More

    ಪ್ರತಿ ಸೆಕೆಂಡ್​ಗೆ 3 ಲೆಕ್ಕಗಳನ್ನು ಬಿಡಿಸುವ 10ರ ಪೋರ!

    ನವದೆಹಲಿ: ಕೂಡುವುದು, ಕಳೆಯುವುದು, ಗುಣಿಸುವುದು ಇಲ್ಲವೇ ಭಾಗಿಸುವುದಾಗಿರಲಿ, ಯಾವುದೇ ಲೆಕ್ಕ ಮಾಡಬೇಕೆಂದರೂ ನಮಗೆ ಕೆಲವು ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ಆದರೆ, ನಡೆದಾಡುವ ಕಂಪ್ಯೂಟರ್​ ಖ್ಯಾತಿಯ ಶಕುಂತಲಾ ದೇವಿ ಅಂಥವರು ಮನಸ್ಸಿನಲ್ಲೇ ತುಂಬಾ ವೇಗವಾಗಿ ಹಲವು ಲೆಕ್ಕಗಳನ್ನು ಮಾಡಬಲ್ಲವರಾಗಿರುತ್ತಾರೆ. ಇಂಥವರ ಸಾಲಿಗೆ ಸೇರುತ್ತಾನೆ 10ರ ಈ ಪೋರ.

    ಮೂಲತಃ ಪಾಕಿಸ್ತಾನವನಾಗಿದ್ದು, ಇಂಗ್ಲೆಂಡ್​ನಲ್ಲಿ ವಾಸವಾಗಿರುವ ನದೌಬ್​ ಗಿಲ್​ ಎಂಬ 10 ವರ್ಷದ ಬಾಲಕ ಒಂದು ನಿಮಿಷದಲ್ಲಿ 196 ಲೆಕ್ಕಗಳನ್ನು ಮಾಡಿ, ಗಿನ್ನೆಸ್​ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ.

    ಇದನ್ನೂ ಓದಿ: ಆಗರ್ಭ ಶ್ರೀಮಂತನ ಏಕೈಕ ಪುತ್ರನಿಂದ ಸನ್ಯಾಸ ದೀಕ್ಷೆ ಸ್ವೀಕಾರ

    ಆನ್​ಲೈನ್​ ಗಣಿತ ಕಲಿಕೆಯ​ ಟೈಮ್ಸ್​ ಟೇಬಲ್ಸ್​ ರಾಕ್​ ಸ್ಟಾರ್ಸ್​ ಎಂಬ ಆ್ಯಪ್​ನಲ್ಲಿ ಈತ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವ 196 ಲೆಕ್ಕಗಳನ್ನು ಮಾಡಿ ವಿಶ್ವದಾಖಲೆಯ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾನೆ. ಈತನ ಈ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

    ತನ್ನ ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನದೌಬ್​ ಗಿಲ್​, ಇದೊಂದು ರೋಮಾಂಚಕಾರಿ ಅನುಭವ ನೀಡಿತು. ಗಿನ್ನೆಸ್​ ದಾಖಲೆ ಮಾಡಿದ್ದು ಸಂತಸ ಕೊಟ್ಟಿತು. ಒಂದು ರೀತಿಯಲ್ಲಿ ನನಗೆ ಎಲ್ಲವೂ ಕನಸಿನಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.

    ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts