More

    ಗೋಕಳ್ಳತನ ತಡೆಗೆ ವಿಎಚ್​ಪಿ ಒತ್ತಾಯ

    ಸಾಗರ: ಸಾಗರದಲ್ಲಿ ನಡೆಯುತ್ತಿರುವ ಗೋಕಳ್ಳತನ ಮತ್ತು ಅಕ್ರಮ ಗೋಮಾಂಸ ಸಾಗಾಟ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಎಚ್​ಪಿ ಹಾಗೂ ಬಜರಂಗದಳದಿಂದ ಸರ್ಕಲ್ ಇನ್ಸ್​ಪೆಕ್ಟರ್ ಅಶೋಕ್​ಕುಮಾರ್ ಮೂಲಕ ಡಿವೈಎಸ್ಪಿಗೆ ಮನವಿ ಸಲ್ಲಿಸಲಾಯಿತು.

    ವಿಎಚ್​ಪಿ ಪ್ರಮುಖ ಐ.ವಿ.ಹೆಗಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಗರ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗೋಕಳ್ಳತನ ಜಾಸ್ತಿಯಾಗುತ್ತಿದೆ. ಪ್ರತಿದಿನ ರಾತ್ರಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ರಸ್ತೆ ಪಕ್ಕದಲ್ಲಿ ಮಲಗಿರುವ ಗೋವುಗಳನ್ನು ಹಿಂಸಾತ್ಮಕವಾಗಿ ಕಾರು, ಇತರೆ ವಾಹನದಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ ಎಂದು ದೂರಿದರು.

    ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವವರನ್ನು ತಡೆಯುವ ಪ್ರಯತ್ನ ನಡೆಸುವ ಗ್ರಾಮಸ್ಥರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಲಾಗುತ್ತಿದೆ. ದೊಡ್ಡದೊಂದು ಜಾಲ ಇದರ ಹಿಂದೆ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಬಜರಂಗದಳ ತಾಲೂಕು ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿ, ಶುಕ್ರವಾರ ರಾತ್ರಿ ಯಳವರಸಿ ಗ್ರಾಮದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೋವುಗಳನ್ನು ವಾಹನವೊಂದರಲ್ಲಿ ತುಂಬಿಕೊಂಡು ಹೋಗಲಾಗಿದೆ. ಪದೇಪದೆ ಇಂತಹ ಕೃತ್ಯ ನಡೆಯುತ್ತಿದ್ದು, ಗೋಮಾಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರು ಗೋಕಳ್ಳರನ್ನು ಹಿಡಿಯದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

    ರಾಘವೇಂದ್ರ ಕಾಮತ್, ಕಿರಣ್ ಗೌಡ, ಆಟೋ ಗಣೇಶ್, ಮಂಜು ಗೌಡ, ಸುನೀಲ್, ರಾಜು ಬಿ.ಮಡಿವಾಳ, ಶ್ರೀಧರ ಸಾಗರ್, ಉದಯಾದಿತ್ಯ, ಅಶೋಕ್, ಪ್ರತಿಮಾ ಜೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts