ಚೀನಾದಲ್ಲಿ ಮತ್ತೆ ಕರೊನಾ ಅಬ್ಬರ: ಸ್ಮಶಾನದಲ್ಲಿ ಶವಗಳ ಸಂಖ್ಯೆ ಏರಿಕೆ, ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಆರೋಗ್ಯ ತಜ್ಞ

blank

ಬೀಜಿಂಗ್​: ಕರೊನಾ ವೈರಸ್​ ನಿರ್ಬಂಧಗಳನ್ನು ಸಂಪೂರ್ಣ ಸಡಿಲಗೊಳಿಸಿದ ಬೆನ್ನಲ್ಲೇ ಕೋವಿಡ್​-19 ತವರು ಚೀನಾದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಚೀನಾ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಾಗಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಂಬುವರು ತಿಳಿಸಿದ್ದಾರೆ.

ಮುಂದಿನ 90 ದಿನಗಳಲ್ಲಿ ಚೀನಾದ ಶೇ. 60 ಕ್ಕಿಂತ ಹೆಚ್ಚು ಮತ್ತು ಭೂಮಿಯ ಜನಸಂಖ್ಯೆಯ ಶೇ. 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ ಮತ್ತು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಚೀನಾ ರಾಜ್ಯಧಾನಿ ಬೀಜಿಂಗ್‌ಲ್ಲಿ ಕೋವಿಡ್ -19 ರೋಗಿಗಳಿಗೆ ಗೊತ್ತುಪಡಿಸಿದ ಸ್ಮಶಾನವು ಇತ್ತೀಚಿಗೆ ಮೃತದೇಹಗಳಿಂದ ತುಂಬಿದೆ. ವೈರಸ್​ ಚೀನಾದ ರಾಜಧಾನಿಯ ಮೂಲಕ ವ್ಯಾಪಿಸುತ್ತಿದೆ. ದೇಶದಲ್ಲಿ ಕರೊನಾ ನಿರ್ಬಂಧಗಳ ಹಠಾತ್ ಸಡಿಲಿಕೆಯಿಂದ ಕರೊನಾ ಸ್ಫೋಟವಾಗಿದ್ದು, ಮತ್ತೊಮ್ಮೆ ಮನುಷ್ಯರು ಇದರ ದುಷ್ಪರಿಣಾಮ ಎದುರಿಸುವ ಸಾಧ್ಯತೆ ದಟ್ಟವಾಗಿದೆ.

ನವೆಂಬರ್ 19 ಮತ್ತು 23 ರ ನಡುವೆ ಚೀನಾದ ಅಧಿಕಾರಿಗಳು, ನಾಲ್ಕು ಸಾವುಗಳನ್ನು ಘೋಷಿಸಿದಾಗಿನಿಂದ ಬೀಜಿಂಗ್‌ನಲ್ಲಿ ಯಾವುದೇ ಕೋವಿಡ್ ಸಾವುಗಳು ವರದಿಯಾಗಿಲ್ಲ. ಆದರೆ, ಬೀಜಿಂಗ್​ನ ಪೂರ್ವ ಅಂಚಿನಲ್ಲಿರುವ ಡೊಂಗ್‌ಜಿಯಾವೊ ಸ್ಮಶಾನದಲ್ಲಿ ಶವಸಂಸ್ಕಾರ ಮತ್ತು ಇತರ ಅಂತ್ಯಕ್ರಿಯೆಯ ಸೇವೆಗಳ ದಿಢೀರ್​ ಜಿಗಿತಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ದೇಹಗಳು ಬರುತ್ತಿವೆ ಎಂದು ಡೊಂಗ್‌ಜಿಯಾವೊ ಸ್ಮಶಾನದ ಮಹಿಳೆಯೊಬ್ಬರು ಅಂದಾಜಿಸಿದ್ದಾರೆ. ಸಾಮಾನ್ಯ ದಿನದಲ್ಲಿ 30 ಅಥವಾ 40 ದೇಹಗಳು ಬರುತ್ತವೆ. ಆದರೆ, ಸ್ಮಶಾನದಲ್ಲಿ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ತಿಳಿಸಿದ್ದು, ಮತ್ತೊಮ್ಮೆ ಕರೊನಾ ಆತಂಕ ಸೃಷ್ಟಿಯಾಗಿದೆ. (ಏಜೆನ್ಸೀಸ್​)

ಉದ್ರೇಕಕಾರಿ ಫೋಟೋ, ವಿಡಿಯೋ ಮೂಲಕ ಯುವಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಲೇಡಿಯ ಕರಾಳ ಕತೆಯಿದು!

ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಡೈಮಂಡ್​ ಕಾರ್ಡ್​ನಲ್ಲಿರುವ ಮೂರನೇ 8 ಅನ್ನು ಪತ್ತೆ ಹಚ್ಚಿ!

ಅವತಾರ್​-2 ಸಿನಿಮಾ ನೋಡುತ್ತಿರುವಾಗಲೇ ಹೃದಯಾಘಾತ: ಥಿಯೇಟರ್​ನಲ್ಲಿ ಪ್ರೇಕ್ಷಕ ಸಾವು

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…