More

    ಜಿಲ್ಲೆಯಲ್ಲಿ ಖಾಲಿ ಇವೆ 185 ಬೆಡ್

    ಹಾವೇರಿ: ಜಿಲ್ಲೆಯ ಯಾವುದೇ ಆಸ್ಪತ್ರೆಗಳಿಗೆ ಕರೆ ಮಾಡಿದರೂ ಬೆಡ್ ಖಾಲಿಯಿಲ್ಲ ಎಂಬ ಆತಂಕದ ಮಾತುಗಳೇ ಎಲ್ಲೆಡೆ ಕೇಳಿಬರುತ್ತಿವೆ. ಕರೊನಾ ಸೋಂಕಿತರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು. ಎಲ್ಲಿ ಬೆಡ್ ಲಭ್ಯವಿದೆ ಎಂಬ ಗೊಂದಲ ಸೋಂಕಿತರ ಕುಟುಂಬದವರನ್ನು ಕಾಡುತ್ತಿದೆ.
    ಆದರೆ, ಜಿಲ್ಲಾಡಳಿತ ನೀಡುವ ಮಾಹಿತಿಯಲ್ಲಿ ಸದ್ಯಕ್ಕೆ ಅಂತಹ ಆತಂಕ ಜಿಲ್ಲೆಯಲ್ಲಿ ಇಲ್ಲ ಎಂಬ ಮಾಹಿತಿಯಿದೆ. ಜಿಲ್ಲಾಡಳಿತದ ಪ್ರಕಾರ ಸೋಮವಾರದಂದು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ ಖಾಲಿಯಿರುವ ಬೆಡ್​ಗಳ ಸಂಖ್ಯೆ ಬರೋಬ್ಬರಿ 185.
    ಜಿಲ್ಲೆಯಲ್ಲಿ 1 ಜಿಲ್ಲಾಸ್ಪತ್ರೆ, 6 ತಾಲೂಕಾಸ್ಪತ್ರೆ, 6 ಖಾಸಗಿ ಆಸ್ಪತ್ರೆಗಳನ್ನು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 20 ಐಸಿಯು ಬೆಡ್​ಗಳಿದ್ದು, ಸೋಮವಾರ ಅವು ಭರ್ತಿಯಾಗಿದ್ದವು. 6 ತಾಲೂಕು ಆಸ್ಪತ್ರೆಗಳಲ್ಲಿ 36 ವೆಂಟಿಲೇಟರ್ ಬೆಡ್​ಗಳಿದ್ದು ಅದರಲ್ಲಿ 5 ಭರ್ತಿಯಾಗಿದ್ದು, 31 ಬೆಡ್​ಗಳು ಖಾಲಿ ಇದ್ದವು. ಖಾಸಗಿ ಆಸ್ಪತ್ರೆಗಳಲ್ಲಿ 232 ಆಕ್ಸಿಜನ್ ಬೆಡ್​ಗಳಿದ್ದು ಅದರಲ್ಲಿ 119 ಬೆಡ್​ಗಳು ಖಾಲಿ ಇದ್ದವು.
    ಅದೆಷ್ಟೋ ರೋಗಿಗಳು ಮತ್ತವರ ಸಂಬಂಧಿಕರು ವಿವಿಧ ಆಸ್ಪತ್ರೆಗಳಿಗೆ ಕರೆ ಮಾಡಿ ಬೆಡ್ ಕೇಳುತ್ತಿದ್ದಾರೆ. ಆದರೆ, ಆಸ್ಪತ್ರೆಯಿಂದ ಬೆಡ್​ಗಳು ಭರ್ತಿಯಾಗಿವೆ ಎಂಬ ಉತ್ತರ ದೊರೆಯುತ್ತಿದೆ ಎಂಬ ದೂರು ಜನರದ್ದಾಗಿದೆ. ಈ ಸಮಸ್ಯೆ ಅರಿತ ಜಿಲ್ಲಾಡಳಿತವು ಈಗ ಬೆಡ್ ಲಭ್ಯತೆ ಕುರಿತ ಮಾಹಿತಿಯನ್ನು ದಿನವೂ ಒದಗಿಸುವ ಮೂಲಕ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಉದ್ದೇಶಿಸಿದೆ.
    ಸರ್ಕಾರಿ ಆಸ್ಪತ್ರೆಯ ಬೆಡ್​ಗಳ ವಿವರ
    ತಾಲೂಕು ಸಂಖ್ಯೆ-ಭರ್ತಿ-ಖಾಲಿ
    ಹಾವೇರಿ ಜಿಲ್ಲಾಸ್ಪತ್ರೆ 194-172-22
    ಬ್ಯಾಡಗಿ 50-45-5
    ಹಾನಗಲ್ಲ 60-58-2
    ಹಿರೇಕೆರೂರ 53-33-20
    ರಾಣೆಬೆನ್ನೂರ 77-68-9
    ಸವಣೂರ 59-54-5
    ಶಿಗ್ಗಾಂವಿ 88-85-3
    —————————-
    ಒಟ್ಟು 581-515-66

    6 ಖಾಸಗಿ ಆಸ್ಪತ್ರೆಗಳ ಬೆಡ್​ಗಳ ಲಭ್ಯತೆ: ಹಾವೇರಿಯಲ್ಲಿ 3, ರಾಣೆಬೆನ್ನೂರ 2, ಶಿಗ್ಗಾಂವಿ 1 ಆಸ್ಪತ್ರೆ ಸೇರಿ ಒಟ್ಟು 232 ಬೆಡ್​ಗಳಿದ್ದು, ಅದರಲ್ಲಿ 113 ಭರ್ತಿಯಾಗಿವೆ. 119 ಖಾಲಿಯಿವೆ. (ಜಿಲ್ಲಾಡಳಿತ ನೀಡಿದ ಸೋಮವಾರದ ಮಾಹಿತಿ.)
    ವಾರ್ ರೂಂಗೆ ಕರೆ ಮಾಡಿ: ಬೆಡ್ ಲಭ್ಯತೆಗಾಗಿ ಜಿಲ್ಲಾಡಳಿತವು ಈವರೆಗೂ ಪ್ರತ್ಯೇಕವಾಗಿ ಕಂಟ್ರೋಲ್ ರೂಂ. ಸ್ಥಾಪಿಸಿಲ್ಲ. ಆದರೂ ಅಗತ್ಯವಿದ್ದವರು ವಾರ್ ರೂಮ್ 08375-249100/101/102/103/104 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಮಾಹಿತಿ ಲಭ್ಯವಾಗಲಿದೆ.

    ಸೋಂಕಿನ ಲಕ್ಷಣ ರಹಿತರಿಗೆ ಕೇರ್ ಸೆಂಟರ್​ನಲ್ಲಿ ಆರೈಕೆ: ಸೋಂಕಿನ ಲಕ್ಷಣಗಳಿಲ್ಲದವರು ಹೋಮ್ ಐಸೋಲೇಷನ್ ಆಗಲು ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಕ್ತ ಸ್ಥಳವಕಾಶವಿಲ್ಲದೇ ಇದ್ದರೆ ಕೋವಿಡ್ ಕೇರ್ ಸೆಂಟರ್​ಗೆ ದಾಖಲಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ಕೋವಿಡ್ ಕೇರ್ ಸೆಂಟರ್​ಗಳನ್ನು ಸ್ಥಾಪಿಸಲಾಗಿದೆ.
    ಕೇರ್ ಸೆಂಟರ್ ಸ್ಥಳ ಬೆಡ್​ಗಳ ಸಂಖ್ಯೆ ಭರ್ತಿ ಖಾಲಿ
    ಬಾಡ(ಶಿಗ್ಗಾಂವಿ) 80 57 23
    ಬಸಾಪುರ(ಹಾವೇರಿ) 125 39 86
    ಬ್ಯಾಡಗಿ 100 33 67
    ದೂದಿಹಳ್ಳಿ(ಹಿರೇಕೆರೂರ) 100 61 39
    ಕಲಕೇರಿ(ಹಾನಗಲ್ಲ) 100 25 75
    ಹುಣಸಿಕಟ್ಟಿ(ರಾಣೆಬೆನ್ನೂರ) 75 60 15
    ಎಸ್​ಆರ್​ಕೆ ಲೇ ಔಟ್ ರಾಣೆಬೆನ್ನೂರ 65 54 11
    ಕಮಲಾ ನಗರ ರಾಣೆಬೆನ್ನೂರ 75 24 51
    ಸವಣೂರ 50 23 27
    ————————————
    ಒಟ್ಟು 770 376 394

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts