More

    ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷ ಭೇದ ಬೇಡ, ಶಾಸಕ ಡಾ. ಶ್ರೀನಿವಾಸಮೂರ್ತಿ ಸಲಹೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

    ನೆಲಮಂಗಲ: ಪಕ್ಷಾತೀತವಾಗಿ ಪ್ರತಿಯೊಬ್ಬ ಜನಪ್ರತಿನಿಧಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಪ್ರಗತಿ ಸಾಧ್ಯ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

    ತಾಲೂಕಿನ ಯಂಟಗಾನಹಳ್ಳಿ ಗ್ರಾಪಂನ ಹಂಚೀಪುರ ಮತ್ತು ಬಾವಿಕೆರೆಯಲ್ಲಿ ಲೋಕೋಪಯೋಗಿ ಇಲಾಖೆ ವಿಶೇಷ ಅನುದಾನದಲ್ಲಿ ಬುಧವಾರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    ನಗರಸಭೆಗೆ ಸಮೀಪವಿದ್ದರೂ ಇಂದಿಗೂ ಅನೇಕ ಹಳ್ಳಿಗಳಿಗೆ ಸಮರ್ಪಕ ರಸ್ತೆ ಸೌಲಭ್ಯವಿಲ್ಲ. ಗ್ರಾಮಸ್ಥರ ಮನವಿಯಂತೆ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಎಚ್.ಡಿ.ಕುಮಾರ್‌ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಅನುಮೋದನೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗ ಅನುದಾನ ಬಿಡುಗಡೆಯಾಗಿದೆ. ಗ್ರಾಮದ ಜನರು ಈ ಜನಪ್ರತಿನಿಧಿಗಳ ಜತೆ ಸಂಪರ್ಕವಿಟ್ಟುಕೊಂಡು ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಮಾಡಿಸಿಕೊಳ್ಳಬೇಕು ಎಂದರು.

    ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ ಗ್ರಾಪಂನ ಕೋಡಪನಹಳ್ಳಿ ಗ್ರಾಮದಿಂದ ಹಂಚೀಪುರ ಮಾರ್ಗವಾಗಿ ರಾ.ಹೆದ್ದಾರಿ 48ರವರೆಗೂ 3.5 ಕಿಮೀ ರಸ್ತೆಯನ್ನು ಸುಮಾರು 8.50 ಕೋಟಿ ರೂ. ವೆಚ್ಚದಲ್ಲಿ ಹಾಗೂ ಲೋಕೋಪಯೋಗಿ ಇಲಾಖೆಯ ವಿಶೇಷ ಅನುದಾನದಡಿ ರಾ.ಹೆದ್ದಾರಿ 48ರಿಂದ ಬಾವಿಕೆರೆ ಮಾರ್ಗದ ಸುಮಾರು 800 ಮೀಟರ್ ರಸ್ತೆ ಅಭಿವೃದ್ಧಿಯನ್ನು 1 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಪಂ ಪಿಡಿಒ ಪ್ರಶಾಂತ್ ಮಾಹಿತಿ ನೀಡಿದರು.

    ಜಿಪಂ ಸದಸ್ಯೆ ಪುಷ್ಪಾಸಂಪತ್, ತಾಪಂ ಸದಸ್ಯ ಎಂ.ರುದ್ರೇಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಉಪಾಧ್ಯಕ್ಷೆ ಡಿ.ಟಿ.ಧನಲಕ್ಷ್ಮೀ, ಸದಸ್ಯರಾದ ಮಹಂತೇಶ್, ಸಿದ್ದರಾಜು, ರಾಹುಲ್‌ಗೌಡ, ಡಿ.ಚಿಕ್ಕಣ್ಣ, ಉಮೇಶ್, ಶೋಭಾ, ಗಂಗರಾಜು, ವಿರುಪಾಕ್ಷಯ್ಯ, ಕವಿತಾ, ಟಿ.ವೆಂಕಟೇಶ್, ಡೇರಿ ಕಾರ್ಯದರ್ಶಿ ನಾಗರತ್ನಾ, ಜನನಿ ಜೈಭೀಮ್‌ಯುವಕ ಸಂಘದ ಗೌರವಾಧ್ಯಕ್ಷ ಮುನಿಯಪ್ಪ, ಸಂಚಾಲಕ ವಸಂತ್, ಖಜಾಂಚಿ ಕೃಷ್ಣಮೂರ್ತಿ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಭವಾನಿ ಶಂಕರ್, ಬೈರೇಗೌಡ, ಎಚ್.ಬಿ.ಮಂಜುನಾಥ್, ಸಂಪತ್, ರಮೇಶ್, ಮೈಲಾರಪ್ಪ, ಮುನಿರಾಜು, ನಂಜಪ್ಪ, ಲೋಕೋಪಯೋಗಿ ಇಲಾಖೆ ಎಇ ಗಂಗನರಸಿಂಹಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts