಿದೆ. ಈ ಮಧ್ಯೆ ಲಸಿಕೀಕರಣವನ್ನು ಸರ್ಕಾರ ಚುರುಕುಗೊಳಿಸಿದ್ದು, ಎರಡನೇ ಡೋಸ್ ಲಸಿಕೆಗೆ ಉತ್ತೇಜನ ನೀಡುವ ಜತೆಗೆ 15ರಿಂದ 18ರ ವಯೋಮಾನದವರಿಗೂ ಲಸಿಕೆ ನೀಡಲಾರಂಭಿಸಿದೆ.

    ಭಾರತದಲ್ಲಿ ಲಸಿಕೀಕರಣ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಈಗಾಗಲೇ 150 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅದಾಗ್ಯೂ ಕರೊನಾ ಪ್ರಕರಣಗಳ ಸಂಖ್ಯೆ ದಿನೇದಿನೆ ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸುವ ಜತೆಗೆ ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೆ ತರಲಾಗಿದೆ.

    ಅದರಲ್ಲೂ ಲಸಿಕೆ ಹಾಕಿಸಿಕೊಳ್ಳುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಲಸಿಕೀಕರಣ ಪ್ರಮಾಣಪತ್ರವನ್ನೂ ಪಾಸ್ ಥರ ಪರಿಗಣಿಸಲು ನಿರ್ಧರಿಸಿದೆ. ಮಾರುಕಟ್ಟೆ, ಮಾಲ್ , ಪಬ್, ಬಾರ್ ಮತ್ತು ರೆಸ್ಟೋರೆಂಟ್ ಸೇರಿ ಯಾವುದೇ ಸಾರ್ವಜನಿಕ ಸ್ಥಳಕ್ಕೆ ಪ್ರವೇಶಿಸಲು ಲಸಿಕೆ ಪ್ರಮಾಣಪತ್ರವನ್ನು ಪಾಸ್ ರೀತಿ ಪರಿಗಣಿಸಲಾಗುವುದು. ಇಲ್ಲೆಲ್ಲ ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts