More

    ಹಾಡಹಗಲೇ ಒಂಟಿ ಕಳ್ಳನ ಕೈಚಳಕ ; ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಖದೀಮನ ಕೃತ್ಯ

    ತುಮಕೂರು : ಒಬ್ಬಂಟಿ ಕಳ್ಳನೊಬ್ಬ ತಿಂಗಳಿನಿಂದ ನಗರವಾಸಿಗಳಲ್ಲಿ ಭಯ ಮೂಡಿಸಿದ್ದು, ಜಿಲ್ಲಾ ಪೊಲೀಸರ ಕಾರ್ಯವೈಖರಿಗೆ ನಾಗರಿಕರು ಗರಂ ಆಗಿದ್ದಾರೆ.

    ಬ್ಯಾಂಕ್‌ನಿಂದ ಹೊರಬರುವ ಗ್ರಾಹಕರು, ಪಿಗ್ಮಿ ಏಜೆಂಟ್‌ಗಳು ಹಾಗೂ ಆಭರಣ ಧರಿಸಿರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಾಬರಿ ನಡೆಸುತ್ತಿರುವ 10ಕ್ಕೂ ಹೆಚ್ಚು ಪ್ರಕರಣ ಕಳೆದೊಂದು ತಿಂಗಳಲ್ಲಿ ನಗರಠಾಣೆಯಲ್ಲಿ ದಾಖಲಾಗಿವೆ. ಪ್ರಕರಣ ದಾಖಲಾದ ನಂತರವೂ ಸಾಕಷ್ಟು ರಾಬರಿ ನಡೆಯುತ್ತಿವೆ.

    ಇದನ್ನೂ ಓದಿ: ಮಗನನ್ನು ನೋಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು, ಅದಕ್ಕೇ ಕೊಂದು ಬಿಟ್ಟೆ! ತಪ್ಪೊಪ್ಪಿಕೊಂಡ ತಾಯಿ

    ಬುಧವಾರ ಒಂದೇ ದಿನ ಮೂರು ಕಡೆಗಳಲ್ಲಿ ರಾಬರಿ ನಡೆಸಿರುವ ಪ್ರಕರಣ ತುಮಕೂರು ನಗರಠಾಣೆಯಲ್ಲಿ ದಾಖಲಾಗಿದೆ. ಜನಸಂದಣಿ ಪ್ರದೇಶದಲ್ಲಿ ಹಣ ಇಟ್ಟುಕೊಂಡು ಓಡಾಡುವ ಜನರನ್ನೇ ಗುರಿಯಾಗಿಸಿಕೊಂಡು ಬೈಕಿನಲ್ಲಿ ಆಗಮಿಸಿ ಹಣ ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಾಕಷ್ಟು ಕ್ಯಾಮರಾಗಳಲ್ಲಿ ಸೆರೆಯಾಗಿದ್ದರೂ ಆರೋಪಿ ಪೊಲೀಸರ ಕೈಗೆ ಸಿಗದಿರುವುದು ಆಶ್ಚರ್ಯ ಮೂಡಿಸಿದೆ.

    ಬುಧವಾರ 2500, 85 ಸಾವಿರ ಹಾಗೂ 1.50ಲಕ್ಷ ರೂಪಾಯಿಯನ್ನು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ತುಮಕೂರು ವಿವಿ, ಗಿರಿನಗರ, ಗುಂಚಿ ವೃತ್ತ ಮತ್ತಿತರರ ಕಡೆಗಳಲ್ಲಿ ಮಹಿಳೆಯರಿಂದ ಚಿನ್ನದ ಸರ ಕೂಡ ಕಿತ್ತುಕೊಂಡು ಪರಾರಿಯಾಗಿರುವ ದೃಶ್ಯ ಸೆರೆಯಾಗಿದೆ.

    ನಗರದೆಲ್ಲೆಡೆ ರಾಬರಿ ಪ್ರಕರಣ ನಡೆಯುತ್ತಿದ್ದರೂ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಸಂಖ್ಯೆ ಕಡಿಮೆಯಾಗುತ್ತಿದೆ, ಎಲ್ಲೆಡೆಯೂ ಒಬ್ಬನೇ ಕಳ್ಳ ರಾಬರಿ ಮಾಡುತ್ತಿದ್ದರೂ ಪೊಲೀಸರು ಬಂಧಿಸಲಾಗಿಲ್ಲ. ನಗರದಲ್ಲಿ ಕೊಲೆ, ಸಂಚಾರ ಅವ್ಯವಸ್ಥೆ ಹೆಚ್ಚಿರುವ ನಡುವೆ ಹೊಸಕಳ್ಳನ ಅವಾಂತರ ಜನರ ನೆಮ್ಮದಿ ಕೆಡಿಸಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಣ್ಮರೆಯಾಗುತ್ತಿರುವ ದೂರುಗಳು ಜಾಸ್ತಿಯಾಗುತ್ತಿವೆ.

    ಇದನ್ನೂ ಓದಿ: ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್​ ಕೊಟ್ಟಿದ್ದ ಮೊಬೈಲ್​ನಿಂದಲೇ ಬಯಲಾಯಿತು ಸತ್ಯ!

    ದೃಶ್ಯ ಸಂಗ್ರಹಿಸಿ ನೋಡುವುದಷ್ಟೇ ಪೊಲೀಸರ ಕೆಲಸ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂ. ಬಳಸಿಕೊಂಡು ನಗರದೆಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಕಚೇರಿಯಲ್ಲಿ ಹೈಟೆಕ್ ತಂತ್ರಜ್ಞಾನವಿದೆ ಎಂದು ಬೀಗುವ ತುಮಕೂರು ಜಿಲ್ಲಾ ಪೊಲೀಸರಿಗೆ ಸಾಧಾರಣ ಕಳ್ಳನನ್ನು ಬಂಧಿಸಲು ಸಾಧ್ಯವಾಗಿಲ್ಲ. ನಾಗರಿಕರು ನಿರ್ಭಯವಾಗಿ ಓಡಾಡುವ ವಾತಾವರಣ ನಿರ್ಮಿಸುವ ಹೊಣೆಗಾರಿಕೆಯನ್ನು ಪೊಲೀಸರು ಮರೆತಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗುವ ಕಳ್ಳನ ಕೈಚಳಕದ ದೃಶ್ಯ ಸಂಗ್ರಹಿಸಿ ನೋಡುವುದಷ್ಟೇ ಕೆಲಸವಾಗಿಸಿಕೊಂಡಿದ್ದಾರೆ. ಕಳವು ಪ್ರಕರಣಗಳನ್ನು ಕೂಡಲೇ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ನಗರದ ಅಭಿವೃದ್ಧಿಗೆ ತೊಡಕಾಗಲಿದೆ.

    ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ 3 ರಾಬರಿ ಪ್ರಕರಣ ದಾಖಲಾಗಿವೆ. ಕಳೆದೊಂದು ತಿಂಗಳಿನಿಂದ ಒಬ್ಬನೇ ವ್ಯಕ್ತಿ ಮೊಬೈಲ್, ಪರ್ಸ್, ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ನಗರಠಾಣೆ ಸಿಪಿಐ, ಪಿಎಸ್‌ಐ ನೇತೃತ್ವದಲ್ಲಿ ವಿಸೇಷ ತಂಡ ರಚಿಸಿದ್ದು ಕೂಡಲೇ ಆರೋಪಿಯನ್ನು ಬಂಧಿಸುತ್ತೇವೆ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.
    ಟಿ.ಜೆ.ಉದೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ

    ಇಂತಹ ತಂತ್ರಜ್ಞಾನವಿದ್ದರೂ ತಿಂಗಳಿನಿಂದ ಒಂದೇ ನಗರದಲ್ಲಿರುವ ಕಳ್ಳನನ್ನು ಹಿಡಿಯಲಾಗದ ಪೊಲೀಸರ ಕಾರ್ಯವೈಖರಿ ನಾಚಿಕೆಗೇಡು. ಮಾಸ್ಕ್, ಹೆಲ್ಮೆಟ್ ಧರಿಸದ ಅಮಾಯಕರಿಂದ ದಂಡ ವಸೂಲಿ ಮಾಡುವುದಷ್ಟೇ ಪೊಲೀಸರ ಕಾಯಕವಾಗಿದೆ. ಕೂಡಲೇ ಈ ಸಮಸ್ಯೆ ಬಗೆಹರಿಯದಿದ್ದರೆ ಮತ್ತಷ್ಟು ಅಪರಾಧ ಪ್ರಕರಣಗಳಿಗೆ ಪ್ರಚೋದನೆ ಸಿಗಲಿದೆ. ನಗರಾಭಿವೃದ್ಧಿಗೆ ತೊಡಕಾಗಲಿದೆ.
    ಟಿ.ಜೆ.ಹನುಮಂತರಾಯ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts