More

    ಇದು ಭಾರತ ಭವಿಷ್ಯ ರೂಪಿಸುವ ಚುನಾವಣೆ

    ಶೃಂಗೇರಿ: ಈ ಬಾರಿಯ ಲೋಕಸಭಾ ಚುನಾವಣೆ ಭಾರತದ ಭವಿಷ್ಯ ರೂಪಿಸುವ ಹಾಗೂ ದೇಶದ 140 ಕೋಟಿ ಜನರ ಅರ್ಥಿಕ ಸಬಲೀಕರಣಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
    ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿ ಮಂಡಲ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಒಂದು ಕಾಲದಲ್ಲಿ ಭಾರತದ ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟ ಸರ್ಕಾರವಿತ್ತು. ಮೋದಿ ಪ್ರಧಾನಿಯಾದ ಬಳಿಕ 70 ರಾಷ್ಟ್ರಗಳಿಗೆ ಸಾಲ ಕೊಡುವಷ್ಟು ಬದಲಾವಣೆಯಾಗಿದೆ. 1962ರ ಅಸುಪಾಸಿನಲ್ಲಿ ಭಾರತ ಹಾಗೂ ಚೀನಾಕ್ಕೆ ಯುದ್ಧ ಪ್ರಾರಂಭವಾಗಿತ್ತು. ಭಾರತದ ಗಡಿಯಲ್ಲಿ ಅಂದಿನ ಸೇನೆ ಅಭಿವೃದ್ಧಿಗೆ ಅಂದಿನ ಸರ್ಕಾರ ನಿರ್ಲಕ್ಷೃವಹಿಸಿತ್ತು. ಆದರೆ ಮೋದಿ ಕಾಲದಲ್ಲಿ ಭಾರತ ಚೀನಾವನ್ನು ಸಮರ್ಥವಾಗಿ ಎದುರಿಸಿದೆ. ಬೇರೆ ಯಾವ ಯಾವ ರಾಷ್ಟ್ರಕ್ಕೂ ಅಂತಹ ಶಕ್ತಿ ಇಲ್ಲ ಎಂದು ಆಮೇರಿಕಾದ ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದರು.
    ರಾಜಕಾರಣ ಅಪೂರ್ವ ಸೇವೆ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ನನ್ನ ಭಾರತ ಬಲಿಷ್ಠವಾಗಬೇಕು ಎಂಬ ಆಶಯ ಹೊಂದಿದ ಏಕೈಕ ರಾಜಕಾರಣಿ ಮೋದಿ ಮಾತ್ರ. 370ರ ಕಾಯ್ದೆ ಇರುವ ತನಕ ಕಾಶ್ಮೀರದಲ್ಲಿ ಮೀಸಲಾತಿ ಇರಲಿಲ್ಲ. ಮೋದಿ ಸರ್ಕಾರ 370ರ ವಿಧಿ ರದ್ದು ಮಾಡಿ ಅಲ್ಲಿನ ಲಾಲ್‌ಚೌಕದಲ್ಲಿ ಭಾರತದ ತ್ರಿವರ್ಣ ಹಾರಿಸಿ ದೇಶಪ್ರೇಮ ಮೆರೆದರು ಎಂದು ತಿಳಿಸಿದರು.
    ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಚುನಾವಣಾ ಪ್ರಚಾರ ಸಮಿತಿ ಪ್ರಮುಖ ಪ್ರಮೋದ್ ಮಧ್ವರಾಜ್, ಜೆಡಿಎಸ್ ಮುಖಂಡರಾದ ದಿವಾಕರ್ ಭಟ್, ಭರತ್ ಹೆಗಡೆ ಗಿಣಕಲ್, ಜಿ.ಜಿ.ಮಂಜುನಾಥ್, ಬಿಜೆಪಿ ಮುಖಂಡರಾದ ಶೆಟ್ಟಗದ್ದೆ ರಾಮಸ್ವಾಮಿ,ಪುಣ್ಯಪಾಲ್, ನೂತನ್ ಕುಮಾರ್, ವೇಣುಗೋಪಾಲ್, ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ತಾಪಂ ಮಾಜಿ ಅಧ್ಯಕ್ಷೆ ಜಯಶೀಲ, ಜಿಪಂ ಮಾಜಿ ಸದಸ್ಯೆ ಶಿಲ್ಪಾ ರವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts