More

    ಡಿಸಿಪಿಗೇ ವರ್ಗಾವಣೆ ಬೆದರಿಕೆ ಹಾಕಿದ್ದ ಖತರ್ನಾಕ್​ ವಂಚಕನ ಬಂಧನ!

    ಬೆಂಗಳೂರು: ಈತ ಡಿಸಿಪಿಗೇ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ಅಂತಹ ಖತರ್ನಾಕ್​ ವಂಚಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಖಾಲಿ ನಿವೇಶನಗಳಿಗೆ ಸೇಲ್ ಅಗ್ರಿಮೆಂಟ್ ಹಾಕಿಸಿಕೊಂಡು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಈತ ವಂಚಿಸುತ್ತಿದ್ದ. ಈ ರೀತಿಯ ಚಾಳಿಯನ್ನು ಈತ 2016ರಿಂದ ಬೆಳೆಸಿಕೊಂಡು ಬಂದಿದ್ದ. ಬಂಧಿಸಲು ಹೋದರೆ ಜನಪ್ರತಿನಿಧಿಗಳ ಕೈಯಲ್ಲಿ ಪೋನ್ ಕಾಲ್ ಮಾಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬೆಂಗಳೂರಿನಲ್ಲಿ ಇಲ್ಲಿಯ ತನಕ ಆರೋಪಿ ಲೋಕೇಶ್ ಮೇಲೆ 7 ಪ್ರಕರಣಗಳು ದಾಖಲಾಗಿವೆ.

    ಈತ, ನಕಲಿ ದಾಖಲೆಗಳ ಆಧಾರದ ಮೇಲೆ ಕೋಟಿ ಕೋಟಿ ರೂ. ಸಅಲ ಪಡೆದು ವಂಚನೆ ಮಾಡುತ್ತಿದ್ದ. ಈ ವಿಷಯ ಬೆಳಕಿಗೆ ಬಂದು ಬಂಧಿಸಲು ಹೋದ ಪೊಲೀಸರಿಗೇ ಈತ ಚಾಲೆಂಜ್ ಮಾಡಿದ್ದ. ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದ್ರೂ ಕೇಳಲ್ಲ. ನಾನ್ ಮಾಡಿರೋ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತಿರಾ? ಎಂದು ಪೊಲೀಸರಿಗೆ ಆವಾಜ್​ ಹಾಕುತ್ತಿದ್ದ.

    ‘ಅವರನ್ನೆಲ್ಲ ಏನೂ ಮಾಡಲ್ಲ.. ನಮ್ಮನ್ನ ಮಾತ್ರ ಪ್ರಶ್ನೆ ಮಾಡ್ತೀರಾ. ನಾನು ನಿಮಗೆ ವಂಚನೆ ಮಾಡಿಲ್ಲ ಬದಲಿಗೆ ಬ್ಯಾಂಕಿನವರಿಗೆ ಮಾಡಿರೋದು.ನೀವೇಕೆ ತಲೆ ಕೆಡಿಸಿಕೊಳ್ತೀರಾ?’ ಎಂದು ಲೋಕೇಶ್ ಪೊಲೀಸರನ್ನೇ ಆಟವಾಡಿಸುತ್ತಿದ್ದ.

    ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿದ್ದ ಈತ ಜೈಲಿನಿಂದ ಬಂದಮೇಲೆ ಒಂದು ಕೈ ನೋಡ್ಕೋತಿನಿ ಎಂದೂ ಹೇಳಿದ್ದಾನೆ. ‘ನನ್ನ ಬಂಧಿಸಿರೋ ಯಾರನ್ನೂ ಬಿಡಲ್ಲ. ಎಲ್ಲರನ್ನೂ ಟ್ರಾನ್ಸ್​ಫರ್ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಶೇಷಾದ್ರಿಪುರಂ ಪೊಲೀಸರ ಬಲೆಗೆ ಈ ಮಹಾ ವಂಚಕ ಬಿದ್ದಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts