More

    ವಚನ ಸಾಹಿತ್ಯದಲ್ಲಿ ಜಾತಿಬೇಧಗಳಿಲ್ಲ

    ವಿಜಯಪುರ: ಸಕಲ ಜೀವಾತ್ಮರಿಗೆ ಲೇಸನ್ನೆಬಯಸಿದವರು ಶರಣರು. ಹೃದಯದಲ್ಲಿ ಪ್ರೀತಿಸುವ ಸಾಹಿತ್ಯ ವಚನ ಸಾಹಿತ್ಯ. ವೈಚಾರಿಕ ಕ್ರಾಂತಿಯ ಲ ಜಾತಿಬೇಧಗಳಿಲ್ಲ ಎಂದು ಜಿಲ್ಲಾ ಕಸಾಪ ದತ್ತಿ ಸಂಚಾಲಕ ಮಹಮ್ಮದ್ ಗೌಸ್ ಹವಾಲ್ದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ದತ್ತಿ ಸ್ಮರಣೆ ದಿ.ಮಹಾಂತಪ್ಪ ಮಲ್ಲಿಕಾರ್ಜುನಪ್ಪ ಹುಂಡೆಕಾರ ಮತ್ತು ದಿ ಸಾಲೇಕಪ್ಪ ಮಲ್ಲಿಕಾರ್ಜುನಪ್ಪ ಹುಂಡೇಕಾರ ಸಹೋದರರ ನೆನಪಿನ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶರಣರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದರು ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ಲಕ್ಷ್ಮಿಅವಟಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ನೀಡಿದ ಕೊಡುಗೆ ಅಪಾರವಾದದ್ದು ಮತ್ತು ವಚನ ಸಾಹಿತ್ಯ ಶ್ರೀ ಸಾಮಾನ್ಯರ ಸಾಹಿತ್ಯವಾಗಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಮಾತನಾಡಿ, ದತ್ತಿ ಕಾರ್ಯಕ್ರಮಗಳು ರಚನಾತ್ಮಕವಾಗಿ ಸಂಘಟಿಸುವುದು ಮತ್ತು ದತ್ತಿ ದಾನಿಗಳಿಗೆ ಸಂತೃಪ್ತಿ ಬರುವಂತೆ ಮಾಡುವುದು, ಹುಂಡೇಕಾರ ಸಹೋದರರ ಸೇವೆ ನಮಗೆ ಮಾರ್ಗದರ್ಶನವಾಗಿದೆ ಎಂದರು.
    ಅರವಿಂದ ಹುಂಡೇಕಾರ, ವಿಜಯಕುಮಾರ ಹುಂಡೇಕಾರ, ಸುನಂದ ಕೋರಿ ಮಾತನಾಡಿದರು. ಮಹಾದೇವಿ ಹುಂಡೇಕಾರ, ಲಿಂಗರಾಜ ಬಿರಾದಾರ, ಎ.ಎ.ಪಟೇಲ, ಕೆ.ಸುನಂದಾ, ಭಾರತಿ ಕುಂದನಗಾರ, ಐಶ್ವರ್ಯಾ ಕೋಳಾರಿ, ಶೃತಿ ಮೇಲಿನಮನಿ, ಡಾ. ಸಂಗಮೇಶ ಮೇತ್ರಿ, ಅಭಿಷೇಕ ಚಕ್ರವರ್ತಿ, ಅಶೋಕ ಕೋಳಾರಿ, ಬಸವರಾಜ ರೆಬಿನಾಳ, ರಾಜೇಸಾಬ ಶಿವನ ಗುತ್ತಿ, ಅಬ್ದಲ್ ರಜಾಕ ಮುಲ್ಲಾ, ಭಾರತಿ ಶಿವಣಗಿ, ಐ.ಪಿ.ಪಡಗಣ್ಣವರ, ಎಂ.ಎ.ಬಕ್ಷಿ, ಬಶೀರ ಮುಜಾವರ, ಅಮೈನೂದ್ದೀನ್ ಕರಜಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts